ನಿಮ್ಮ ಸ್ಮಾರ್ಟ್ಫೋನ್ ಆಕಸ್ಮಿಕವಾಗಿ ನೀರೊಳಗೆ ಬಿದ್ದರೆ ತಕ್ಷಣ ಎಲ್ಲಕ್ಕೂ ಮೊದಲು ಇದನ್ನೆ ಮಾಡಿ

ನಿಮ್ಮ ಸ್ಮಾರ್ಟ್ಫೋನ್ ಆಕಸ್ಮಿಕವಾಗಿ ನೀರೊಳಗೆ ಬಿದ್ದರೆ ತಕ್ಷಣ ಎಲ್ಲಕ್ಕೂ ಮೊದಲು ಇದನ್ನೆ ಮಾಡಿ
HIGHLIGHTS

ನೀವು ಬಳಸುತ್ತಿರುವ ಸ್ಮಾರ್ಟ್ಫೋನ್ IP65 ಸರ್ಟಿಫೈಡ್ ಆಗಿದ್ಧರು ಭಾರಿ ನೀರಿನಿಂದಾಗಿ ನಿಮ್ಮ ಕೈ ಬಿಡಬವುದು

ನಿಮ್ಮ ಸ್ಮಾರ್ಟ್ಫೋನ್ IP53 ರೇಟಿಂಗ್ ಹೊಂದಿದ್ದರೆ ನಿರ್ದಿಷ್ಟವಾಗಿ ಗಮನವಿಡಿ ಏಕೆಂದರೆ ಇದರರ್ಥ ಇದು ಭಾಗಶಃ ವಾಟರ್ ಪ್ರೂಫ್ ಆಗಿರಬವುದು ಆದರೆ ಭಾರಿ ತುಂತುರು ಹನಿಗಳ ನೀರಿನಿಂದಾಗಿ ಸೋಕಿದರೆ ಫೋನ್ ನಿಮ್ಮ ಕೈ ಬಿಡಬವುದು. ಏಕೆಂದರೆ ಈ ರೇಟಿಂಗ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಮಳೆಯಲ್ಲಿ ಬಳಸಿದರೆ ಹಾನಿಗೊಳಗಾಗಬಹುದು. ಆದರೆ IP67 ಮತ್ತು IP68 ರೇಟಿಂಗ್ ಹೊಂದಿರುವ ಫೋನ್ಗಳು ಈ ಸಮಯದಲ್ಲಿ ನೀವು ಪಡೆಯುವಷ್ಟು ಹತ್ತಿರದಲ್ಲಿವೆ. ಈ ರೇಟಿಂಗ್ ಹೊಂದಿರುವ ಫೋನ್‌ಗಳು ಹೆಚ್ಚು ಹೆಚ್ಚು ಸಾಮಾನ್ಯವಾಗುತ್ತಿವೆ. ವಿಶೇಷವಾಗಿ ಕೆಲವು ವರ್ಷಗಳಿಂದ ಹೋಲಿಸಿದರೆ ಫ್ಲ್ಯಾಗ್‌ಶಿಪ್‌ಗಳಲ್ಲಿ ಮಧ್ಯ ಶ್ರೇಣಿಯ ಫೋನ್ಗಳು ಉತ್ತಮವಾಗಿದೆ. ಈ ಕೆಳಗಿನ ವಿಧಾನ ಕೇವಲ IP67 ಮತ್ತು IP68 ಸರ್ಟಿಫೈಡ್ ಅಲ್ಲದ ಫೋನ್ಗಳಿಗೆ ಮಾತ್ರ ಅನ್ವಯಿಸುತ್ತದೆ. 

https://www.delo.si/images/slike/picture/20130711/o_fix-iphone-rice_1024.jpg

ಹಂತ 1: ನೀರಿನಿಂದ ತೆಗೆದು ಅದರಲ್ಲಿರುವ ನೀರನ್ನು ಪೂರ್ತಿಯಾಗಿ ಆದಷ್ಟು ತೆಗೆಯಿರಿ. ಕೆಲವು ಸ್ಮಾರ್ಟ್ಫೋನ್ಗಳು ವಾಟರ್ ಪ್ರೂಫ್ ಹೊದಿಕೆಯನ್ನು ಹೊಂದಿರುತ್ತವೆ. ಅದು ನೀರಿನಲ್ಲಿ ಕೆಲವು ಸೆಕೆಂಡುಗಳ ಕಾಲ ಹಾನಿಯಾಗದಂತೆ ತಡೆಯುತ್ತದೆ. 

ಹಂತ 2: ನೀರಿನಿಂದ ಅದನ್ನು ತೆಗೆದುಕೊಂಡ ತಕ್ಷಣ ಸ್ವಿಚ್ ಆಫ್ ಮಾಡಿ. ಫೋನ್ ಆಫ್ ಇದರಿಂದ ಯಾವುದೇ ಶಾರ್ಟ್ ಸರ್ಕ್ಯೂಟ್ ಆಗಿ ಫೋನಿನ ಇಂಟರ್ನಲ್ಗಳನ್ನು ಹಾನಿಯಾಗುವುದನ್ನು ತಡೆಯುತ್ತದೆ.

ಹಂತ 3: ಫೋನ್ ಸ್ವಿಚ್ ಆಫ್ ಮಾಡಿದ ನಂತರ ಫೋನ್ನಿಂದ ಸಾಧ್ಯವಾದವುಗಳನ್ನು ತೆಗೆದುಹಾಕಿ. ಅಂದ್ರೆ ಬ್ಯಾಟರಿ, ಸಿಮ್ ಕಾರ್ಡ್ಗಳು, ಮೆಮರಿ ಕಾರ್ಡ್ಗಳು. ನಂತರ ಒಣಗಿದ ಬಟ್ಟೆಯಿಂದ ಸುಲಭವಾಗಿ ಅದನ್ನು ಒರೆಸಿ ಆರಿಸಿ ಯಾವುದೇ ನೀರಿನಾಂಶ ಅಥವಾ ತೇವಾಂಶ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಿ.

ಹಂತ 4: ನಂತರ ಮುಖ್ಯವಾಗಿ ಹೆಡ್ಫೋನ್ ಜ್ಯಾಕ್ನಲ್ಲಿ, ಚಾರ್ಜಿಂಗ್ ಪೋರ್ಟಲ್ಲಿ ಮತ್ತು ಫೋನಿನ ಬಟನ್ಗಳ ಸುತ್ತಮುತ್ತ ಅಲ್ಲಾಡಿಸಿ ನಂತರ ಒಣಗಿದ ಬಟ್ಟೆಯಿಂದ ಸುಲಭವಾಗಿ ಅದನ್ನು ಒರೆಸಿ ಆರಿಸಿರಿ.

ಹಂತ 5: ಇದು ಸಾಮಾನ್ಯವಾಗಿ ಬಳಸುವ ಮತ್ತು ತಿಳಿದ ತಂತ್ರಗಳಲ್ಲಿ ಒಂದಾಗಿದೆ. ಗಾಳಿಯಾಡದ ಅಥವಾ ಝಿಪ್ಲಾಕ್ ಕವರನ್ನು ಪಡೆಯಿರಿ ಮತ್ತು ಅದರಲ್ಲಿ ಅಕ್ಕಿಯನ್ನು ತುಂಬಿಸಿ. ಅಕ್ಕಿ ಒಳಗೆ ನಿಮ್ಮ ಫೋನ್ ಇರಿಸಿ Ziplock ಗಾಳಿಯಾಡದ ಕವರ್ ಬಿಗಿಯಾಗಿ ಮುಚ್ಚಿ ಮತ್ತು ಒಣ ಸ್ಥಳದಲ್ಲಿ ಇರಿಸಿ. ಅಕ್ಕಿಯ ಬದಲು ನೀವು ಇಲ್ಲಿ ಓಟ್ ಮೀಲ್ ಅಥವಾ ಸಿಲಿಕಾ ಜೆಲ್ ಪ್ಯಾಕ್ಗಳನ್ನು ಸಹ ಪ್ರಯತ್ನಿಸಬಹುದು.

ಹಂತ 6: ಕನಿಷ್ಠ 24 ರಿಂದ 48 ಗಂಟೆಗಳವರೆಗೆ ಆ ಕವರ್ ಒಳಗಿಯೇ ಫೋನನ್ನು ಬಿಡಿ. ಇದರ ಮಧ್ಯೆ ತನ್ನನ್ ತಾನೇ ಕೆಲಸ ಮಾಡಲು ಪ್ರಾರಂಭಿಸಿದೆಯೋ ಅಥವಾ ಇಲ್ವೋ ಅಂಥ ಪರೀಕ್ಷಿಸಲು ಪ್ರಯತ್ನಿಸಬೇಡಿ. ನನ್ನ ಪ್ರಕಾರ ಇಡೀ ದಿನ ಹಾಗೆಯೇ ಬಿಟ್ಟುಬಿಡಿ. 24 ರಿಂದ 48 ಘಂಟೆಯ ನಂತರ ಎಲ್ಲಾವನ್ನು ಪುನಃ ಹಾಕಿ ಚೆಕ್ ಮಾಡಿ ನೋಡಿ. ಒಂದು ವೇಳೆ ಫೋನ್ ಒಳಗೆ ಹೆಚ್ಚು ನೀರಿನ ಹಾನಿ ಇಲ್ಲದಿದ್ದರೆ ನಿಮ್ಮ ಫೋನ್ ಆನ್ ಆಗುತ್ತದೆ.

ಸತ್ಯಾಂಶ

ಇದರ ನಂತರವೂ ಕೆಲಸ ಮಾಡದಿದ್ದರೆ ನೀರಿನಲ್ಲಿ ಮುಳುಗುವಿಕೆಗೆ ಯಾವುದೇ ಕಂಪನಿ 100% ಗ್ಯಾರಂಟಿ ನೀಡೋಲ್ಲ ಅನ್ನೋದು ನೆನಪಿನಲ್ಲಿಡಿ. ನೀರಿನಲ್ಲಿ ಬಿದ್ದ ಫೋನ್ ಮರುಪಡೆಯುವುದು ನಿಮ್ಮ ಫೋನ್ ಮತ್ತೆ ಕೆಲಸ ಮಾಡುವಲ್ಲಿ ಕೇವಲ 50% ಮಾತ್ರ ಅವಕಾಶವಿದೆ. ಅಕ್ಕಿಯ ವಿಧಾನವನ್ನು ಪ್ರಯತ್ನಿಸಿದ ನಂತರ ಫೋನ್ ಕಾರ್ಯನಿರ್ವಹಿಸದಿದ್ದಲ್ಲಿ ಅದನ್ನು ಅಧಿಕೃತ ಸೇವಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ನಿಮ್ಮ ಫೋನನ್ನು ಪೂರ್ತಿಯಾಗಿ ರಿಪೇರಿ ಮಾಡಲು ಅದಕ್ಕೆ ತಕ್ಕ ಖರ್ಚನ್ನು ನೀಡಲೇಬೇಕಾಗುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo