Samsung Galaxy S26 Ultra ಮತ್ತು Xiaomi 17 Ultra: ಖರೀದಿಗೆ ಯಾವುದು ಬೆಸ್ಟ್?
ಪ್ರಸ್ತುತ ಬ್ರಾಂಡೆಂಡ್ ಕಂಪನಿಗಳ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್ ಇದೆ. ಇತ್ತೀಚಿಗಷ್ಟೆ ಸ್ಯಾಮ್‌ಸಂಗ್ ಸಂಸ್ಥೆಯು ಬಿಡುಗಡೆ ಮಾಡಿರುವ Samsung Galaxy S26 Ultra ಮೊಬೈಲ್ ಸದ್ಯ ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಶಿಯೋಮಿ ಕಂಪನಿಯ ಇತ್ತೀಚಿಗಿನ Xiaomi 17 Ultra ಫೋನ್ ಸಹ ಆಕರ್ಷಕವಾಗಿ ಕಾಣಿಸಿಕೊಂಡಿದೆ. ಈ ಎರಡು ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳು ಫ್ಲ್ಯಾಗ್‌ಶಿಪ್ ಫೀಚರ್ಸ್ ಒಳಗೊಂಡಿದ್ದು, ಮಾರುಕಟ್ಟೆಯಲ್ಲಿ ಸದ್ದು ಮಾಡಿವೆ. ಅದಾಗ್ಯೂ, ಕೆಲವು ಭಿನ್ನತೆಗಳು ಇವೆ. ಹಾಗಾದರೆ ಶಿಯೋಮಿ 17 ಅಲ್ಟ್ರಾ vs ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾ ಇವೆರಡರಲ್ಲಿ ಖರೀದಿಗೆ ಯಾವ ಫೋನ್ ಬೆಸ್ಟ್? ಫೀಚರ್ಸ್ ಹೇಗಿವೆ ಮುಂದೆ ತಿಳಿಯೋಣ.
SurveyAlso Read : ಬಜೆಟ್ ಬೆಲೆಯ Redmi 15C 5G ಮೊಬೈಲ್ ಈಗ ಬೆಸ್ಟ್ ಆಫರ್‌ನಲ್ಲಿ ಲಭ್ಯ!
ಡಿಸ್‌ಪ್ಲೇ ಮತ್ತು ಡಿಸೈನ್ ಮಾಹಿತಿ
Samsung Galaxy S26 Ultra ಮತ್ತು Xiaomi 17 Ultra ಫೋನ್‌ಗಳು ಡಿಸ್‌ಪ್ಲೇ ನೋಡುವುದಾರೆ ಗ್ಯಾಲಕ್ಸಿ S26 ಅಲ್ಟ್ರಾ ಫೋನ್ 6.9 inch AMOLED ಡಿಸ್‌ಪ್ಲೇ ಪಡೆದಿದ್ದು, ಇದರೊಂದಿಗೆ 2608 × 1200 ಪಿಕ್ಸಲ್ ರೆಸಲ್ಯೂಶನ್ ಹೊಂದಿದೆ. ಹಾಗೆಯೇ ಶಿಯೋಮಿ 17 ಅಲ್ಟ್ರಾ 6.9 ಇಂಚಿನ LTPO AMOLED ಡಿಸ್‌ಪ್ಲೇ ಮಾದರಿಯ ಪಡೆದಿದ್ದು, ಇದರೊಂದಿಗೆ 2608 × 1200 ಪಿಕ್ಸಲ್ ರೆಸಲ್ಯೂಶನ್ ಒಳಗೊಂಡಿದೆ. ಇನ್ನು ಈ ಎರಡು ಫೋನ್‌ಗಳು 120Hz ರಿಫ್ರೆಶ್ ರೇಟ್ ಪಡೆದುಕೊಂಡಿವೆ.

ಪ್ರೊಸೆಸರ್ ಪವರ್ ಹೇಗಿದೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾ ಮತ್ತು ಶಿಯೋಮಿ 17 ಅಲ್ಟ್ರಾ ಈ ಎರಡು ಫೋನ್‌ಗಳು ಸ್ನಾಪ್‌ಡ್ರಾಗನ್ 8 ಎಲೈಟ್ ಜನ್ 5 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದುಕೊಂಡಿವೆ. ಅಲ್ಲದೇ ಈ ಮೊಬೈಲ್‌ಗಳು 12GB RAM ಮತ್ತು 16GB RAM ಆಯ್ಕೆ ಪಡೆದಿರುವ ಜೊತೆಗೆ 256GB, 512GB ಹಾಗೂ 1TB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿರುವುದು ವಿಶೇಷ. ಇನ್ನು ಗ್ಯಾಲಕ್ಸಿ S26 ಅಲ್ಟ್ರಾ Android 16 ಓಎಸ್ ಜೊತೆಗೆ One UI 8.5 ಪಡೆದಿದೆ. ಹಾಗೆಯೇ ಶಿಯೋಮಿ 17 ಅಲ್ಟ್ರಾ Android 16 ಓಎಸ್ ಜೊತೆಗೆ HyperOS 3 ಪಡೆದುಕೊಂಡಿದೆ.
ಕ್ಯಾಮೆರಾ ಸೆನ್ಸಾರ್ ಯಾವುದು
ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾ ಫೋನ್ ಹಿಂಭಾಗದಲ್ಲಿ 200MP + 50MP ಟೆಲಿಫೋಟೋ ಸೆನ್ಸಾರ್ ಪಡೆದಿದೆ. ಹಾಗೆಯೇ 50MP ಅಲ್ಟ್ರಾ ವೈಲ್ಡ್ ಸೆನ್ಸಾರ್ ಇದರೊಂದಿಗೆ 10MP ಟೆಲಿಫೋಟೋ ಲೆನ್ಸ್ ಪಡೆದಿದೆ. ಹಾಗೆಯೇ ಮುಂಭಾಗದಲ್ಲಿ 12MP ಸೆನ್ಸಾರ್ ಕ್ಯಾಮೆರಾ ಹೊಂದಿದೆ. ಇನ್ನು ಶಿಯೋಮಿ 17 ಅಲ್ಟ್ರಾ ಫೋನ್ 50MP (1-inch) + 200MP ಪೆರಿಸ್ಕೋಪ್ ಲೆನ್ಸ್ ಜೊತೆಗೆ 50MP ಅಲ್ಟ್ರಾ ವೈಲ್ಡ್ ಸೆನ್ಸಾರ್ ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ ಮುಂಭಾಗದಲ್ಲಿ 50MP ಸೆನ್ಸಾರ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಬ್ಯಾಕ್‌ಅಪ್ ಮಾಹಿತಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾ ಫೋನ್ 5000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದುಕೊಂಡಿದೆ. ಇದರೊಂದಿಗೆ 60W ವೈರ್ಡ್ ಹಾಗೂ ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಸಹ ಪಡೆದುಕೊಂಡಿದೆ. ಇನ್ನು ಶಿಯೋಮಿ 17 ಅಲ್ಟ್ರಾ ಮೊಬೈಲ್ 6000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದುಕೊಂಡಿದೆ. ಇದರ ಜೊತೆಗೆ 90W ವೈರ್ಡ್ ಹಾಗೂ ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ಕಾಣಬಹುದಾಗಿದೆ.
ಕೊನೆಯ ಮಾತು
ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾ ಹಾಗೂ ಶಿಯೋಮಿ 17 ಅಲ್ಟ್ರಾ ಈ ಎರಡು ಮೊಬೈಲ್‌ಗಳು ಜಬರ್ದಸ್ತ್ ಫೀಚರ್ಸ್ ಮೂಲಕ ಗಮನ ಸೆಳೆಯುತ್ತವೆ. ಅದಾಗ್ಯೂ, ಶಿಯೋಮಿ 17 ಅಲ್ಟ್ರಾ ಅಪ್‌ಗ್ರೆಡ್ ಕ್ಯಾಮೆರಾ, ಬಿಗ್ ಬ್ಯಾಟರಿ, ವೇಗದ ಚಾರ್ಜಿಂಗ್ ಹಾಗೂ ಅತ್ಯುತ್ತಮ ಡಿಸ್‌ಪ್ಲೇ ಮೂಲಕ ಹೆಚ್ಚಿನ ಆಕರ್ಷಣೆ ಮಾಡುತ್ತದೆ. ಹಾಗೆಯೇ ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾ ಫೋನ್ S ಪೆನ್ ಸಪೋರ್ಟ್, ಶಕ್ತಿಯುತ Galaxy AI ಟೂಲ್ ಮತ್ತು ದೀರ್ಘ ಸಾಫ್ಟ್‌ವೇರ್ ಅಪ್‌ಡೇಟ್ ಸೌಲಭ್ಯ ಅಂಶಗಳನ್ನು ಗಮನಿಸುವ ಗ್ರಾಹಕರಿಗೆ ಇದು ಅತ್ಯುತ್ತಮ ಆಯ್ಕೆ ಎನಿಸುತ್ತದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile