Motorola Edge 70 ಬಿಡುಗಡೆಗೆ ಮುಂಚೆಯೇ ಎಲ್ಲಾ ಡೀಟೇಲ್ ಔಟ್! ನಿರೀಕ್ಷಿತ ಬೆಲೆಯೊಂದಿಗೆ ಮತ್ತಷ್ಟು ವಿವರ ಇಲ್ಲಿದೆ!

HIGHLIGHTS

ಭಾರತದಲ್ಲಿ ಮುಂಬರಲಿರುವ Motorola Edge 70 ಸ್ಮಾರ್ಟ್ಫೋನ್ ಬಿಡುಗಡೆ ಕಂಫಾರ್ಮ್ ಆಯ್ತು.

Motorola Edge 70 ಸ್ಮಾರ್ಟ್ಫೋನ್ 15ನೇ ಡಿಸೆಂಬರ್ 2025 ರಂದು ಬಿಡುಗಡೆಯಾಗಲಿದೆ.

Motorola Edge 70 ಸ್ಮಾರ್ಟ್ಫೋನ್ 50MP ಸೇಲ್ಫಿ ಕ್ಯಾಮೆರಾ ಮತ್ತು Snapdragon ಚಿಪ್ ಹೊಂದಿದೆ.

Motorola Edge 70 ಬಿಡುಗಡೆಗೆ ಮುಂಚೆಯೇ ಎಲ್ಲಾ ಡೀಟೇಲ್ ಔಟ್! ನಿರೀಕ್ಷಿತ ಬೆಲೆಯೊಂದಿಗೆ ಮತ್ತಷ್ಟು ವಿವರ ಇಲ್ಲಿದೆ!

ಭಾರತದಲ್ಲಿ ಮುಂಬರುವ ಮೊಟೊರೊಲಾದ ಪವರ್ಫುಲ್ ಮತ್ತು ಪ್ರೀಮಿಯಂ ಶ್ರೇಣಿಯ ಈ Motorola Edge 70 ಸ್ಮಾರ್ಟ್ಫೋನ್ ಸಿಕ್ಕಾಪಟ್ಟೆ ಸ್ಲಿಮ್ ವಿನ್ಯಾಸದೊಂದಿಗೆ ಕೇವಲ 5.99mm ಗಾತ್ರದೊಂದಿಗೆ ಹೈಲೈಟ್ ಆಗಿದೆ. ಕಂಪನಿ ಈ ಸ್ಮಾರ್ಟ್ಫೋನ್ ಅನ್ನು 15ನೇ ಡಿಸೆಂಬರ್ 2025 ರಂದು ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಲಿದೆ. ಈ ಸ್ಮಾರ್ಟ್ಫೋನ್ ಮತ್ತಷ್ಟು ಅನೇಕ ವಿಶೇಷನ್ಗಳನ್ನು ನೋಡುವುದಾದರೆ ಇದು 50MP ಸೇಲ್ಫಿ ಕ್ಯಾಮೆರಾ, 1.5k 120Hz pOLED ಡಿಸ್ಪ್ಲೇ ಮತ್ತು ಪವರ್ಫುಲ್ Snapdragon ಚಿಪ್‌ನೊಂದಿಗೆ ಬರಲು ಸಿದ್ಧವಾಗಿದೆ. ಈಗಾಗಲೇ ಕಂಪನಿ ಇದರ ಬಗ್ಗೆ ಫ್ಲಿಪ್‌ಕಾರ್ಟ್ ಮೈಕ್ರೋಸೈಟ್ ಪೇಜ್ ಸಹ ಲೈವ್ ಮಾಡಿದೆ.

Digit.in Survey
✅ Thank you for completing the survey!

Also Read: ನಿಮ್ಮ ಮನೆಯಲ್ಲಿ ಯಾರಾದರೂ UPI ಬಳಸುತ್ತಿದ್ದಾರೆ ವಂಚನೆಯಿಂದ ಮುಕ್ತರಾಗಲು ಈ ಅಂಶಗಳ ಬಗ್ಗೆ ತಿಳಿದಿರಬೇಕು!

Motorola Edge 70 ಸ್ಮಾರ್ಟ್ಫೋನ್ ಡಿಸೈನ್ ಹೇಗಿದೆ?

Motorola Edge 70 ಸ್ಮಾರ್ಟ್ಫೋನ್ ಸಿಕ್ಕಾಪಟ್ಟೆ ಸ್ಲಿಮ್ ವಿನ್ಯಾಸದೊಂದಿಗೆ ಕೇವಲ 5.99mm ಗಾತ್ರದೊಂದಿಗೆ ಹೈಲೈಟ್ ಆಗಿದೆ ಅಂದ್ರೆ ಸಾಮಾನ್ಯವಾಗಿ ನಿಮ್ಮ ಫೋನಲ್ಲಿರುವ ಹೆಡ್ಫೋನ್ ಜಾಕ್ 3.5mm ಆಗಿರುತ್ತದೆ ಅಂದರೆ ನೀವೇ ಅರ್ಥ ಮಾಡಿಕೊಳ್ಳಿ ಈ ಸ್ಮಾರ್ಟ್ಫೋನ್ ಎಷ್ಟು ತೆಳುವಾಗಲಿದೆ. ಕಂಪನಿಯು ಪ್ರಸ್ತುತ ದಪ್ಪ ಅಥವಾ ಅದರ ಕೊರತೆಯನ್ನು ಪ್ರಮುಖ ಮಾರಾಟದ ಅಂಶವಾಗಿ ಮಾರಾಟ ಮಾಡುತ್ತಿದೆ. ಅಲ್ಲದೆ ಈ ಮೊಟೊರೊಲಾ ಫೋನ್ ಅನ್ನು ಒಂದು ಸಾಮಾನ್ಯ ಪೆನ್ಸಿಲ್ ವಿರುದ್ಧ ನಿಲ್ಲಿಸಿ ಇದೆಷ್ಟು ತೆಳುವಾಗಿದೆ ಎಂದು ತೋರಿಸಿದೆ. ಪೆನ್ಸಿಲ್ ಸುಮಾರು 7mm ದಪ್ಪವನ್ನು ಅಳೆಯುತ್ತದೆ ಆದರೆ Moto Edge 70 ಕೇವಲ 5.99mm ಅಳತೆಗಳನ್ನು ಹೊಂದಿದೆ.

Motorola Edge 70 all details out

Motorola Edge 70 ಸ್ಮಾರ್ಟ್ಫೋನ್ ನಿರೀಕ್ಷಿತ ಬೆಲೆ ಎಷ್ಟು?

ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಸ್ಮಾರ್ಟ್ಫೋ ಬೆಲೆ ಮತ್ತು ಮತ್ತು ಲಭ್ಯತೆಯ ಬಗ್ಗೆ ಮಾತನಾಡುವುದಾದರೆ ಕಂಪನಿ ಈ ಸ್ಮಾರ್ಟ್ಫೋನ್ ಬೆಲೆಯನ್ನು ಇನ್ನೂ ಅಧಿಕೃತವಾಗಿ ಬಿಡುಗಡೆಗೊಳಿಸಿಲ್ಲ. ಆದರೆ ಇದರ ಫೀಚರ್ ಮತ್ತು ವಿಶೇಷಣಗಳ ಆಧಾರದ ಮೇರೆಗೆ ಈ ಸ್ಮಾರ್ಟ್ಫೋನ್ ಒಟ್ಟು ಎರಡು ರೂಪಾಂತರಗಳಲ್ಲಿ ನಿರೀಕ್ಷಿಸಲಾಗಿದೆ. ಮೊದಲಿಗೆ ಈ ಸ್ಮಾರ್ಟ್ಫೋನ್ 8GB RAM ಮತ್ತು 256GB ಸ್ಟೋರೇಜ್ ಸುಮಾರು 23,999 ರೂಗಳಿಗೆ ಮತ್ತೊಂದು 12GB RAM ಮತ್ತು 512GB ಸ್ಟೋರೇಜ್ ಅನ್ನು ಸುಮಾರು 24,999 ರೂಗಳಿಗೆ ನಿರೀಕ್ಷಿಸಲಾಗಿದೆ ಆದರೆ ಈ ಸ್ಮಾರ್ಟ್ಫೋನ್ ಬಿಡುಗಡೆಯ ನಂತರವಷ್ಟೇ ಈ ಮಾಹಿತಿಯನ್ನು ಖಚಿತಪಡಿಸಲಾಗಿದೆ. ಅಲ್ಲದೆ ಈಗಾಗಲೇ ಹೇಳಿರುವಂತೆ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಿ ಮಾರಾಟವಾಗಲಿದೆ.

Also Read: ಅಮೆಜಾನ್‌ನಲ್ಲಿ ಇಂದು ಸೋನಿಯ ಈ Dolby Digital Soundbar ಮೇಲೆ ಭರ್ಜರಿ ಡಿಸ್ಕೌಂಟ್‌ಗಳು ಲಭ್ಯ!

Motorola Edge 70 ಸ್ಮಾರ್ಟ್ಫೋನ್ ಫೀಚರ್ಗಳೇನು?

Motorola Edge 70 ಸ್ಮಾರ್ಟ್ಫೋನ್ 6.7 ಇಂಚಿನ 1.5K 120Hz AMOLED (1,080×2,436 ಪಿಕ್ಸೆಲ್‌ಗಳು) ಡಿಸ್ಪ್ಲೇ ಪೂರ್ತಿ 120Hz ರಿಫ್ರೆಶ್ ರೇಟ್ ಹೊಂದಿದೆ. ಸ್ಮಾರ್ಟ್ಫೋನ್ ಸ್ಕ್ರೀನ್ ಪ್ರೊಟೆಕ್ಷನ್‌ಗಾಗಿ ಗೊರಿಲ್ಲಾ ಗ್ಲಾಸ್ 7i ಗ್ಲಾಸ್ ಹೊಂದಿದೆ. Motorola Edge 70 ಫೋನ್ ಕಾಮೆರದಲ್ಲಿ ಪ್ರೈಮರಿ 50MP ಸೆನ್ಸರ್ ಹೊಂದಿದ್ದು AI- ಬೆಂಬಲಿತ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಈ ಸ್ಮಾರ್ಟ್ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 50MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.

Motorola Edge 70 all details out

Motorola Edge 70 ಫೋನ್ Qualcomm Snapdragon 7 Gen 4 ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 16 ಆಪರೇಟಿಂಗ್ ಸಿಸ್ಟಮ್ ಜೊತೆಗೆ ಬರುತ್ತದೆ. ಇದರ ಕನೆಕ್ಟಿಂಗ್ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi, 3.5mm Audio Jack, USB Type C Charge Port, AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ Motorola Edge 70 ಸ್ಮಾರ್ಟ್ಫೋನ್‌ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 68W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಕಂಪನಿ ಇದರಲ್ಲಿ 3 ವರ್ಷದ ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಮತ್ತು 4 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ನೀಡುವುದಾಗಿ ಭರವಸೆ ನೀಡಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo