Reliance Jio ಬರೋಬ್ಬರಿ 90 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ನೀಡುವ ಜಬರ್ದಸ್ತ್ ಕಾಂಬೋ ಪ್ಲಾನ್!

HIGHLIGHTS

ಜಿಯೋ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ನೀಡುವ ಜಬರ್ದಸ್ತ್ ಕಾಂಬೋ ಪ್ಲಾನ್ ಬಗ್ಗೆ ತಿಳಿಯಿರಿ.

ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಹೊಸದಾಗಿ ಹಲವು ವಿಶೇಷ ಕೊಡುಗೆಗಳನ್ನು ಪ್ರಕಟಿಸಲಾಗಿದೆ.

ಪೂರ್ತಿ 90 ದಿನಗಳಿಗೆ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು 3 ತಿಂಗಳವರೆಗೆ ಉಚಿತವಾಗಿ ನೀಡಲಾಗುತ್ತದೆ.

Reliance Jio ಬರೋಬ್ಬರಿ 90 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ನೀಡುವ ಜಬರ್ದಸ್ತ್ ಕಾಂಬೋ ಪ್ಲಾನ್!

ಭಾರತದ ಜನಪ್ರಿಯ ಮತ್ತು ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ನಿಮಗೆ ಬರೋಬ್ಬರಿ 90 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ನೀಡುವ ಜಬರ್ದಸ್ತ್ ಕಾಂಬೋ ಪ್ಲಾನ್ ಬಗ್ಗೆ ತಿಳಿಯಿರಿ. ಯಾಕೆಂದರೆ ಜಿಯೋ ತನ್ನ ಬಳಕೆದಾರರಿಗೆ ಹೊಸದಾಗಿ ಹಲವು ವಿಶೇಷ ಕೊಡುಗೆಗಳನ್ನು ಪ್ರಕಟಿಸಲಾಗಿದ್ದು ಪೂರ್ತಿ 90 ದಿನಗಳಿಗೆ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು 3 ತಿಂಗಳವರೆಗೆ ಉಚಿತವಾಗಿ ನೀಡಲಾಗುತ್ತದೆ. ಜಿಯೋದ ಈ ಪ್ರಿಪೇಯ್ಡ್ ಯೋಜನೆಯು ದೀರ್ಘಾವಧಿಯ ಮಾನ್ಯತೆಯೊಂದಿಗೆ ಸಮತೋಲಿತ ಪ್ರಯೋಜನಗಳನ್ನು ವೀಕ್ಷಿಸಲು ಬಳಕೆದಾರರು ವಿನ್ಯಾಸಗೊಳಿಸಲಾದ ಒಂದು ಆಕರ್ಷಕ ಆಯ್ಕೆಯಾಗಿದೆ. ಹಾಗಾದ್ರೆ ಜಿಯೋದ ಈ 899 ರೂಗಳ ರಿಚಾರ್ಜ್ ಯೋಜನೆಯ ಸಂಪೂರ್ಣ ಮಾಹಿತಿಗಳೇನು ಎನ್ನುವುದನ್ನು ಈ ಕೆಳಗೆ ತಿಳಿಯಿರಿ.

Digit.in Survey
✅ Thank you for completing the survey!

Reliance Jio ಬರೋಬ್ಬರಿ 90 ದಿನಗಳ ಪ್ಲಾನ್:

ಇದು ಪ್ರತಿದಿನ 2GB ಹೈ-ಸ್ಪೀಡ್ ಡೇಟಾವನ್ನು ನೀಡುವುದರೊಂದಿಗೆ ಹೆಚ್ಚುವರಿಯಾಗಿ 20GB ಒಟ್ಟು ಡೇಟಾವನ್ನು ನೀಡುತ್ತದೆ. ಒಟ್ಟಾರೆಯಾಗಿ 90 ದಿನಗಳ ಅವಧಿಗೆ 200GB ಯಷ್ಟು ಡೇಟಾ ಲಭ್ಯವಾಗುತ್ತದೆ. ಇದು ಹೆಚ್ಚು ಡೇಟಾ ಬಳಸುವವರಿಗೆ ಆಯ್ಕೆಯಾಗಿದೆ. ಡೇಟಾ ಮಿತಿಯ ನಂತರವೂ ಇಂಟರ್ನೆಟ್ ಸಂಪರ್ಕವು ಮುಂದುವರಿಯುತ್ತದೆ.

Reliance Jio

ಇದರೊಂದಿಗೆ ಬಳಕೆದಾರರು ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯ್ಸ್ ಕರೆಗಳು ಮತ್ತು ಪ್ರತಿದಿನ 100 SMS ಸೌಲಭ್ಯವನ್ನು ಪಡೆಯುತ್ತಾರೆ. ಪ್ರಮುಖವಾಗಿ ಈ ಯೋಜನೆ ಟ್ರೂ 5G ಯೋಜನೆಗಳು ಬರುವುದರಿಂದ 5G ನೆಟ್ ವರ್ಕ್ ವಿನ್ಯಾಸ ಮತ್ತು 5G ಸಪೋರ್ಟ್ ಮಾಡುವ ಫೋನ್ ಹೊಂದಿರುವ ಬಳಕೆದಾರರು ಅನಿಯಮಿತ 5G ಡೇಟಾವನ್ನು ಉಚಿತವಾಗಿ ಪಡೆಯುತ್ತಾರೆ.

Also Read: Instagram or YouTube: ಯಾವ ಪ್ಲಾಟ್‌ಫಾರ್ಮ್‌ನಿಂದ ಹೆಚ್ಚು ಆದಾಯ ಮತ್ತು ಇವುಗಳ ನಡುವಿನ ವ್ಯತ್ಯಾಸಗಳೇನು?

ಜಿಯೋದ ಯೋಜನೆಯ ಹೆಚ್ಚುವರಿಯ ಪ್ರಯೋಜನಗಳೇನು?

ಟೆಲಿಕಾಂ ವಲಯದಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಿದ ಜಿಯೋ ತನ್ನ ಬಳಕೆದಾರರಿಗೆ ಹೊಸದಾಗಿ ಹಲವು ವಿಶೇಷ ಕೊಡುಗೆಗಳನ್ನು ಪ್ರಕಟಿಸಲಾಗಿದೆ. ಈ ಕೊಡುಗೆಗಳಲ್ಲಿ ಹಣಕಾಸು ಮತ್ತು ಡಿಜಿಟಲ್ ಸೇವೆಗಳಿಗೆ ಆದ್ಯತೆಯನ್ನು ನೀಡುತ್ತಿದೆ. ಜಿಯೋ ಫೈನಾನ್ಸ್ ಅಡಿಯಲ್ಲಿ ಬಳಕೆದಾರರು Jio Gold ಖರೀದಿಯ ಮೇಲೆ ಶೇ. 1ರಷ್ಟು ಹೆಚ್ಚುವರಿ ಲಾಭವನ್ನು ಪಡೆಯಬಹುದು. ಈ ಕೊಡುಗೆ ಗ್ರಾಹಕರು +91-8010000524 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಕ್ಲೈಮ್ ಮಾಡಬಹುದು. ಮನರಂಜನೆಗಾಗಿ ಹೊಸ ಜಿಯೋಹೋಮ್ ಸಂಪರ್ಕ ಪಡೆಯುವವರಿಗೆ ಮೊದಲ 2 ತಿಂಗಳ ಉಚಿತ ಪ್ರಯೋಗ ಬಳಕೆಯ ಅವಕಾಶ ಲಭ್ಯವಿದೆ.

ಎಲ್ಲರಿಗೂ ಜಿಯೋಹಾಟ್‌ಸ್ಟಾರ್ ಚಂದಾದಾರಿಕೆಯನ್ನು 3 ತಿಂಗಳವರೆಗೆ ಉಚಿತವಾಗಿ ನೀಡಲಾಗುತ್ತದೆ. ಡಿಜಿಟಲ್ ಸ್ಟೋರೇಜ್ ಜಿಯೋ ತನ್ನ ಹೊಸ Jio Cloud ಸೇವೆಯ ಮೂಲಕ ಬಳಕೆದಾರರಿಗೆ 50GB ಉಚಿತ ಸ್ಟೋರೇಜ್ ಅನ್ನು ಒದಗಿಸಲಾಗಿದೆ. ಯುವ ಬಳಕೆದಾರರಿಗಾಗಿ ಅತ್ಯಂತ ವಿಶೇಷ ಕೊಡುಗೆಯಾಗಿ 18 ರಿಂದ 25 ವರ್ಷ ವಯಸ್ಸಿನವರಿಗೆ Google Gemini ಬರೋಬ್ಬರಿ 18 ತಿಂಗಳ ಪ್ರೋ ಪ್ಲಾನ್ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ. ಇದರ ಮೌಲ್ಯ ₹ 35,100 ಆಗಿದೆ. ಈ ಕೊಡುಗೆಗಳು ಜಿಯೋ ಬಳಕೆದಾರರಿಗೆ ಹಣಕಾಸು, ಮನರಂಜನೆ, ತಂತ್ರಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಪ್ರಯೋಜನಗಳನ್ನು ಒದಗಿಸುತ್ತವೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo