SBI ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರ ಪಾಲಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ.
ಗ್ರಾಹಕರ ಸೂಕ್ಷ್ಮ ಮಾಹಿತಿಯನ್ನು ಬಳಸಿ ವಂಚನೆ ಎಸಗುವ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿದೆ.
SBI ಗ್ರಾಹಕರ ಸುರಕ್ಷತೆಗಾಗಿ ಆಗಾಗ ಎಚ್ಚರಿಕೆಗಳನ್ನು ನೀಡುತ್ತಲೇ ಇರುತ್ತದೆ
SBI Alert! ದೇಶದ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರ ಪಾಲಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಬ್ಯಾಂಕ್ ತನ್ನ ಎಲ್ಲಾ ಗ್ರಾಹಕರಿಗೆ ಎಚ್ಚರಿಕೆಯನ್ನು ರವಾನಿಸಿದೆ. ಭಾರಿ ಸಂಖ್ಯೆಯಲ್ಲಿ ಗ್ರಾಹಕರನ್ನು ಹೊಂದಿರುವ ಕಾರಣ SBI ಯಾವಾಗಲು ತನ್ನ ಗ್ರಾಹಕರನ್ನು ಫಿಶಿಂಗ್ (Phishing), ಹ್ಯಾಕಿಂಗ್ (Hacking) ಅಥವಾ ವಂಚನೆಯ (Bank Fraud) ಪ್ರಯತ್ನಗಳಿಂದ ರಕ್ಷಿಸಲು ಬ್ಯಾಂಕ್ ಗ್ರಾಹಕರಿಗೆ ಸಲಹೆಗಳನ್ನು ನೀಡುತ್ತಲೇ ಇರುತ್ತದೆ.
Survey
ಬ್ಯಾಂಕಿಂಗ್ ವಂಚನೆಗಳನ್ನು ಗಮನದಲ್ಲಿಟ್ಟುಕೊಂಡು ಹೈ ಅಲರ್ಟ್ ಜಾರಿಗೊಳಿಸಿದ SBI ಕಳೆದ ಕೆಲ ದಿನಗಳಿಂದ ಟೆಕ್ಸ್ಟ್ ಮೆಸೇಜ್ ಗಳನ್ನು ಕಳುಹಿಸಿ ಬ್ಯಾಂಕ್ ಗ್ರಾಹಕರ ಸೂಕ್ಷ್ಮ ಮಾಹಿತಿಯನ್ನು ಬಳಸಿ ವಂಚನೆ ಎಸಗುವ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕುಗಳು ಕೂಡ ತಮ್ಮ ಗ್ರಾಹಕರಿಗೆ ಅಪ್ಡೇಟ್ ಮಾಡಲು ಟೆಕ್ಸ್ಟ್ ಸಂದೇಶಗಳನ್ನು ಹಂಚಿಕೊಳ್ಳುತ್ತವೆ. ಆದರೆ ಗ್ರಾಹಕರಿಗೆ ಬರುವ ಸಂದೇಶಗಳು ಬ್ಯಾಂಕ್ ವತಿಯಿಂದ ಬಂದಿದೆಯೇ ಅಥವಾ ಇಲ್ಲ ಎಂಬುದನ್ನು ಪರಿಶೀಲಿಸಲು SBI (SBI Alert) ಕೆಲವು ಸಲಹೆಗಳನ್ನು ಹಂಚಿಕೊಂಡಿದೆ.
ಈ ಮಾಹಿತಿ ನೀಡಿದೆ SBI
ಈ ಕುರಿತು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ SBI "ಯಾರನ್ನಾದರೂ ಒಳಗೆ ಬಿಡುವ ಮೊದಲು ಬಾಗಿಲಿನ ಹಿಂದೆ ಯಾರು ಇದ್ದಾರೆ ಎಂಬುದನ್ನು ಯಾವಾಗಲೂ ಪರಿಶೀಲಿಸಿ. SBI ಗ್ರಾಹಕರು ಯಾವಾಗಲೂ 'SBI/SB' ಯಿಂದ ಪ್ರಾರಂಭವಾಗುವ ಕಿರುಸಂಕೇತಗಳನ್ನು ಪರಿಶೀಲಿಸಬೇಕು ಎಂದು ಬ್ಯಾಂಕ್ ಹೇಳಿದೆ. ಉದಾಹರಣೆಗೆ SBIBNK, SBIINB, SBIPSG ಮತ್ತು SBINO, ಬ್ಯಾಂಕ್ ತನ್ನ ಖಾತೆದಾರರು ಮತ್ತು ಇತರ ಗ್ರಾಹಕರಿಗೆ ಅಪರಿಚಿತ ಮೂಲಗಳಿಂದ ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಬೇಡಿ" ಎಂದು ಎಚ್ಚರಿಸಿದೆ.
Always check who's behind the door before letting anyone in. Here is your key to safety.#SafeWithSBI #CyberSafety #StayAlert #StaySafe #SBI #StateBankOfIndia pic.twitter.com/IJ9w1y77RP
— State Bank of India (@TheOfficialSBI) October 29, 2021
ಬ್ಯಾಂಕ್ ಜಾರಿಗೊಳಿಸುತ್ತದೆ ಅಲರ್ಟ್
ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ SBI ಗ್ರಾಹಕರ ಸುರಕ್ಷತೆಗಾಗಿ ಆಗಾಗ ಎಚ್ಚರಿಕೆಗಳನ್ನು ನೀಡುತ್ತಲೇ ಇರುತ್ತದೆ ಎಂಬುದು ಇಲ್ಲಿ ಗಮನಾರ್ಹ. SBI ತನ್ನ ಗ್ರಾಹಕರ ಹಣವನ್ನು ಸುರಕ್ಷಿತವಾಗಿಡಲು ಪ್ರಯತ್ನಿಸುತ್ತಲೇ ಇರುತ್ತದೆ. ಇದಕ್ಕಾಗಿ ಬ್ಯಾಂಕ್ ತನ್ನ ಟ್ವಿಟರ್ ಹ್ಯಾಂಡಲ್ ಮತ್ತು ಈ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ಮಾಹಿತಿ ಪಡೆಯಿರಿ ಎಸ್ಬಿಐ ತನ್ನ ಗ್ರಾಹಕರ ಅನುಕೂಲಕ್ಕಾಗಿ 'ಕಸ್ಟಮರ್ ಕೇರ್ ನಂಬರ್' ಅನ್ನು ಸಹ ಬಿಡುಗಡೆ ಮಾಡಿದೆ. ಯಾವುದೇ ಮಾಹಿತಿಗಾಗಿ ಗ್ರಾಹಕ ಸೇವಾ ಸಂಖ್ಯೆಗಳಾದ 1800 11 2211, 1800 425 3800 ಅಥವಾ 080 26599990 ಅನ್ನು ಸಂಪರ್ಕಿಸುವ ಮೂಲಕ ನೀವು ಬ್ಯಾಂಕ್ಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಪಡೆಯಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile