ಹೊಸ ವರ್ಷದಲ್ಲಿ ಅಮೆಜಾನ್ ತನ್ನ ಮೊದಲ 2024 ಮಾರಾಟದವನ್ನು ಗಣರಾಜ್ಯೋತ್ಸವದ ಪ್ರಯುಕ್ತ ಶುರು ಮಾಡಿದೆ. ಇದರಲ್ಲಿ ಲೇಟೆಸ್ಟ್ ಸ್ಮಾರ್ಟ್ಫೋನ್, ಸ್ಮಾರ್ಟ್ ಟಿವಿ, ಟ್ಯಾಬ್, ಕ್ಯಾಮೆರಾ ಮತ್ತು ಲ್ಯಾಪ್‌ಟಾಪ್‌ನೊಂದಿಗೆ ಇನ್ನಿತರೇ ಎಲೆಕ್ಟ್ರಾನಿಕ್ ಪ್ರಾಡಕ್ಟ್‌ಗಳ ಮೇಲೆ ಭರ್ಜರಿಯ ಡೀಲ್ ಮತ್ತು ಡಿಸ್ಕೌಂಟ್‌ಗಳನ್ನು ನೀಡುತ್ತಿದೆ. ಇದನ್ನು ಅಮೆಜಾನ್ ತನ್ನ Amazon Great Republic Day Sale 2024 ಎಂದು ಹೆಸರಿಸಿದ್ದು ಫ್ಲಿಪ್‌ಕಾರ್ಟ್‌ಗಿಂತ ಒಂದು ದಿನದ ಮುಂಚೆ 13ನೇ ಜನವರಿ 2024 ರಿಂದ ಶುರುವಾಗುವಂತೆ ಘೋಷಿಸಿದೆ.
ಅಮೆಜಾನ್ ಇಂಡಿಯಾ ಈಗಾಗಲೇ ಈ ಮಾರಾಟದ ಮೈಕ್ರೋಸೈಟ್ ಅನ್ನು ಸಹ ರಚಿಸಿದ್ದು ಒಂದಿಷ್ಟು ಡೀಲ್ ಮತ್ತು ಆಫರ್ಗಳನ್ನು ತೋರಿಸಿದೆ. Amazon ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024 ಯಾವಾಗ ಕೊನೆಗೊಳ್ಳಲಿದೆ ಎನ್ನುವ ದಿನಾಂಕವನ್ನು ಪ್ರಸ್ತುತ ಖಚಿತಪಡಿಸಿಲ್ಲ. ಈ ಮಾರಾಟದಲ್ಲಿ ರೂಡಿಯಲ್ಲಿರುವಂತೆ ಮೊದಲು ಅಮೆಜಾನ್ ಪ್ರೈಮ್ (Amazon Prime) ಚಂದಾದಾರರಿಗೆ ಮಾರಾಟ ಶುರುವಾಗುವ 12 ಘಂಟೆಗಳ ಮುಂಚಿತವಾಗಿ ವಿವಿಧ ಪ್ರಾಡಕ್ಟ್‌ಗಳ ಮೇಲೆ ಭಾರಿ ಡೀಲ್‌ಗಳು ಮತ್ತು ರಿಯಾಯಿತಿಗಳ ಲಾಭವನ್ನು ಪಡೆಯಬಹುದು.
ಇದರ ನಂತರ ಅಮೆಜಾನ್ ಸಾಮಾನ್ಯ ಗ್ರಾಹಕರಿಗೆ 13ನೇ ಜನವರಿ ಮಧ್ಯಾಹ್ನ12:00pm ನಿಂದ ಶುರುವಾಗಲಿದೆ. ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ 2024 ಗ್ರಾಹಕರು SBI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳೊಂದಿಗೆ EMI ವಹಿವಾಟಿನ ಮೇಲೆ ಹೆಚ್ಚುವರಿ ತ್ವರಿತ ಡಿಸ್ಕೌಂಟ್‌ಗಳನ್ನು ಸಹ ಪಡೆಯಬಹುದು. ಈ ಅಮೆಜಾನ್‌ನ 2024 ಮಾರಾಟವನ್ನು Redmi Note 13 5G ಜೊತೆಗೆ ಸಹ ಚಾಲಿತವಾಗಿರುವ ಕಾರಣ ಈ ಮಾರಾಟದಲ್ಲಿ Xiaomi ಪ್ರಾಡಕ್ಟ್‌ಗಳ ಮೇಲೆ ಭಾರಿ ಡೀಲ್ ಮತ್ತು ಡಿಸ್ಕೌಂಟ್‌ಗಳನ್ನು ನಿರೀಕ್ಷಿಸಬಹುದು.
ಅಮೆಜಾನ್ Great Republic Day 2024 ಸೇಲ್‌ನಲ್ಲಿ ಆಫರ್ಗಳು
ಮುಂಬರುವ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನ ಲ್ಯಾಂಡಿಂಗ್ ಪುಟವು ಸ್ಮಾರ್ಟ್‌ಫೋನ್‌ಗಳು ಮತ್ತು ಪರಿಕರಗಳನ್ನು ಶೇಕಡಾ 40% ರಷ್ಟು ರಿಯಾಯಿತಿಯೊಂದಿಗೆ ಮಾರಾಟ ಮಾಡಲಿದೆ ಎಂದು ತಿಳಿಸುತ್ತದೆ. ಇದರ ಕ್ರಮವಾಗಿ ಅಮೆಜಾನ್ ಇಂಡಿಯಾದ ಮೈಕ್ರೋಸೈಟ್ ಪ್ರಕಾರ ಲೇಟೆಸ್ಟ್ ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಇತರ ಪರಿಕರಗಳನ್ನು ಖರೀದಿಸಲು ಬಯಸುವ ಗ್ರಾಹಕರು ಈ ಪ್ರಾಡಕ್ಟ್‌ಗಳನ್ನು 75% ಪ್ರತಿಶತದಷ್ಟು ರಿಯಾಯಿತಿಯೊಂದಿಗೆ ಪಡೆಯಬಹುದು.
ಅಮೆಜಾನ್ ಈ ಲೇಟೆಸ್ಟ್ ಸ್ಮಾರ್ಟ್ ಟಿವಿಗಳು ಮತ್ತು ವಾಷಿಂಗ್ ಮೆಷಿನ್‌ಗಳು, ರೆಫ್ರಿಜರೇಟರ್‌ಗಳು ಮತ್ತು ಏರ್ ಕಂಡಿಷನರ್‌ಗಳಂತಹ ಗೃಹೋಪಯೋಗಿ ಉಪಕರಣಗಳನ್ನು ಮಾರಾಟದ ಸಮಯದಲ್ಲಿ 65% ಪ್ರತಿಶತದವರೆಗೆ ರಿಯಾಯಿತಿಯೊಂದಿಗೆ ಖರೀದಿಸಬಹುದು. ಮಾರಾಟದ ಸಮಯದಲ್ಲಿ ಈ ಪ್ರಾಡಕ್ಟ್‌ಗಳ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಲು ಗ್ರಾಹಕರು ಅರ್ಹ ಹಳೆಯ ಡಿವೈಸ್‌ಗಳು ಮತ್ತು ಉಪಕರಣಗಳನ್ನು ವಿನಿಮಯ ಮಾಡಿಕೊಳ್ಳಬಹುದು.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile