Xiaomi ಹೊಸದಾಗಿ Mi Men’s Sports Shoes 2 ಅನ್ನು ಕೇವಲ 2499 ರೂಗಳಲ್ಲಿ ಭಾರತದಲ್ಲಿ ಅನಾವರಣಗೊಳಿಸಿದೆ.

HIGHLIGHTS

Mi Men’s Sports Shoes 2 ಯೂನಿಕ್ ಮತ್ತು ಕಾಂಬಿನೇಶನ್ ಪರ್ಫಾಮೆನ್ಸ್ & ಸ್ಟೈಲ್ ನೀಡುತ್ತದೆ.

Xiaomi ಹೊಸದಾಗಿ Mi Men’s Sports Shoes 2 ಅನ್ನು ಕೇವಲ 2499 ರೂಗಳಲ್ಲಿ ಭಾರತದಲ್ಲಿ ಅನಾವರಣಗೊಳಿಸಿದೆ.

ಭಾರತದಲ್ಲಿ ನಂಬರ್ ಸ್ಮಾರ್ಟ್ಫೋನ್ ಬ್ರಾಂಡ್ ಮತ್ತು ವಿಶ್ವದ ಅತಿ ಹೆಚ್ಚು ಮಾರಾಟದ ಬ್ರಾಂಡ್ ಆಗಿರುವ Xiaomi ಈಗ ಮತ್ತೋಂದು ಹೊಸ ಸ್ಮಾರ್ಟ್ ಶೋ ಅನ್ನು Mi Men’s Sports Shoes 2 ಹೆಸರಿನಿಂದ ಅನಾವರಣಗೊಳಿಸಿದೆ. ಇದು ಇಂದು ಭಾರತದಲ್ಲಿ ಘೋಷಿಸಲ್ಪಟ್ಟಿದ್ದು Xiaomiಯ ಮತ್ತೋಂದು ಲೈಫ್ ಸ್ಟೈಲ್ ಪ್ರಾಡಕ್ಟ್ ಆಗಿದೆ. ಈ ಹೊಸ Mi Men’s Sports Shoes 2 ನಿಮಗೆ ಯೂನಿಕ್ ಮತ್ತು ಭಾರಿ ಕಾಂಬಿನೇಶನ್ಗಳೊಂದಿಗಿನ ಪರ್ಫಾಮೆನ್ಸ್ ಮತ್ತು ಸ್ಟೈಲ್ ನೀಡುತ್ತದೆ.

Digit.in Survey
✅ Thank you for completing the survey!

Xiaomi ಯ ಭಾರತದ ಹೆಡ್ & ಆನ್ಲೈನ್ ಸೇಲ್ ಮುಖ್ಯಸ್ಥರಾದ ರಘು ರೆಡ್ಡಿ "2019 ಈಗಾಗಲೇ ಎರಡು ಹೊಸ ವಿಭಾಗಗಳನ್ನು ಪರಿಚಯಿಸಿದ್ದು ನಮ್ಮೊಂದಿಗೆ ಬಹಳ ರೋಮಾಂಚನಕಾರಿ ಸೂಚನೆಯಾಗಿತ್ತು. ಈಗ ನಾವು ಮತ್ತೊಂದು ಹೊಸ ಆಫರ್ ಅನ್ನು ಪರಿಚಯಿಸಲು ಸಂತೋಷಪಡುತ್ತೇವೆ. ನಮ್ಮ ಲೈಫ್ ಸ್ಟೈಲ್ ಪ್ರಾಡಕ್ಟ್ಗಳ ಶ್ರೇಣಿಯಲ್ಲಿ Mi Men’s Sports Shoes 2 ಇದು ಕ್ರೋಡ್ಫೌಂಡಿಂಗ್ ಫ್ಲೋಟ್ಫಾರಂ ಅಲ್ಲಿ ಲೈವ್ ಆಗುತ್ತದೆ. ಅಲ್ಲದೆ ಇದು Mi ಫ್ಯಾನ್ಗಳ ಜೀವನಕ್ಕೆ ಅಪಾರ ಮೌಲ್ಯವನ್ನು ನೀಡಲು ನಾವು ಧನಾತ್ಮಕವಾಗಿರುತ್ತೇವೆಂದು" ಅವರು ಹೇಳಿದರು. 

Xiaomi ಯ ಈ ಹೊಸ ಶೋ ನಲ್ಲಿ 5 ಇನ್ 1 ಯುನಿ ಮೌಲ್ಡಿಂಗ್ ತ೦ತ್ರಜ್ಙಾನವನ್ನು ಬಳಸಿದೆ. ಇದರಿಂದಾಗಿ ಇದರಲ್ಲಿನ ವಿವಿಧ ರೀತಿಯ ಕಾಂಬಿನೇಶನ್ಗಳಾದ ಶೊಕ್ ಅಬ್ಸರ್ನ್ಟ್, ಹೆಚ್ಚಾಗಿ ಬಾಳಿಕೆ ಬರಲು ಮತ್ತು ಜಾರದ ನಿರೋಧಕಗಳನ್ನು ಒಳಗೊಂಡಿದೆ. ಅಲ್ಲದೆ ಇದು ನಿಮಗೆ ಫಿಶ್ಬೊನ್ ಆಕಾರದ ಬಾಯಿಯನ್ನು ಇದರಲ್ಲಿ ನೀಡಲಾಗಿದೆ. ಇದರಿಂದಾಗಿ ನೀವು ಆರಾಮಾಗಿ ಇದರಲ್ಲಿ ಕಾಲುಗಳನ್ನು ಹಾಕಬವುದು.

ಈ ಹೊಸ Mi Men’s Sports Shoes 2 ಉಸಿರಾಡುವ ಗ್ಯಾಪ್ಗಳೊಂದಿಗೆ ತಯಾರಿಸಲಟ್ಟಿದೆ. ಅಲ್ಲದೆ ಇದು ಒಗೆಯಬವುದಾದ ಮತ್ತು ಆರಾಮಾಗಿ ನೀವು ಮೇಷನ್ಗಳಲ್ಲಿ ತೊಳೆಯಬವುದಾದ ಫ್ಯಾಬ್ರಿಕ್ ವಸ್ತುಗಳಿಂದ ತಯಾರಿಸಲ್ಪಟ್ಟಿದೆ. ಕೊನೆಯದಾಗಿ ಈ ಶೋಗಳು ನಿಮಗೆ ಒಟ್ಟು ಮೂರು ಬಣ್ಣಗಳಲ್ಲಿ ಲಭ್ಯವಾಗುತ್ತವೆ. ಅವೆಂದರೆ ಬ್ಲಾಕ್, ಬ್ಲೂ ಮತ್ತು ಡಾರ್ಕ್ ಗ್ರೇ. ಈ ಹೊಸ Mi Men’s Sports Shoes 2 ಬೆಲೆ ಭಾರತದಲ್ಲಿ 2499 ರೂಗಳಾಗಿದ್ದು Xiaomi ಯ ಕ್ರೋಡ್ಫೌಂಡಿಂಗ್ ಫ್ಲೋಟ್ಫಾರಂ ಲಭ್ಯವಾಗಲಿದೆ. ಇದು ಭಾರತದಲ್ಲಿ 15ನೇ ಮಾರ್ಚ್ 2019 ರಿಂದ ಶಿಪ್ ಆಗಲು ಲಭ್ಯವಿರುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo