ಹೊಸ Samsung Galaxy M30 ಸ್ಮಾರ್ಟ್ಫೋನಿನ ಬಗ್ಗೆ ತಿಳಿಯಲೇಬೇಕಾದ 10 ಸತ್ಯಗಳು

ಹೊಸ Samsung Galaxy M30 ಸ್ಮಾರ್ಟ್ಫೋನಿನ ಬಗ್ಗೆ ತಿಳಿಯಲೇಬೇಕಾದ 10 ಸತ್ಯಗಳು
HIGHLIGHTS

Samsung Galaxy M30 ಸ್ಮಾರ್ಟ್ಫೋನ್ 6.3 ಇಂಚಿನ HD+ ಸೂಪರ್ ಅಮೊಲೈಡ್ ಇನ್ಫಿನಿಟಿ V ಡಿಸ್ಪ್ಲೇಯನ್ನು ಹೊಂದಿದೆ.

ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ತಲೆ ಎತ್ತಿ ಮೆರೆಯುತ್ತಿರುವ Xiaomi ಕಂಪನಿಗೆ ಸ್ಯಾಮ್ಸಂಗ್ ತನ್ನ M ಸರಣಿಯ ಫೋನ್ಗಳ ಮೂಲಕ ಘರ್ಜಿಸಿದೆ. ಸ್ಯಾಮ್ಸಂಗ್ 5ನೇ ಫೆಬ್ರವರಿ 2019 ರಂದು ಇದೇ M ಸರಣಿಯ Galaxy M10 ಮತ್ತು Galaxy M20 ಸ್ಮೃತಪಾನಗಳನ್ನು ಬಿಡುಗಡೆ ಮಾಡಿ Xiaomi ಯ ಬಜೆಟ್ ಫೋನ್ಗಳಿಗೆ ಅಡ್ಡಲಾಗಿ ನಿಂತಿದೆ. ಈಗ Xiaomi ಯ ಹೆಚ್ಚು ನಿರೀಕ್ಷಿತ ಫೋನ್ ಆಗಿರುವ Redmi Note 7 ಬಿಡುಗಡೆಯ ಮುಂಚೆ ಸ್ಯಾಮ್ಸಂಗ್ ತನ್ನ ಈ Samsung Galaxy M30 ಬಿಡುಗಡೆಯಾಗಲಿದೆ. ಈ ರೀತಿಯ 10 ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿಗಾಗಿ ನೋಡ್ತಾಯಿರಿ.

ಸ್ಯಾಮ್ಸಂಗ್ ಟ್ವಿಟ್ಟರ್ ಮೂಲಕ Galaxy M30 ಫೋನಿನ ಬಿಡುಗಡೆಯ ಮಾಹಿತಿಯನ್ನು ಬಹಿರಂಗಪಡಿಸಿದೆ. ಅಂದ್ರೆ Xiaomi ಯ ಹೆಚ್ಚು ನಿರೀಕ್ಷಿತ ಫೋನ್ ಆಗಿರುವ Redmi Note 7 ಬಿಡುಗಡೆಯ ಮುಂಚೆ ಸ್ಯಾಮ್ಸಂಗ್ ತನ್ನ ಈ Samsung Galaxy M30 ಫೋನನ್ನು 27ನೇ ಫೆಬ್ರವರಿ 2019 ರಂದು ಸಂಜೆ 6:00pm ಘಂಟೆಗೆ ಬಿಡುಗಡೆಯಾಗಲಿದೆ.

Samsung Galaxy M30 ಸ್ಮಾರ್ಟ್ಫೋನ್ 6.3 ಇಂಚಿನ HD+ ಸೂಪರ್ ಅಮೊಲೈಡ್ ಇನ್ಫಿನಿಟಿ V ಡಿಸ್ಪ್ಲೇಯನ್ನು ಹೊಂದಿದೆ.

ಈ ಸ್ಮಾರ್ಟ್ಫೋನ್ ನಿಮಗೆ ಬಜೆಟ್ ರೇಂಜಲ್ಲಿ ಬರುವುದಾಗಿ ಅಂದ್ರೆ ಅಂದಾಜು ಕೇವಲ 15000 ರೂಗಳೊಳಗೆ ನಿರೀಕ್ಷಿಸಲಾಗಿದೆ.

ಈ ಎಲ್ಲಾ ಮಾಹಿತಿ ಒಬ್ಬ ಟ್ವಿಸ್ಟರ್ ಮಾಡಿರುವ ಟ್ವಿಟ್ಟರ್ ಮಾಹಿತಿಯ ಪ್ರಕಾರ ಈ ಫೋನ್ ಈಗಾಗಲೇ ಲಭ್ಯವಿರುವ ಮಾಹಿತಿಯ ಮೇರೆಗೆ ಹೋಲಿಸಿದರೆ ಈ ಸ್ಪೆಕ್ ಶೀಟ್ ಒಂದು ಮಟ್ಟಿಗೆ ನಾವು ಹೊಂದಾಣಿಕೆಯನ್ನು ತೋರುತ್ತದೆ. 

Galaxy M20 ಯಂತೆ ಈ ಹೊಸ Galaxy M30 ಫೋನ್ ಸಹ Exynos 7904 SoC ಪ್ರೊಸೆಸರನ್ನು ಹೊಂದಿರುವುದಾಗಿ ಹೆಚ್ಚು ನಿರೀಕ್ಷೆಯಿದೆ. ಇದಕ್ಕೆ ಕಾರಣ ಈ ಪ್ರೊಸೆಸರ್ ಕಂಪನಿ ಹೊಸದಾಗಿ ಬಿಡುಗಡೆ ಮಾಡಿರುವ ಚಿಪ್ಸೆಟ್ ಆಗಿದೆ.     

Samsung Galaxy M30 ಕೆಲ ವರದಿಗಳ ಮೂಲಕ ಒಟ್ಟಾರೆಯಾಗಿ ಎರಡು ವೇರಿಯಂಟ್ಗಳಲ್ಲಿ ಬರಬವುದು 4GB/6GB RAM ಮತ್ತು 64GB 
128GB ಯ ಸ್ಟೋರೇಜ್ಗಳೊಂದಿಗೆ ಬರುವುದಾಗಿ ನಿರೀಕ್ಷಿಸಲಾಗಿದೆ. 

ಈ ಫೋನಿನ ಮತ್ತೋಂದು ವಿಶೇಷತೆಯೆಂದರೆ ಇದರಲ್ಲಿನ 5000mAh ಬ್ಯಾಟರಿ. ಆದರೆ ಈ ಫೋನ್ Galaxy M20 ಯಂತೆ ಟೈಪ್ C ಪೋರ್ಟ್ ಮತ್ತು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತಾ ಇಲ್ವಾ ಅನ್ನೋದು ಇನ್ನು ಅಸ್ಪಷ್ಟವಾಗಿದೆ. 

Samsung Galaxy M30 ಫೋನಿನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಅಲ್ಲದೆ ಇದರ ಫ್ರಂಟಲ್ಲಿ ನಾಚ್ ಡಿಸ್ಪ್ಲೇಯಲ್ಲಿ   16MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ಇದರಲ್ಲಿನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ 13MP + 5MP + 5MP ಮಾದರಿಯಲ್ಲಿ ನಿರೀಕ್ಷಿಸಬವುದು. ಇದರ ಸೆನ್ಸರ್ ಗಾಲ ಬಗ್ಗೆ ಹೇಳಬೇಕೇದರೆ 13MP ಮೇನ್ ಸೆನ್ಸರ್ 5MP ವೈಡ್ ಆಂಗಲ್ ಮತ್ತು 5MP ಡೆಪ್ತ್ ಪ್ರೋಟ್ರೇಟ್ ಸೆನ್ಸರ್ ನೀಡಲಾಗುವುದಾಗಿ ನಿರೀಕ್ಷಿಸಲಾಗಿದೆ. 

ಇದರ ಕೆಲ ಫಿಸಿಕಲ್ ಓವರ್ ವ್ಯೂ ಬಗ್ಗೆ ಹೇಳಬೇಕೆಂದರೆ ಇದರ ಹಿಂಭಾಗದಲ್ಲಿ ಫಿಂಗರ್ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್ಲಾಕ್ ಫೀಚರ್ ಹೊಂದಿದ್ದು ಕ್ಯಾಮೆರಾದ ಕೆಳಭಾಗದಲ್ಲಿ LED ಫ್ಲಾಶ್ ನೀಡಲಾಗಿದೆ. ಮತ್ತು 3.5mm ಆಡಿಯೋ ಜಾಕ್ ಸಹ ಹೊಂದಿಯುವುದಾಗಿ ನಿರೀಕ್ಷಿಸಲಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo