Cyber Fraud Alert
Cyber Fraud Alert: ಇತ್ತೀಚೆಗೆ ಹೊಸ ರೀತಿಯ ಸೈಬರ್ ವಂಚನೆ ಬೆಳಕಿಗೆ ಬಂದಿದೆ. ಇದರ ವಿಶೇಷತೆ ಅಂದ್ರೆ ಯಾವುದೇ ಕಾರ್ಡ್ ಅಥವಾ OTP ಇಲ್ಲದೆ ಕೂಡಾ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಳವು ಆಗಬಹುದು. ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ವೃದ್ಧೆಯೊಬ್ಬರ ಖಾತೆಯಿಂದ ಸುಮಾರು ₹10,000 ಕಳೆದುಹೋಗಿದೆ. ಆಗಿದ್ದೆಗೆ ಅಂದ್ರೆ ವಂಚಕರು ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಪ್ರಯೋಜನ ಕೊಡುತ್ತೇವೆ ಎಂದು ಮಹಿಳೆಯನ್ನು ನಂಬಿಸಿ ಆಕೆಯ ಕಣ್ಣಿನ ಸ್ಕ್ಯಾನ್ ಮಾಡಿ ಬ್ಯಾಂಕ್ ಖಾತೆಯಿಂದ ಹಣ ತೆಗೆದುಕೊಂಡಿದ್ದಾರೆ. ಹೆಚ್ಚಿನ ಬ್ಯಾಂಕ್ ಖಾತೆಗಳು ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವುದರಿಂದ ಬಯೋಮೆಟ್ರಿಕ್ ಸ್ಕ್ಯಾನ್ ಅಂದ್ರೆ ಕಣ್ಣು ಅಥವಾ ಬೆರಳು ಗುರುತನ್ನು ಬಳಸಿ ಹಣ ತೆಗೆಯುವ ವ್ಯವಸ್ಥೆಯನ್ನು ದುರುಪಯೋಗ ಮಾಡಿದ್ದಾರೆ.
ಈ ಘಟನೆ ಆಗಿದ್ದೇನು ಮತ್ತು ಕಾರ್ಡ್ ಅಥವಾ OTP ಇಲ್ಲದೆ ವಂಚಕರು ಹೇಗೆ ಬ್ಯಾಂಕ್ ಖಾತೆ ಖಾಲಿ ಮಾಡ್ತಾರೆ ಮತ್ತು ನೀವು ಹೇಗೆ ಸುರಕ್ಷಿತವಾಗಿರಬೇಕು ತಿಳಿಯಿರಿ. ಇಂದಿನ ಹೆಚ್ಚಿನ ಬ್ಯಾಂಕ್ ಖಾತೆಗಳು ವ್ಯಕ್ತಿಯ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುತ್ತವೆ. ಈ ಲಿಂಕ್‌ನೊಂದಿಗೆ ಫಿಂಗರ್‌ಪ್ರಿಂಟ್ ಅಥವಾ ಐರಿಸ್ ಸ್ಕ್ಯಾನ್‌ನಂತಹ ಬಯೋಮೆಟ್ರಿಕ್ ಸ್ಕ್ಯಾನ್ ಬಳಸಿ ಹಣವನ್ನು ಹಿಂಪಡೆಯಬಹುದು.
ಬ್ಯಾಂಕುಗಳು ಈ ವಹಿವಾಟುಗಳ ಮೇಲೆ ಮಿತಿಗಳನ್ನು ನಿಗದಿಪಡಿಸಿದರೂ ವಂಚಕರು ಈ ವ್ಯವಸ್ಥೆಯನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ವಂಚಕರು ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಪ್ರಯೋಜನ ಕೊಡುತ್ತೇವೆ ಎಂದು ಮಹಿಳೆಯನ್ನು ನಂಬಿಸಿ ಆಕೆಯ ಕಣ್ಣಿನ ಸ್ಕ್ಯಾನ್ ಮಾಡಿ ಬ್ಯಾಂಕ್ ಖಾತೆಯಿಂದ ಹಣ ತೆಗೆದುಕೊಂಡಿದ್ದಾರೆ. ಅವರು ಮಹಿಳೆಯ ಬ್ಯಾಂಕ್ ಖಾತೆಯನ್ನು ಹುಡುಕಲು ಆಕೆಯ ಆಧಾರ್ ಸಂಖ್ಯೆಯನ್ನು ಬಳಸಿದರು ಮತ್ತು ನಂತರ ಅವಳ ಅರಿವಿಲ್ಲದೆ ಹಣವನ್ನು ಅಕ್ರಮವಾಗಿ ಹಿಂಪಡೆಯಲು ಕಣ್ಣಿನ ಸ್ಕ್ಯಾನ್ ಮಾಡಿದರು.
ಆಧಾರ್ ಕಾರ್ಡ್ ಸುರಕ್ಷಿತವಾಗಿಡಿ: ನಿಮ್ಮ ಆಧಾರ್ ವಿವರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಡಿ. UIDAI ವೆಬ್‌ಸೈಟ್‌ನಲ್ಲಿ ವರ್ಚುವಲ್ ಆಧಾರ್ ಸಂಖ್ಯೆ ಬಳಸಿ.
ಬಯೋಮೆಟ್ರಿಕ್ಸ್ ಲಾಕ್ ಮಾಡಿ: ನೀವು UIDAI ವೆಬ್‌ಸೈಟ್‌ನಲ್ಲಿ ನಿಮ್ಮ ಫಿಂಗರ್‌ಪ್ರಿಂಟ್ ಮತ್ತು ಐರಿಸ್ ಸ್ಕ್ಯಾನ್ ಲಾಕ್ ಮಾಡಬಹುದು. ಅಗತ್ಯವಿದ್ದಾಗ ಮಾತ್ರ ಅನ್ಲಾಕ್ ಮಾಡಿ.
ವಂಚನೆಗಳಿಗೆ ಬಲಿಯಾಗಬೇಡಿ: ಯಾವುದೇ ಉಡುಗೊರೆಗಳು, ಬಹುಮಾನಗಳು ಅಥವಾ ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಕರೆ ಬಂದರೂ ಎಚ್ಚರಿಕೆಯಿಂದಿರಿ.
Also Read: ವಾವ್! ಬರೋಬ್ಬರಿ 15000mAh ಪವರ್ಫುಲ್ ಬ್ಯಾಟರಿ ಮತ್ತು ‘AC Phone’ ಬಿಡುಗಡೆಗೆ ಸಜ್ಜಾಗಿರುವ realme!