ಎಚ್ಚರ! ವಾಟ್ಸಾಪ್ ಬಳಕೆದಾರರೇ ಇನ್ಮುಂದೆ ಈ ತಪ್ಪು ಮಾಡಲೇಬೇಡಿ!

ಇವರಿಂದ Ravi Rao | ಪ್ರಕಟಿಸಲಾಗಿದೆ 18 Jan 2022
HIGHLIGHTS
  • WhatsApp ಅಧಿಕೃತ ಅಪ್ಲಿಕೇಶನ್ ಅನ್ನು ಬಳಸಲು ಬಳಕೆದಾರರಿಗೆ ಸಲಹೆ ನೀಡಲಾಗಿದೆ.

  • ಕಳೆದ ಎರಡು ತಿಂಗಳುಗಳಲ್ಲಿ ಸುಮಾರು ಎರಡೂ ಕೋಟಿಗೂ ಹೆಚ್ಚು ಭಾರತೀಯರ WhatsApp ಕಾತೆಗಳು ಬ್ಯಾನ್ ಆಗವೆ

  • ಕಡಿಮೆ ಸುರಕ್ಷಿತ ಹೋಸ್ಟ್ ಮಾಡಿದ ಸರ್ವರ್‌ಗಳ ಕಾರಣದಿಂದ GBWhatsApp ವೈರಸ್ ಹಾನಿ ಉಂಟುಮಾಡಬಹುದು.

ಎಚ್ಚರ! ವಾಟ್ಸಾಪ್ ಬಳಕೆದಾರರೇ ಇನ್ಮುಂದೆ ಈ ತಪ್ಪು ಮಾಡಲೇಬೇಡಿ!
ಎಚ್ಚರ! ವಾಟ್ಸಾಪ್ ಬಳಕೆದಾರರೇ ಇನ್ಮುಂದೆ ಈ ತಪ್ಪು ಮಾಡಲೇಬೇಡಿ!

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಜನಪ್ರಿಯ ಮೆಸೇಜಿಂಗ್ ಆಪ್ WhatsApp ನಲ್ಲಿ ಹೆಚ್ಚು ವೈಶಿಷ್ಟ್ಯಗಳನ್ನು ತರುವಂತಹ Whatsapp Plus, GBWhatsApp, YoWhatsApp, FMWhatsApp, OGWhatsApp ಮತ್ತು WhatsApp ಪ್ರೈಮ್ ಈ ರೀತಿಯ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿದ್ದರೆ ಈಗಲೇ ಡಿಲೀಟ್ ಮಾಡಿ. ಏಕೆಂದರೆ WhatsApp ತನ್ನ ಅಪ್ಲಿಕೇಶನ್‌ನ ಮಾಡೆಡ್ ಮಾಡಲಾದ ಆವೃತ್ತಿಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಬಳಕೆದಾರರನ್ನು ನಿಷೇಧಿಸುವ ಸಾಧ್ಯತೆ ಇದೆ. WhatsApp ಬಳಕೆದಾರರು ತಪ್ಪಿತಸ್ಥರೆಂದು ಕಂಡುಬಂದರೆ ಅದು ಅವರ ಶಾಶ್ವತವಾಗಿ ಖಾತೆಗಳನ್ನು ನಿಷೇಧಿಸುತ್ತದೆ ಎಂದು ತಿಳಿದುಬಂದಿದೆ.

ಅಧಿಕೃತ ಅಪ್ಲಿಕೇಶನ್ ಅನ್ನು ಬಳಸಲು ಬಳಕೆದಾರರಿಗೆ ಸಲಹೆ ನೀಡಲಾಗಿದೆ. ಜನಪ್ರಿಯ GBWhatsApp ಹಾಗೂ ಮೇಲೆ ತಿಳಿಸಿದ ಅಪ್ಲಿಕೇಶನ್ಗಳನ್ನು Google Play ಮತ್ತು Apple App Store ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿಲ್ಲ. ಏಕೆಂದರೆ ಎರಡೂ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಮತ್ತು ಆಪಲ್ ಸ್ಟೋರ್ನಲ್ಲಿ ಡೌನ್‌ಲೋಡ್ ಮಾಡುವುದನ್ನು ನಿಷೇಧಿಸಲಾಗಿದೆ. ಆದರ ಥರ್ಡ್ಪಾರ್ಟಿ ಅಪ್ಲಿಕೇಶನ್ (Third Party Apps) ಸ್ಟೋರ್‌ಗಳ ಮೂಲಕ ಇವುಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಿದೆ.

WhatsApp

ಇವುಗಳ APK ಫೈಲ್ ಬಹು ವೆಬ್‌ಸೈಟ್‌ಗಳಲ್ಲಿ ಸುಲಭವಾಗಿ ಲಭ್ಯವಿರುವುದರಿಂದ ಹಲವರು ಇಂತಹ ಆಪ್‌ಗಳನ್ನು ಡೌನ್‌ಲೋಡ್ ಮಾಡುತ್ತಿದ್ದಾರೆ. ಇವುಗಳು ಬಳಕೆದಾರರಿಗೆ ಕೆಲವು ಅತ್ಯುತ್ತಮ ವೈಶಿಷ್ಟ್ಯಗಳನ್ನು ತರುತ್ತವೆಯಾದರೂ ಅವುಗಳ ಬಳಕೆ ಹೆಚ್ಚು ರಿಸ್ಕ್ ಎಂದು ಹೆಳಲಾಗುತ್ತದೆ. WhatsApp ಸಂಸ್ಥೆ ಇಂತಹ ಆಪ್‌ಗಳನ್ನು ಬಳಸಿ ತನ್ನ ಸೇವೆಗಳಲ್ಲಿ ಮಾರ್ಪಾಡು ಮಾಡುವವರ ಖಾತೆಗಳನ್ನು ನಿಷೇಧಿಸುತ್ತಿದೆ. ಕಳೆದ ಎರಡು ತಿಂಗಳುಗಳಲ್ಲಿ ಸುಮಾರು ಎರಡೂ ಕೋಟಿಗೂ ಹೆಚ್ಚು ಭಾರತೀಯರ WhatsApp ಕಾತೆಗಳು ಬ್ಯಾನ್ ಆಗವೆ. ಅವುಗಳಲ್ಲಿ ಕೆಲವರ ಖಾತೆಗಳು ಬ್ಯಾನ್ ಆಗಲು ಈ ರೀತಿಯ ಮಾಡೆಡ್ ಅಪ್ಲಿಕೇಶನ್‌ಗಳ ಬಳಕೆ ಕೂಡ ಎಂದು ತಿಳಿದುಬಂದಿದೆ.

ಇನ್ನು ಈ ಮಾರ್ಪಡಿಸಿದ WhatsApp ಜೊತೆಗೆ ಬರುವ ಇತರ ಅಪಾಯಗಳ ಬಗ್ಗೆಯೂ ನೀವು ತಿಳಿದುಕೊಳ್ಳಬೇಕಾಗಿದ್ದು ಅವುಗಳು ಈ ಕೆಳಕಂಡಂತಿವೆ. ಏಕೆಂದರೆ ಇಂತಹ ಆಪ್‌ಗಳು ಒದಗಿಸುವ ಸುಧಾರಿತ ವೈಶಿಷ್ಟ್ಯಗಳ ಬಗ್ಗೆ ಮಾತ್ರ ನೀವು ಯೋಚಿಸಬೇಡಿ. ಅದರ ಪರಿಣಾಮಗಳ ಬಗ್ಗೆ ಯೋಚಿಸಿದರೆ ಉತ್ತಮ. ಕಡಿಮೆ ಸುರಕ್ಷಿತ ಹೋಸ್ಟ್ ಮಾಡಿದ ಸರ್ವರ್‌ಗಳ ಕಾರಣದಿಂದ GBWhatsApp ವೈರಸ್ ತರಹದ ಮಾಲ್‌ವೇರ್ ಮತ್ತು ಸ್ಪೈವೇರ್ ಅನ್ನು ಇಂಜೆಕ್ಟ್ ಮಾಡಲು ಹೆಚ್ಚು ಒಲವನ್ನು ಹೊಂದಿದೆ. ಈ ವೈರಸ್‌ಗಳು ನಿಮ್ಮ ಡೇಟಾಗೆ ಹಾನಿಯನ್ನು ಉಂಟುಮಾಡಬಹುದು. ಮತ್ತು WhatsApp ಮೋಡ್‌ಗಳಿಂದ ಉಂಟಾಗುವ ಯಾವುದೇ ಸಮಸ್ಯೆಗೆ ನೀವು ಮಾತ್ರ ಜವಾಬ್ದಾರರಾಗಿರುತ್ತೀರಿ.GBWhatsApp ನಂತಹ WhatsApp ಮೋಡ್‌ಗಳು ಕಾನೂನುಬಾಹಿರವಲ್ಲ ಆದರೆ ಅವು ಅನಧಿಕೃತವಾಗಿವೆ.

WEB TITLE

WhatsApp has recognised some similar duplicate whatsapp application

Advertisements

ಟ್ರೆಂಡಿಂಗ್ ಲೇಖನಗಳು

Advertisements

LATEST ARTICLES ಎಲ್ಲವನ್ನು ವೀಕ್ಷಿಸಿ

Advertisements
DMCA.com Protection Status