ಹೊಸ ಕಾರುಗಳ ಫಾಸ್ಟ್ಟ್ಯಾಗ್ (FASTag) ಪಡೆಯುವ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ.
ಮೊದಲು ವಾಹನದ ದಾಖಲೆಗಳು ಸರಿಯಿದ್ದರೂ ಟ್ಯಾಗ್ ಆಕ್ಟಿವೇಟ್ ಆದ ಮೇಲೆ ಪದೇ ಪದೇ ದಾಖಲೆಗಳನ್ನು ಸಲ್ಲಿಸಬೇಕಿಲ್ಲ.
ಹೊಸ ಫಾಸ್ಟ್ಟ್ಯಾಗ್ ಖರೀದಿಸಿದಾಗ ಹಳೆಯ ಟ್ಯಾಗ್ಗಳಿಗೆ ಯಾವುದೇ ರೀತಿಯ ರೂಟಿನ್ ಕೆವೈವಿ (Routine KYV) ಮಾಡಬೇಕಾಗಿಲ್ಲ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಮುಂದಿನ ತಿಂಗಳು ಅಂದರೆ 1ನೇ ಫೆಬ್ರವರಿ 2026 ರಿಂದ ರಿಂದ ಜಾರಿಗೆ ಬರುವಂತೆ ಹೊಸ ಕಾರುಗಳ ಫಾಸ್ಟ್ಟ್ಯಾಗ್ (FASTag) ಪಡೆಯುವ ಪ್ರಕ್ರಿಯೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಕಾರು, ಜೀಪ್ ಮತ್ತು ವ್ಯಾನ್ಗಳು ಫಾಸ್ಟ್ಟ್ಯಾಗ್ ಸಕ್ರಿಯಗೊಳಿಸಿದ ನಂತರ KYV (Know Your Vehicle) ಪೂರ್ಣಗೊಳಿಸುವ ಅವಶ್ಯಕತೆ ಇರುವುದಿಲ್ಲ. ಈ ಮೊದಲು ವಾಹನದ ದಾಖಲೆಗಳು ಸರಿಯಿದ್ದರೂ ಟ್ಯಾಗ್ ಆಕ್ಟಿವೇಟ್ ಆದ ಮೇಲೆ ಪದೇ ಪದೇ ದಾಖಲೆಗಳನ್ನು ಸಲ್ಲಿಸಬೇಕಾದ ಕಿರಿಕಿರಿ ಇತ್ತು. ಈಗ ಅದನ್ನು ರದ್ದುಪಡಿಸುವ ಸಾಮಾನ್ಯ ಜನರಿಗೆ ಹೆದ್ದಾರಿ ಪ್ರಯಾಣವನ್ನು ಇನ್ನಷ್ಟು ಸುಲಭಗೊಳಿಸಲಾಗಿದೆ.
SurveyAlso Read: ಅಮೆಜಾನ್ನಲ್ಲಿ ಇಂದು 43 ಇಂಚಿನ Smart TV ಅತ್ಯುತ್ತಮ ಫೀಚರ್ಗಳೊಂದಿಗೆ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯವಿದೆ!
FASTag ಕಾರುಗಳಿಗೆ ಇನ್ನು ಮುಂದೆ ಪದೇ ಪದೇ KYV ಅಗತ್ಯವಿಲ್ಲ
ಹೊಸ ನಿಯಮದ ಪ್ರಕಾರ ನೀವು ಹೊಸ ಫಾಸ್ಟ್ಟ್ಯಾಗ್ ಖರೀದಿಸಿದಾಗ ಅಥವಾ ನಿಮ್ಮ ಬಳಿ ಇರುವ ಹಳೆಯ ಟ್ಯಾಗ್ಗಳಿಗೆ ಯಾವುದೇ ರೀತಿಯ “ರೂಟಿನ್ ಕೆವೈವಿ” (Routine KYV) ಮಾಡಬೇಕಾಗಿಲ್ಲ. ಅಂದರೆ ಸುಮ್ಮನೆ ಕಾಲಕಾಲಕ್ಕೆ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾದ ತೊಂದರೆ ಇರುವುದಿಲ್ಲ. ಕೇವಲ ವಾಹನದ ಬಗ್ಗೆ ಏನಾದರೂ ದೂರುಗಳು ಬಂದಾಗ ಅಥವಾ ಫಾಸ್ಟ್ಟ್ಯಾಗ್ ಸರಿಯಾಗಿ ಆಂಟಿಸದಿದ್ದಾಗ ಮಾತ್ರ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಯಾವುದೇ ದೂರು ಇಲ್ಲದಿದ್ದರೆ ನಿಮ್ಮ ಕಾರಿನ ಫಾಸ್ಟ್ಟ್ಯಾಗ್ ಯಾವುದೇ ತಡೆ ಇಲ್ಲದೆ ಮೊದಲಿನಂತೆಯೇ ಕೆಲಸ ಮಾಡುತ್ತದೆ. ಇದರಿಂದ ಸಾರ್ವಜನಿಕರಿಗೆ ಸಮಯದ ಉಳಿತಾಯವಾಗಲಿದೆ.
Major Public Relief: KYV Discontinued for Cars on New FASTag issued after 1 February 2026!
— NHAI (@NHAI_Official) January 1, 2026
For enhancing public convenience and delivering a smoother #FASTag experience, NHAI has decided to discontinue the Know Your Vehicle (KYV) process for cars (Car/Jeep/Van category FASTag)… pic.twitter.com/H76ngAkGK8
ಈ ಫಾಸ್ಟ್ಟ್ಯಾಗ್ ಸೌಲಭ್ಯವನ್ನು ಏಕೆ ನೀಡಲಾಗಿದೆ?
ಹಲವು ಫಾಸ್ಟ್ಟ್ಯಾಗ್ ಬಳಕೆದಾರರು ಟ್ಯಾಗ್ ಆಕ್ಟಿವೇಟ್ ಆದ ನಂತರವೂ ಬ್ಯಾಂಕ್ಗಳಿಂದ ಪದೇ ಪದೇ ಬರುವ ಮೆಸೇಜ್ಗಳು ಮತ್ತು ದೃಢೀಕರಣ ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಸರಿಯಾದ ದಾಖಲೆಗಳನ್ನು ನೀಡಿದರೂ ಸಹ ಟ್ಯಾಗ್ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಪೋಸ್ಟ್-ಆಕ್ಟಿವೇಶನ್ ಕಿರುಕುಳ ತಪ್ಪಿಸಲು NHAI ಈ ನಿರ್ಧಾರ ಕೈಗೊಂಡಿದೆ. ಸರಕಾರದ ಉದ್ದೇಶವೆಂದರೆ ಟ್ಯಾಗ್ ಸಿಕ್ಕ ಮೇಲೆ ಬಳಕೆದಾರರು ಮತ್ತೆ ಮತ್ತೆ ದಾಖಲೆಗಳಿಗಾಗಿ ಅಲೆಯಬಾರದು. ಇದು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲು ಸಹಾಯ ಮಾಡುತ್ತದೆ.
ಫಾಸ್ಟ್ಟ್ಯಾಗ್ ಹೊಸ ಅಪ್ಡೇಟ್ಗಳು
ಮುಂದಿನ ತಿಂಗಳು ಅಂದರೆ 1ನೇ ಫೆಬ್ರವರಿ 2026 ರಿಂದ ಜಾರಿಯಾಗುವ ಈ ಹೊಸ ವ್ಯವಸ್ಥೆಯಲ್ಲಿ ವಾಹನದ ದಾಖಲೆಗಳ ಪರಿಶೀಲನೆಯ ಸಂಪೂರ್ಣ ಜವಾಬ್ದಾರಿಯನ್ನು ಫಾಸ್ಟ್ಟ್ಯಾಗ್ ಬ್ಯಾಂಕ್ಗಳಿಗೆ ವಹಿಸಲಾಗಿದೆ . ಬ್ಯಾಂಕ್ಗಳು ಫಾಸ್ಟ್ಟ್ಯಾಗ್ ನೀಡುವ ಮುನ್ನವೇ ಸರ್ಕಾರದ ವಾಹನ್ (VAHAN) ಡೇಟಾಬೇಸ್ ಮೂಲಕ ವಾಹನದ ಸಂಪೂರ್ಣ ವಿವರಗಳನ್ನು ಪರಿಶೀಲಿಸಬೇಕು. ವಾಹನದ ವಿವರಗಳು ಸರಿಯಿದ್ದರೆ ಮಾತ್ರ ಟ್ಯಾಗ್ ಆಕ್ಟಿವೇಟ್ ಆಗುತ್ತದೆ. ಒಂದು ವೇಳೆ ಆನ್ಲೈನ್ನಲ್ಲಿ ಮಾಹಿತಿ ಸಿಗದಿದ್ದರೆ ಬ್ಯಾಂಕ್ಗಳು ಆರ್ಸಿ (RC) ಕಾರ್ಡ್ ನೋಡಿ ಖಚಿತಪಡಿಸಿಕೊಳ್ಳಲಾಗುವುದು. ಈ ಎಲ್ಲಾ ಕೆಲಸಗಳನ್ನು ಟ್ಯಾಗ್ ಮಾಡಿ ನಿಮ್ಮ ಕೈ ಸೇರುವ ಮೊದಲೇ ಮುಗಿಯುವುದರಿಂದ ನೀವು ಟ್ಯಾಗ್ ಪಡೆದ ಮೇಲೆ ಮತ್ತೆ ಯಾವುದಾದರೂ ದಾಖಲೆ ನೀಡುವಿರಿ ಅವಶ್ಯಕತೆ ಇರುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile