ಕೇವಲ 10,000 ರೂಗಳಿಗೆ Redmi A4 5G ಸ್ಮಾರ್ಟ್ಫೋನ್ ನಾಳೆ ಬಿಡುಗಡೆ! ನಿರೀಕ್ಷಿತ ಫೀಚರ್ಗಳೇನು?
Redmi A4 5G ಸ್ಮಾರ್ಟ್ಫೋನ್ ನಾಳೆ ಅಂದ್ರೆ 20ನೇ ನವೆಂಬರ್ 2024 ರಂದು ಅಧಿಕೃತವಾಗಿ ಬಿಡುಗಡೆಯಾಗಲು ಸಜ್ಜಾಗಿದೆ.
Redmi A4 5G ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾ ಮತ್ತು 5160mAh ಬ್ಯಾಟರಿಯೊಂದಿಗೆ ಪರಿಚಯಿಸುವ ನಿರೀಕ್ಷೆಗಳಿವೆ.
Redmi A4 5G ಸ್ಮಾರ್ಟ್ಫೋನ್ ಸುಮಾರು 10,000 ರೂಗಳೊಳಗೆ ಬಿಡುಗಡೆಯಾಗುವುದಾಗಿ ಕಂಪನಿ ಮಾಹಿತಿ ನೀಡಿದೆ.
ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ Xiaomi ಕಂಪನಿ ಮುಂಬರಲಿರುವ ಲೇಟೆಸ್ಟ್ Redmi A4 5G ಸ್ಮಾರ್ಟ್ಫೋನ್ ನಾಳೆ ಅಂದ್ರೆ 20ನೇ ನವೆಂಬರ್ 2024 ರಂದು ಅಧಿಕೃತವಾಗಿ ಬಿಡುಗಡೆಯಾಗಲು ಸಜ್ಜಾಗಿದೆ. ಕಂಪನಿ ಇದನ್ನು ಅತಿ ಕಡಿಮೆ ಬೆಲೆಗೆ ಬರುವ ಲೇಟೆಸ್ಟ್ 5G ಸ್ಮಾರ್ಟ್ಫೋನ್ ವಿಭಾಗದಲ್ಲಿ ಪರಿಚಯಿಸಲಿದ್ದು ಬೀಡುಗಡೆಗೂ ಮುಂಚೆ ಇದರ ಒಂದಿಷ್ಟು ಮಾಹಿತಿಯನ್ನು ಬಹಿರಂಗಪಡಿಸಿದೆ. ಈ Redmi A4 5G ಸ್ಮಾರ್ಟ್ಫೋನ್ ವಿಶೇಷಣತೆಗಳನ್ನು ನೋಡುವುದಾದರೆ 50MP ಪ್ರೈಮರಿ ಕ್ಯಾಮೆರಾ, 5160mAh ಬ್ಯಾಟರಿ ಮತ್ತು Snapdragon 4s Gen 2 ಚಿಪ್ ಖಚಿತವಾಗಿದೆ.
SurveyAlso Read: 98 ದಿನಗಳ ವ್ಯಾಲಿಡಿಟಿಯ ಈ ಜಿಯೋ ಯೋಜನೆಯಲ್ಲಿ Unlimited 5G ಡೇಟಾ ಮತ್ತು ಕರೆ ಅತಿ ಕಡಿಮೆ ಬೆಲೆಗೆ ಲಭ್ಯ!
Redmi A4 5G ನಿರೀಕ್ಷಿತ ಬೆಲೆ ಮತ್ತು ಆಫರ್ಗಳು
ಈ ಮುಂಬರಲಿರುವ Redmi A4 5G ಸ್ಮಾರ್ಟ್ಫೋನ್ ಪ್ರಸ್ತುತ ಈಗಾಗಲೇ ನಡೆದ IMC 2024 ಕಾರ್ಯಕ್ರಮದಲ್ಲಿ ಇದರ ಲುಕ್ ಡಿಸೈನಿಂಗ್ ಮತ್ತು ಅನ್ಬಾಕ್ಸ್ ಜೊತೆಗೆ ಸುಮಾರು 10,000 ರೂಗಳೊಳಗೆ ಬಿಡುಗಡೆಯಾಗುವುದಾಗಿ ಕಂಪನಿ ಮಾಹಿತಿ ನೀಡಿದೆ. ಆದರೆ ಈಗ ಕೇವಲ ಅಧಿಕೃತ ಬೆಲೆ ಮತ್ತು ಆಫರ್ಗಳೇನು ಎನ್ನುವುದನ್ನು ನೋಡಲು ಕಾಯಬೇಕಿದೆ. ಯಾಕೆಂದರೆ Redmi A4 5G ಸ್ಮಾರ್ಟ್ಫೋನ್ ಹೊಂದಿರುವ ಸರಿಸುಮಾರು ಎಲ್ಲ ಫೀಚರ್ ಮತ್ತು ವಿಶೇಷಣಗಳನ್ನು ಸಹ ಕಂಪನಿ ಈಗಾಗಲೇ ಅಮೆಜಾನ್ ಮೈಕ್ರೋ ಸೈಟ್ ಪುಟವನ್ನು ರಚಿಸಿ ಇದರ ಮಾಹಿತಿಯನ್ನು ಪೋಸ್ಟ್ ಮಾಡಿದೆ.

ಈ Redmi A4 5G ಸ್ಮಾರ್ಟ್ಫೋನ್ ಹೊಂದಿರುವ ಫೀಚರ್ ಆಧಾರದ ಮೇರೆಗೆ ಫೋನ್ ಒಟ್ಟು ಎರಡು ರೂಪಾಂತರದಲ್ಲಿ ನಿರೀಕ್ಷಿಸಲಾಗಿದ್ದು ಮೊದಲನೇಯದು 4GB ಮತ್ತು 64GB ಸ್ಟೋರೇಜ್ ಸುಮಾರು 8,499 ರೂಗಳಿಗೆ ಮತ್ತೊಂದು 6GB ಮತ್ತು 128GB ಸ್ಟೋರೇಜ್ ಅನ್ನು ಸುಮಾರು 9,499 ರೂಗಳಿಗೆ ನಿರೀಕ್ಷಿಸಲಾಗಿದೆ. ಅಲ್ಲದೆ ಕಂಪನಿ ಇದರ ಮೇಲೆ ಲಿಮಿಟೆಡ್ ಸಮಯದವರೆಗಿನ ಬಿಡುಗಡೆಯ ಆಫರ್ ಮತ್ತು ಬ್ಯಾಂಕ್ ಆಫರ್ ಸಹ ನೀಡುವುದಾಗಿ ನಿರೀಕ್ಷಿಸಲಾಗಿದೆ.
Redmi A4 5G ನಿರೀಕ್ಷಿತ ಫೀಚರ್ಗಳೇನು?
ಕೊನೆಯದಾಗಿ Redmi A4 5G ಸ್ಮಾರ್ಟ್ಫೋನ್ ನಿರೀಕ್ಷಿತ ಫೀಚರ್ ಮತ್ತು ವಿಶೇಷಣಗಳ ಬಗ್ಗೆ ಮಾತನಾಡುವದಾದರೆ ಫೋನ್ 90Hz ರಿಫ್ರೆಶ್ ದರದೊಂದಿಗೆ 6.7 ಇಂಚಿನ HD+ IPS LCD ಡಿಸ್ಪ್ಲೇಯನ್ನು ಹೊಂದುವ ನಿರೀಕ್ಷೆಯಿದೆ. ಅಲ್ಲದೆ Redmi A4 5G ಸ್ಮಾರ್ಟ್ಫೋನ್ ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ ಫೋನ್ 50MP ಪ್ರೈಮರಿ ಸೆನ್ಸರ್ ಜೊತೆಗೆ ಡುಯಲ್ ಕ್ಯಾಮೆರಾ ಸೆಟಪ್ ಅನ್ನು ಹಿಂಭಾಗದಲ್ಲಿ f/1.8 ಅಪರ್ಚರ್ನೊಂದಿಗೆ ಬರಲಿದ್ದು ಇದರ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಡಿಸ್ಪ್ಲೇಯಲ್ಲಿ 8MP ಶೂಟರ್ ಅನ್ನು ನಿರೀಕ್ಷಿಸಲಾಗಿದೆ.
Big screen, stunning scenes! 🎬
— Redmi India (@RedmiIndia) November 18, 2024
Experience seamless scrolling and immersive streaming with the magic of #RedmiA4 5G.
Ab #IndiaKarega5G.
Launching on 20.11.2024.
Know more: https://t.co/WJnzQ4CgSA pic.twitter.com/zfbEzdf43W
Redmi A4 5G ಸ್ಮಾರ್ಟ್ಫೋನ್ ಬ್ಯಾಟರಿಯು 18W ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲದೊಂದಿಗೆ 5160mAh ಬ್ಯಾಟರಿ ಮತ್ತು ಡಿಸೆಂಟ್ ಕಾರ್ಯಕ್ಷಮತೆಯ Snapdragon 4s Gen 2 ಚಿಪ್ ಅನ್ನು ಈಗಾಗಲೇ ಕಂಪನಿ ಖಚಿತವಾಗಿದೆ. ಅಲ್ಲದೆ ಈ ಮುಂಬರುವ Redmi ಫೋನ್ ಹೈಪರ್ಓಎಸ್ 1.0 ಸ್ಕಿನ್ನೊಂದಿಗೆ ಆಂಡ್ರಾಯ್ಡ್ 14 ನಲ್ಲಿ ರನ್ ಆಗುವ ನಿರೀಕ್ಷೆಯಿದೆ. ಇದರಲ್ಲಿ ಭದ್ರತೆಗಾಗಿ ಫೋನ್ ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸರ್ ಅನ್ನು ಸಹ ನಿರೀಕ್ಷಿಸಲಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile