AI AskDisha ಚಾಟ್‌ಬಾಟ್ ಬಳಸಿಕೊಂಡು ವಾಯ್ಸ್ ಕಮಾಂಡ್ ಮೂಲಕ ರೈಲು ಟಿಕೆಟ್ ಮಾಡುವುದು ಹೇಗೆ ತಿಳಿಯಿರಿ

HIGHLIGHTS

Ai AskDisha ಚಾಟ್‌ಬಾಟ್ ಮೂಲಕ ನಿಮ್ಮ ಟಿಕೆಟ್‌ಗಳನ್ನು ಹೇಗೆ ಬುಕ್ ಮಾಡಬಹುದು ತಿಳಿಯಿರಿ.

ಭಾರತೀಯ ರೈಲ್ವೆಯಲ್ಲಿ ಪ್ರತಿದಿನ ಪ್ರಯಾಣಿಸುವವರಲ್ಲಿ ನೀವೂ ಒಬ್ಬರಾಗಿದ್ದಾರೆ ಈ ಮಾಹಿತಿ ನಿಮಗೆ ತುಂಬ ಉಪಯುಕ್ತ.

AI ಆಧಾರಿತ ಫೀಚರ್ ಬಳಸಿಕೊಂಡು ಯಾವುದೇ ತಲೆನೋವಿಲ್ಲದೆ ವಾಯ್ಸ್ ಮೂಲಕ ಟಿಕೆಟ್ ಬುಕ್ ಮಾಡುವುದು ಹೇಗೆ ತಿಳಿಯಿರಿ.

AI AskDisha ಚಾಟ್‌ಬಾಟ್ ಬಳಸಿಕೊಂಡು ವಾಯ್ಸ್ ಕಮಾಂಡ್ ಮೂಲಕ ರೈಲು ಟಿಕೆಟ್ ಮಾಡುವುದು ಹೇಗೆ ತಿಳಿಯಿರಿ

AI AskDisha: ಭಾರತೀಯ ರೈಲ್ವೆಯಲ್ಲಿ ಪ್ರತಿದಿನ ಪ್ರಯಾಣಿಸುವವರಲ್ಲಿ ನೀವೂ ಒಬ್ಬರಾಗಿದ್ದಾರೆ ಈ ಮಾಹಿತಿ ನಿಮಗೆ ತುಂಬ ಉಪಯುಕ್ತವಾಗಲಿದೆ. ಯಾಕೆಂದರೆ ಇನ್ಮೇಲೆ ನೀವು AI ಆಧಾರಿತ ಫೀಚರ್ ಬಳಸಿಕೊಂಡು ಯಾವುದೇ ತಲೆನೋವಿಲ್ಲದೆ ವಾಯ್ಸ್ ಮೂಲಕ ಸರಳವಾಗಿ ರೈಲು ಟಿಕೆಟ್ ಬುಕ್ ಮಾಡುವ ಫೀಚರ್ ಬಗ್ಗೆ ನಿಮಗೊತ್ತಾ! ಬಳಕೆದಾರರ ಅನುಭವವನ್ನು ಸುಧಾರಿಸಲು ಮತ್ತು ರೈಲ್ವೆ ಟಿಕೆಟ್‌ಗಳನ್ನು ಸುಲಭವಾಗಿ ಬುಕ್ ಮಾಡಲು ಇದು AI ಚಾಟ್‌ಬಾಟ್ ಸೇವೆಯನ್ನು ಒದಗಿಸುತ್ತದೆ. ಹಾಗಾದ್ರೆ AskDisha ಚಾಟ್‌ಬಾಟ್ ಮೂಲಕ ಟಿಕೆಟ್‌ಗಳನ್ನು ಹೇಗೆ ಬುಕ್ ಮಾಡಬಹುದು ತಿಳಿಯಿರಿ.

Digit.in Survey
✅ Thank you for completing the survey!

Also Read: Best 5G Smartphones: ಸುಮಾರು 10,000 ರೂಪಾಯಿಗೆ ಹೆಚ್ಚು ಮಾರಾಟವಾಗುತ್ತಿರುವ ಟಾಪ್ 5G ಸ್ಮಾರ್ಟ್‌ಫೋನ್‌ಗಳು!

AI AskDisha ಚಾಟ್‌ಬಾಟ್ ಮೂಲಕ ಟಿಕೆಟ್ ಬುಕ್ ಮಾಡೋದು ಹೇಗೆ?

ಮೊದಲು ನೀವು IRCTC ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗೆ ಹೋಗಬೇಕು ಅಲ್ಲಿ ನೀವು AskDISHA ಆಯ್ಕೆಯನ್ನು ಪಡೆಯುತ್ತೀರಿ.

ನಂತರ ನೀವು ಮೊದಲು “ಹಲೋ” ಅಥವಾ “ಟಿಕೆಟ್ ಬುಕ್’ ನಂತಹ ಪದಗಳೊಂದಿಗೆ ಚಾಟ್ ಅನ್ನು ಪ್ರಾರಂಭಿಸಬೇಕು.

ಇದರ ನಂತರ ನೀವು ನಿಮ್ಮ ಪ್ರಯಾಣದ ವಿವರಗಳನ್ನು ನಿಮ್ಮ ಮೂಲ ನಿಲ್ದಾಣ, ತಲುಪಬೇಕಾದ ಸ್ಥಳ, ಪ್ರಯಾಣದ ದಿನಾಂಕ ಮತ್ತು ಪ್ರಯಾಣದ ವರ್ಗ ಇತ್ಯಾದಿ.

ಚಾಟ್‌ಬಾಟ್ ನಿಮಗೆ ಲಭ್ಯವಿರುವ ರೈಲುಗಳ ಪಟ್ಟಿಯನ್ನು ತೋರಿಸುತ್ತದೆ ಜೊತೆಗೆ ಆ ರೈಲುಗಳ ಸಮಯ ಮತ್ತು ಸೀಟ್ ವರ್ಗವನ್ನು ಆರಿಸಿಕೊಳ್ಳಬೇಕು.

ಎಲ್ಲವೂ ಸರಿಯಾಗಿದ್ದರೆ ನಿಮಗೆ ಬುಕಿಂಗ್ ದೃಢೀಕರಣದೊಂದಿಗೆ UPI, Credit, Debit ಅಥವಾ Net Banking ಆಯ್ಕೆ ಆರಿಸಿ ಬುಕಿಂಗ್ ದೃಢೀಕರಣದ ನಂತರ PNR ಸಂಖ್ಯೆ ಪಡೆಯಿರಿ ಅಷ್ಟೇ.

AI AskDisha
AI AskDisha

AskDISHA ಚಾಟ್‌ಬಾಟ್ ಮೂಲಕ ರೈಲು ಟಿಕೆಟ್‌

ಬುಕಿಂಗ್ ಪೂರ್ಣಗೊಂಡ ನಂತರ ಇ-ಟಿಕೆಟ್ ಅನ್ನು ನಿಮ್ಮ ಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ ಅದನ್ನು ನೀವು ಪ್ರಯಾಣದ ಸಮಯದಲ್ಲಿ ತೋರಿಸಬಹುದು. ನಿಮ್ಮ ಪ್ರವಾಸದ ಸಮಯದಲ್ಲಿ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸಿದರೆ ನೀವು ಮತ್ತೆ AskDISHA ಅನ್ನು ಸಂಪರ್ಕಿಸಿ ನಿಮ್ಮ ಪ್ರಶ್ನೆಗಳನ್ನು ಪರಿಹರಿಸಿಕೊಳ್ಳಬಹುದು. ಈ ಸಂಪೂರ್ಣ ಪ್ರಕ್ರಿಯೆಯ ಮೂಲಕ ನೀವು AskDISHA ಚಾಟ್‌ಬಾಟ್ ಮೂಲಕ ರೈಲು ಟಿಕೆಟ್‌ಗಳನ್ನು ಸುಲಭವಾಗಿ ಬುಕ್ ಮಾಡಬಹುದು.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo