Vivo X300 Series ಬಿಡುಗಡೆಗೆ ಡೇಟ್ ಕಂಫಾರ್ಮ್ ಆಯ್ತು! ಸಿಕ್ಕಾಪಟ್ಟೆ ಸೂಪರ್ ಕ್ಯಾಮೆರಾದೊಂದಿಗೆ ನಿರೀಕ್ಷೆ!

HIGHLIGHTS

Vivo X300 Series ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಬಿಡುಗಡೆಗೆ ಡೇಟ್ ಕಂಫಾರ್ಮ್ ಆಗಿದೆ.

Vivo X300 Series ಸ್ಮಾರ್ಟ್‌ಫೋನ್‌ಗಳು ZEISS ಕ್ಯಾಮೆರಾಗಳೊಂದಿಗೆ ಬರುವುದಾಗಿ ಖಚಿತಪಡಿಸಿವೆ.

Vivo X300 Series ಫೋನ್‌ಗಳು ಮುಂದಿನ ತಿಂಗಳು 2ನೇ ಡಿಸೆಂಬರ್ 2025 ರಂದು ಬಿಡುಗಡೆಯಾಗಲಿವೆ.

Vivo X300 Series ಬಿಡುಗಡೆಗೆ ಡೇಟ್ ಕಂಫಾರ್ಮ್ ಆಯ್ತು! ಸಿಕ್ಕಾಪಟ್ಟೆ ಸೂಪರ್ ಕ್ಯಾಮೆರಾದೊಂದಿಗೆ ನಿರೀಕ್ಷೆ!

ಭಾರತದಲ್ಲಿ ಮುಂಬರಲಿರುವ ವಿವೋ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ Vivo X300 Series ಅನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಕಂಪನಿ ಈ ಸರಣಿಯಲ್ಲಿ ಒಟ್ಟು 2 ಸ್ಮಾರ್ಟ್ಫೋನ್ಗಳನ್ನು ಕಂಫಾರ್ಮ್ ಮಾಡಿದ್ದೂ Vivo X300 ಮತ್ತು Vivo X300 Pro ಎಂಬ ಎರಡು ಫೋನ್‌ಗಳೊಂದಿಗೆ ಬರಲಿದೆ ಈ ಎರಡೂ ಫೋನ್‌ಗಳು ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿವೆ ಆದ್ದರಿಂದ ಅವುಗಳು ಯಾವ ವಿಶೇಷಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ ಎನ್ನುವುದನ್ನು ಊಹಿಸಬಹುದು. ಈ ಸ್ಮಾರ್ಟ್ಫೋನ್ಗಳು 3nm ಪ್ರಕ್ರಿಯೆಯಲ್ಲಿ ನಿರ್ಮಿಸಲಾದ MediaTek Dimensity 9500 ಪ್ರೊಸೆಸರ್ನೊಂದಿಗೆ ಬರುತ್ತದೆ. ಸ್ಮಾರ್ಟ್ ಫೋನ್‌ಗಳು Android 16 ಆಧಾರಿತ OriginOS 6 ನಲ್ಲಿ ಕಾರ್ಯನಿರ್ವಹಿಸುತ್ತವೆ.

Digit.in Survey
✅ Thank you for completing the survey!

Also Read: ಅಮೆಜಾನ್‌ನಲ್ಲಿ ಇಂದು boAt Dolby Atmos Soundbar ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ

Vivo X300 Series India launch Confirmed:

Vivo X300 Pro ಸ್ಮಾರ್ಟ್ಫೋನ್ 200MP ಟೆಲಿಫೋಟೋ ಸೆನ್ಸರ್ ಅನ್ನು ಹೊಂದಿರುತ್ತದೆ. ಎರಡೂ ಸ್ಮಾರ್ಟ್ಫೋನ್ಗಳು ZEISS ಟ್ಯೂನ್ಡ್ ಕ್ಯಾಮೆರಾ ಸಿಸ್ಟಮ್‌ನೊಂದಿಗೆ ಬರುತ್ತವೆ. ವಿವೋ ಈ ಸ್ಮಾರ್ಟ್ಫೋನ್ಗಳನ್ನು ಇದೆ 2ನೇ ಡಿಸೆಂಬರ್ 2025 ರಂದು ಭಾರತದಲ್ಲಿ ಬಿಡುಗಡೆಯಾಗಲಿರುವುದನ್ನು ದೃಢಪಡಿಸಲಾಗಿದೆ. ಇದು ಭಾರತದಲ್ಲಿ X200 ಸರಣಿಯ ಹಿಂದಿನ ಬಿಡುಗಡೆಗೆ ಅನುಗುಣವಾಗಿದೆ. ತಂತ್ರಜ್ಞಾನ ಉತ್ಸಾಹಿಗಳು ತುಂಬಾ ಉತ್ಸುಕರಾಗಿರುವ ವಿಷಯವೆಂದರೆ Origin OS 6 ಆಗಮನ. ಇದು X300 ಸರಣಿಯೊಂದಿಗೆ ಬದಲಾಗುತ್ತದೆ. ವಾಸ್ತವವಾಗಿ ಇದೆ 26ನೇ ನವೆಂಬರ್ 2025 ರಂದು ಬಿಡುಗಡೆಯಾಗುತ್ತಿರುವ iQOO 15 ಸಹ Origin OS 6 ನೊಂದಿಗೆ ಬರುತ್ತದೆ ಮತ್ತು ಗ್ರಾಹಕರಿಗೆ ಉತ್ತಮ ಆಪರೇಟಿಂಗ್ ಸಿಸ್ಟಮ್ ಅನುಭವವನ್ನು ನೀಡುತ್ತದೆ.

ವಿವೋ X300 Series ನಿರೀಕ್ಷಿತ ಫೀಚರ್ಗಳೇನು?

Vivo X300 ಮತ್ತು Vivo X300 Pro ಎರಡೂ ಮಾದರಿಗಳು ಮೀಡಿಯಾ ಟೆಕ್ ಡೈಮೆನ್ಸಿಟಿ 9500 3nm ಫ್ಲ್ಯಾಗ್‌ಶಿಪ್ ಪ್ರೊಸೆಸರ್‌ನಿಂದ ಚಾಲಿತವಾಗುವುದು ದೃಢಪಟ್ಟಿದೆ. ಇದು ಸುಧಾರಿತ ಇಮೇಜ್ ಪ್ರೊಸೆಸಿಂಗ್‌ಗಾಗಿ ವಿವೋದ ಇನ್-ಹೌಸ್ V3+ ಮತ್ತು ಪ್ರೊ ಇಮೇಜಿಂಗ್ VS1 ಚಿಪ್‌ಗಳಿಂದ ಪೂರಕವಾಗಿದೆ. ZEISS ಜೊತೆ ಸಹ-ವಿನ್ಯಾಸಗೊಳಿಸಲಾದ ಕ್ಯಾಮೆರಾ ಸೆಟಪ್ ಪ್ರಮುಖ ಹೈಲೈಟ್ ಆಗಿದ್ದು ಎರಡೂ ಫೋನ್‌ಗಳು ಶಕ್ತಿಯುತ 200MP ಕ್ಯಾಮೆರಾ ಸೆನ್ಸರ್ ಹೊಂದಿವೆ. ಇದರ ಸ್ಟ್ಯಾಂಡರ್ಡ್ Vivo X300 ಸ್ಮಾರ್ಟ್ಫೋನ್ 200MP ಸೆನ್ಸರ್ ಅನ್ನು ಮುಖ್ಯ ಕ್ಯಾಮೆರಾವಾಗಿ ಬಳಸುವ ನಿರೀಕ್ಷೆಯಿದೆ. ಆದರೆ Vivo X300 Pro ಮಾದರಿಯು ತೀವ್ರ ಜೂಮ್ ಸಾಮರ್ಥ್ಯಗಳಿಗಾಗಿ 200MP ZEISS APO ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿರುವ ಸಾಧ್ಯತೆಯಿದೆ.

Also Read: BSNL ಮಕ್ಕಳ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಹೊಸ 251 ರೂಗಳ ರಿಚಾರ್ಜ್ ಪ್ಲಾನ್ ಪರಿಚಯಿಸಿದೆ

ಜೊತೆಗೆ 50MP ಗಿಂಬಲ್-ಗ್ರೇಡ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಡಿಸ್ಪ್ಲೇ ವಿಷಯದಲ್ಲಿ ಎರಡೂ ರೂಪಾಂತರಗಳು 120Hz ರಿಫ್ರೆಶ್ ದರದೊಂದಿಗೆ LTPO AMOLED ಪ್ಯಾನೆಲ್‌ಗಳನ್ನು ಹೊಂದಿರಬಹುದು. Vivo X300 ಸ್ಮಾರ್ಟ್ಫೋನ್ 6000mAh ಸೆಲ್‌ಗೆ ಹೋಲಿಸಿದರೆ ಇದರ Vivo X300 Pro ಮಾದರಿಯು ದೊಡ್ಡ ಪರದೆ ಮತ್ತು 6510mAh ಬ್ಯಾಟರಿಯನ್ನು ಹೊಂದಿರುತ್ತದೆ. ಈ ಎರಡೂ 90W ವೈರ್ಡ್ ಮತ್ತು 40W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ. ಅಂತಿಮವಾಗಿ ಫೋನ್‌ಗಳು ಆಂಡ್ರಾಯ್ಡ್ 16-ಆಧಾರಿತ ಒರಿಜಿನ್ಓಎಸ್ 6 ಕಸ್ಟಮ್ ಬಳಕೆದಾರ ಇಂಟರ್ಫೇಸ್‌ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo