WhatsApp New Year 2026 Features: ವಾಟ್ಸಾಪ್ ಕಡೆಯಿಂದ ಹೊಸ ವರ್ಷದ ಶುಭಾಶಯಗಳು
WhatsApp ಪ್ರಸ್ತುತ ವಿಶೇಷ ಫೀಚರ್‌ಗಳು ವಾಟ್ಸಾಪ್‌ನಲ್ಲಿ ಧಾನ್ಯವಾದವನ್ನು ತಿಳಿಸಲು ಅಪ್ಡೇಟ್ ಮಾಡಿದೆ.
WhatsApp New Year 2026 Features: ವಾಟ್ಸಾಪ್ ಕಡೆಯಿಂದ ಹೊಸ ವರ್ಷದ ಶುಭಾಶಯಗಳು ಮತ್ತು ವಿಶೇಷ ಫೀಚರ್‌ಗಳು ವಾಟ್ಸಾಪ್‌ನಲ್ಲಿ ಧಾನ್ಯವಾದವನ್ನು ತಿಳಿಸಲು ಅಪ್ಡೇಟ್ ಮಾಡಿದೆ. ಇದು ನಮಗೆ ಹೊಸ ವರ್ಷದ ದಿನ ಬಹಳ ವಿಶೇಷವಾದದ್ದು ಈ ದಿನ ಪ್ರಪಂಚದಾದ್ಯಂತ ಜನರು ತಮ್ಮ ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಅತಿ ಹೆಚ್ಚು ಮೆಸೇಜ್ ಮತ್ತು ಕರೆಗಳನ್ನು ಮಾಡುತ್ತಾರೆ. WhatsApp ಸಾಮಾನ್ಯ ದಿನಗಳಲ್ಲಿ ವಾಟ್ಸಾಪ್‌ನಲ್ಲಿ ಸುಮಾರು 10,000 ಕೋಟಿ ಮೆಸೇಜ್‌ಗಳು ಮತ್ತು 200 ಕೋಟಿ ಕರೆಗಳು ನಡೆಯುತ್ತವೆ. ಆದರೆ ಹೊಸ ವರ್ಷದ ದಿನ ಈ ಸಂಖ್ಯೆ ಇನ್ನೂ ಹೆಚ್ಚಾಗಿ ಹೊಸ ದಾಖಲೆ ಸೃಷ್ಟಿಸುತ್ತದೆ. ದೂರದಲ್ಲಿರುವ ಕುಟುಂಬಗಳನ್ನು ವಿಡಿಯೋ ಕರೆ ಮೂಲಕ ಒಂದುಗೂಡಿಸಲು ನಮಗೆ ತುಂಬಾ ಹೆಮ್ಮೆ ಎನಿಸುತ್ತದೆ.
SurveyAlso Read: ZEBRONICS Dolby Soundbar: ಇದಕ್ಕಿಂತ ಕಡಿಮೆ ಬೆಲೆಗೆ ಮತ್ತೊಂದಿಲ್ಲ! ಜಬರ್ದಸ್ತ್ ಸೌಂಡ್ ಮತ್ತು ಪ್ರೀಮಿಯಂ ಲುಕ್!
WhatsApp New Year 2026: ಹೊಸ ವರ್ಷವನ್ನು ಸಂಭ್ರಮಿಸಲು ಹೊಸ ಫೀಚರ್‌ಗಳು:
ಸ್ಟಿಕ್ಕರ್ ಪ್ಯಾಕ್ 2026: ಹೊಸ ವರ್ಷದ ಸಂತೋಷವನ್ನು ಹಂಚಿಕೊಳ್ಳಲು ವಿಶೇಷವಾದ ಸ್ಟಿಕ್ಕರ್‌ಗಳನ್ನು ಬಳಸಬಹುದು.
ವಿಡಿಯೋ ಕಾಲ್ ಎಫೆಕ್ಟ್ಸ್: ನೀವು ವಿಡಿಯೋ ಕಾಲ್ ಮಾಡುವಾಗ ಸ್ಕ್ರೀನ್ ಮೇಲೆ ಪಟಾಕಿ ಮತ್ತು ನಕ್ಷತ್ರಗಳ ಅನಿಮೇಷನ್ ಬರುವಂತೆ ಮಾಡಬಹುದು.
ಕನ್ಫೆಟ್ಟಿ ರಿಯಾಕ್ಷನ್: ಮೆಸೇಜ್‌ಗಳಿಗೆ ಎಮೋಜಿ ಮೂಲಕ ಪ್ರತಿಕ್ರಿಯೆ ನೀಡಿದಾಗ ಸ್ಕ್ರೀನ್ ಮೇಲೆ ಬಣ್ಣದ ಕಾಗದಗಳು (Confetti) ಹಾರುವಂತೆ ವಿನ್ಯಾಸಗೊಳಿಸಲಾಗಿದೆ.
ಸ್ಟೇಟಸ್ ಅಪ್‌ಡೇಟ್: ಈಗ ನೀವು ನಿಮ್ಮ ಸ್ಟೇಟಸ್‌ನಲ್ಲಿ ಅನಿಮೇಟೆಡ್ ಸ್ಟಿಕ್ಕರ್‌ಗಳನ್ನು ಹಾಕಬಹುದು. ಇದಕ್ಕಾಗಿ ಹೊಸ 2026 ಲೇಔಟ್ ಕೂಡ ಲಭ್ಯವಿದೆ.
WhatsApp Announces Holiday Update with 2026 Stickers and Fun Interactive Effects!
— WABetaInfo (@WABetaInfo) December 29, 2025
WhatsApp is launching a festive update to make New Year messaging, calls, and Status updates more fun and expressive.https://t.co/1aWSzPGAhX pic.twitter.com/kmHWYEKlMu
ನೀವು ಹೊಸ ವರ್ಷದ ಪಾರ್ಟಿ ಪ್ಲಾನ್ ಮಾಡುತ್ತಿದ್ದರೆ, ವಾಟ್ಸಾಪ್‌ನಲ್ಲಿ ಈ ಕೆಳಗಿನ ಟಿಪ್ಸ್ ಅನುಸರಿಸಿ:
ಇವೆಂಟ್ (Event) ಕ್ರಿಯೇಟ್ ಮಾಡಿ: ಗ್ರೂಪ್ ಚಾಟ್‌ನಲ್ಲಿ ಇವೆಂಟ್ ಆರಂಭಿಸಿ ಅದನ್ನು ‘ಪಿನ್’ ಮಾಡಿ. ಇದರಿಂದ ಯಾರೆಲ್ಲ ಬರುತ್ತಾರೆ ಎಂಬುದು ಸುಲಭವಾಗಿ ತಿಳಿಯುತ್ತದೆ.
ಪೋಲ್ಸ್ (Polls) ಬಳಸಿ: ಪಾರ್ಟಿಯಲ್ಲಿ ಯಾವ ಊಟ ಅಥವಾ ಆಟ ಇರಬೇಕು ಎಂದು ನಿರ್ಧರಿಸಲು ವೋಟಿಂಗ್ ನಡೆಸಬಹುದು.
ಲೈವ್ ಲೊಕೇಶನ್: ನಿಮ್ಮ ಸ್ನೇಹಿತರು ಪಾರ್ಟಿ ನಡೆಯುವ ಜಾಗಕ್ಕೆ ಸುಲಭವಾಗಿ ಬರಲು ಮತ್ತು ಪಾರ್ಟಿ ಮುಗಿಸಿ ಸುರಕ್ಷಿತವಾಗಿ ಮನೆ ಸೇರಲು ಲೈವ್ ಲೊಕೇಶನ್ ಹಂಚಿಕೊಳ್ಳಬಹುದು.
ವಿಡಿಯೋ ಮತ್ತು ವಾಯ್ಸ್ ನೋಟ್ಸ್: ಪಾರ್ಟಿಗೆ ಬರಲು ಸಾಧ್ಯವಾಗದವರಿಗೆ ಅಲ್ಲಿನ ಸುಂದರ ಕ್ಷಣಗಳನ್ನು ವಾಯ್ಸ್ ಅಥವಾ ವಿಡಿಯೋ ನೋಟ್ ಮೂಲಕ ಕಳುಹಿಸಬಹುದು.
ನೀವು ನ್ಯೂಯಾರ್ಕ್‌ನಲ್ಲಿರಲಿ ಅಥವಾ ಮೈಸೂರು, ಹುಬ್ಬಳ್ಳಿಯಲ್ಲಿರಲಿ ಪ್ರಪಂಚದಾದ್ಯಂತ ಜನರು ತಮ್ಮ ಆತ್ಮೀಯರೊಂದಿಗೆ ಖಾಸಗಿಯಾಗಿ ಮತ್ತು ಸುರಕ್ಷಿತವಾಗಿ ಸಂಪರ್ಕದಲ್ಲಿರಲು ವಾಟ್ಸಾಪ್ ಸಹಾಯ ಮಾಡುತ್ತದೆ. ನಿಮ್ಮೆಲ್ಲರಿಗೂ ವಾಟ್ಸಾಪ್ ತಂಡದ ಕಡೆಯಿಂದ ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ಕೋರಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile