ಈಗ ನೀವು UPI ಅಪ್ಲಿಕೇಶನ್‌ನಿಂದ ಬ್ಯಾಂಕ್ ಖಾತೆಗಳನ್ನು ನಿಷ್ಕ್ರಿಯಗೊಳಿಸುವುದು ಹೇಗೆ? ಎಂದು ಯೋಚಿಸುತ್ತಿದ್ದರೆ ಈ ಸರಳ ಹಂತಗಳನ್ನು ಅನುಸರಿಸಿ! UPI ಅಪ್ಲಿಕೇಶನ್ ಅನ್ನು ಬಳಸದಿರುವುದು ಉತ್ತಮ ಮಾರ್ಗವೇ ಸರಿ ಆದರೆ ಒಂದು ವೇಳೆ ನಿಮ್ಮ ಸ್ಮಾರ್ಟ್‌ಫೋನ್ ಯಾರಾದರೂ ಕದ್ದರೆ ಅಥವಾ ನಿಮ್ಮಿಂದ ಕಳೆದುಹೋದರೆ ನೀವು ಭಾರೀ ನಷ್ಟವನ್ನು ಎದುರಿಸಬೇಕಾಗುತ್ತದೆ. ಆದರೂ ಸಮಯ ಕಳೆದಂತೆ ಪುನಃ ಎಲ್ಲವನ್ನು ಮೊದಲಿನಂತೆ ಪಡೆಯಬವುದು. ಆದರೂ ಈ ನಷ್ಟ ಅಥವಾ ತಲೆನೋವನ್ನು ತಪ್ಪಿಸಲು UPI ಖಾತೆಯನ್ನು ನಿಷ್ಕ್ರಿಯಗೊಳಿಸುವುದು ಹೇಗೆ ಎಂದು ತಿಳಿಯಿರಿ. ಈಗ ಅಲ್ಲದ್ದಿದರು ಬೇಕಾದಾಗ ಈ ಮಾಹಿತಿ ನಿಮಗೆ ಹೆಚ್ಚು ಅನುಕೂಲವಾಗಲಿದೆ. ಮಾಹಿತಿ ಇಷ್ಟವಾದರೆ ತಿಳಿಯದವರೊಂದಿಗೆ ಶೇರ್ ಮಾಡಿಕೊಳ್ಳಿ.
Surveyಬ್ಯಾಂಕ್ಗಳ ಮೂಲಕವೂ UPI ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು
ನೀವು ಬ್ಯಾಂಕ್ ಶಾಖೆಯಿಂದ ಬ್ಯಾಂಕ್ ಖಾತೆಯನ್ನು ನಿಷ್ಕ್ರಿಯಗೊಳಿಸಲು ಬಯಸಿದರೆ ನೀವು ಬ್ಯಾಂಕ್‌ಗೆ ಭೇಟಿ ನೀಡಬೇಕು. ನೀವು ಬ್ಯಾಂಕ್‌ಗೆ ಹೋಗಿ UPI ಖಾತೆಯನ್ನು ನಿಷ್ಕ್ರಿಯಗೊಳಿಸಲು ವಿನಂತಿಯನ್ನು ನಮೂದಿಸಬೇಕು. ಶಾಖೆಗೆ ಭೇಟಿ ನೀಡುವ ಮೂಲಕ ಖಾತೆಯನ್ನು ನಿಷ್ಕ್ರಿಯಗೊಳಿಸಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು ಮತ್ತು ಈ ಸಮಯದಲ್ಲಿ ಯಾರಾದರೂ ನಿಮ್ಮೊಂದಿಗೆ ವಂಚನೆ ಮಾಡಬಹುದು.
BHIM ಅಪ್ಲಿಕೇಶನ್‌ನೊಂದಿಗೆ UPI ನಿಷ್ಕ್ರಿಯಗೊಳಿಸುವುದು ಹೇಗೆ?
BHIM ಆ್ಯಪ್ ಅನ್ನು ನೋಂದಣಿ ರದ್ದು ಮಾಡುವುದು ಹೇಗೆ ಮೊದಲು BHIM ಆಪ್ ಅನ್ನು ತೆರೆಯಿರಿ. ಅದರ ನಂತರ ಪಾಸ್ಕೋಡ್ ಅನ್ನು ನಮೂದಿಸಬೇಕು. ನಂತರ ಪ್ರೊಫೈಲ್ ಆಯ್ಕೆಯನ್ನು ಟ್ಯಾಪ್ ಮಾಡಿ. ನಂತರ ಬಲ ಮೂಲೆಯಲ್ಲಿ 3 ಲಂಬ ಚುಕ್ಕೆಗಳ ನಂತರ ಪ್ರೊಫೈಲ್ ಪುಟದ ಮೇಲೆ ಕ್ಲಿಕ್ ಮಾಡಿ. ನಂತರ ಸೆಟ್ಟಿಂಗ್‌ಗಳ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ನೋಂದಣಿ ರದ್ದುಮಾಡಿ. ನಂತರ ನೋಂದಣಿ ರದ್ದುಗೊಂಡ ಸಂದೇಶ ಬರುತ್ತದೆ. ಅದರ ನಂತರ Proceed ಮೇಲೆ ಕ್ಲಿಕ್ ಮಾಡಿ. ಈ ರೀತಿಯಾಗಿ ಆ್ಯಪ್ BHIM ಅಪ್ಲಿಕೇಶನ್‌ನಿಂದ ಡಿ-ರಿಜಿಸ್ಟರ್ ಮಾಡಲು ಸಾಧ್ಯವಾಗುತ್ತದೆ.
Paytm ಅಪ್ಲಿಕೇಶನ್‌ನೊಂದಿಗೆ UPI ನಿಷ್ಕ್ರಿಯಗೊಳಿಸುವುದು ಹೇಗೆ?
ಮೊದಲಿಗೆ Paytm ಡ್ಯಾಶ್‌ಬೋರ್ಡ್ ತೆರೆಯಿರಿ. ಇದರ ನಂತರ ನೀವು BHIM UPI ID @paytm ಅನ್ನು ನೋಡುತ್ತೀರಿ ಮತ್ತು ಪ್ರಾಥಮಿಕ ಖಾತೆಯೊಂದಿಗೆ ಖಾತೆಯನ್ನು ಉಳಿಸಿ. ನಂತರ ಮೇಲಿನ ಬಲಭಾಗದಲ್ಲಿ ಕಂಡುಬರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ. ಅದರ ನಂತರ ಡಿರೆಜಿಸ್ಟರ್ಡ್ UPI ಪ್ರೊಫೈಲ್ ಆಯ್ಕೆಯನ್ನು ಕ್ಲಿಕ್ ಮಾಡಿ. ಇದರ ನಂತರ ಒಂದು ಸಂದೇಶ ಬರುತ್ತದೆ. ನಂತರ ನೀವು UPI ಐಡಿ ನೋಂದಣಿ ರದ್ದುಗೊಳಿಸಲು ಸಾಧ್ಯವಾಗುತ್ತದೆ. ಈ ರೀತಿಯಾಗಿ ನೀವು UPI ಖಾತೆಯನ್ನು ಡಿ-ಲಿಂಕ್ ಮಾಡಲು ಸಾಧ್ಯವಾಗುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile