BSNL ಶೀಘ್ರದಲ್ಲೇ VoWi-Fi ಸೇವೆಗಳನ್ನು ಆರಂಭಿಸಲಿದ್ದು ನೆಟ್ವರ್ಕ್ ಇಲ್ಲದಿದ್ದರೂ ಕರೆ ಮಾಡಬಹುದು

HIGHLIGHTS

BSNL ಗ್ರಾಹಕರಿಗೆ ಸಿಕ್ಕಾಪಟ್ಟೆ ಪ್ರಯೋಜನಗಳನ್ನು ನೀಡುವ ಅತ್ಯುತ್ತಮ ಯೋಜನಗಳನ್ನು ಹೊಂದಿವೆ.

ನಿಮಗೊತ್ತಾ ನೆಟ್ವರ್ಕ್ ಇಲ್ಲದಿದ್ದರೂ ಈಗ VoWi-Fi ಬಳಸಿಕೊಂಡು ಅತ್ಯುತ್ತಮ ಕರೆಗಳ ಅನುಭವನ್ನು ಮಾಡಬಹುದು.

ಬಿಎಸ್ಎನ್ಎಲ್ ಶೀಘ್ರದಲ್ಲೇ VoWi-Fi ಸೇವೆಗಳನ್ನು ಆರಂಭಿಸಲಿದ್ದು ಕರೆಗಳ ಗುಣಮಟ್ಟವನ್ನು ಹೆಚ್ಚಿಸಲು ಮುಂದಾಗಿದೆ.

BSNL ಶೀಘ್ರದಲ್ಲೇ VoWi-Fi ಸೇವೆಗಳನ್ನು ಆರಂಭಿಸಲಿದ್ದು ನೆಟ್ವರ್ಕ್ ಇಲ್ಲದಿದ್ದರೂ ಕರೆ ಮಾಡಬಹುದು

BSNL VoWi-Fi Service: ಭಾರತದ ಜನಪ್ರಿಯ ಸ್ವದೇಶಿ ಟೆಲಿಕಾಂ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ತಮ್ಮ ಗ್ರಾಹಕರಿಗೆ ಸಿಕ್ಕಾಪಟ್ಟೆ ಪ್ರಯೋಜನಗಳನ್ನು ನೀಡುವ ಅತ್ಯುತ್ತಮ ಯೋಜನಗಳನ್ನು ಹೊಂದಿವೆ. ಅಲ್ಲದೆ ಕಂಪನಿ ಇತ್ತೀಚೆಗೆ ವಾಯ್ಸ್ ಓವರ್ ವೈ-ಫೈ (VoWi-Fi) ಎಂಬ ಹೊಸ ಸೇವೆಯನ್ನು ಶುರು ಮಾಡಲಿದ್ದು ಗ್ರಾಹಕರಿಗೆ ಉತ್ತಮ ಅನುಭವ ನೀಡಲು ಮತ್ತು ಖಾಸಗಿ ಕಂಪನಿಗಳೊಂದಿಗೆ ಸ್ಪರ್ಧಿಸಲು ಇದು BSNL ತೆಗೆದುಕೊಂಡ ಒಂದು ದೊಡ್ಡ ಹೆಜ್ಜೆ. ಯಾಕೆಂದರೆ ಈ ಫೀಚರ್ ಅನ್ನು ನೆಟ್ವರ್ಕ್ ಇಲ್ಲದಿದ್ದರೂ ಈ ಫೀಚರ್ ಬಳಸಿಕೊಂಡು ಅತ್ಯುತ್ತಮ ಕರೆಗಳ ಅನುಭವನ್ನು ಪಡೆಯಬಹುದು. ಹಾಗಾದ್ರೆ ಈ ಫೀಚರ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಇದನ್ನು ಬಳಸುವುದು ಹೇಗೆ ಎನ್ನುವುದನ್ನು ತಿಳಿಯಿರಿ.

Digit.in Survey
✅ Thank you for completing the survey!

VoWi-Fi ಎಂದರೇನು?

ಮೊದಲಿಗೆ ಈ VoWiFi ಅಂದರೆ ಏನು ಎನ್ನುವುದು ತಿಳಿಯುವುದು ಮುಖಯವಾಗಿದೆ. VoWiFi ಅಂದ್ರೆ ವಾಯ್ಸ್ ಓವರ್ ವೈ-ಫೈ ಎಂದು ಕರೆಯಲಾಗುತ್ತದೆ. ಇದೊಂದು ಉಚಿತ ವಾಯ್ಸ್ ಕರೆ ಬೆಂಬಲಿಸುವ ಫೀಚರ್ ಆಗಿದ್ದು ಇದನ್ನು ನೀವು ಕರೆ ಮಾಡುವ ಮೊದಲು ಮೊಬೈಲ್ ನೆಟ್‌ವರ್ಕ್ (2G, 3G, ಅಥವಾ 4G) ಬದಲಿಗೆ ಫೋನ್ ಮೂಲಕ VoWiFi ಬಳಸಬೇಕಾಗುತ್ತದೆ. ಇದರಿಂದ ಮೊಬೈಲ್ ನೆಟ್ವರ್ಕ್ ಇಲ್ಲದ ಸ್ಥಳಗಳಲ್ಲೂ ಉತ್ತಮ ಗುಣಮಟ್ಟದ ಕರೆಗಳು ಮಾಡಲು ಸಾಧ್ಯವಾಗುತ್ತವೆ. ಆದರೆ ಈ ಫೀಚರ್ ಬಳಸಲು ನಿಮ್ಮ ಫೋನ್ ಸಪೋರ್ಟ್ ಮಾಡಬೇಕು ಎನ್ನುವುದನ್ನು ಗಮನಿಸಬೇಕಾಗಿದೆ. ಈಗಾಗಲೇ ಬೇರೆ ಟೆಲಿಕಾಂ ಕಂಪನಿಗಳಾದ ಜಿಯೋ ಮತ್ತು ಏರ್ಟೆಲ್ ತಮ್ಮ ಬಳಕೆದಾರರಿಗೆ ನೀಡುತ್ತಿವೆ ಈಗ ಬಿಎಸ್ಎನ್ಎಲ್ ಬಾರಿಯಾಗಿದೆ.

BSNL VoWi-Fi Service

VoWi-Fi ಉಪಯೋಗಗಳೇನು?

ಮೊಬೈಲ್ ಸಿಗ್ನಲ್ ಇಲ್ಲದಿರುವುದು ಅಥವಾ ತುಂಬಾ ದುರ್ಬಲವಾಗಿರುವ ಪ್ರದೇಶಗಳಲ್ಲಿಯೂ ನಿರಂತರವಾಗಿ ಮಾತನಾಡುವ ಸಂಪರ್ಕವನ್ನು ಖಚಿತಪಡಿಸುವುದು. ಇದು ಕಟ್ಟಡಗಳ ಒಳಗೆ, ನೆಲಮಾಳಿಗೆಗಳಲ್ಲಿ ಅಥವಾ ದಪ್ಪ ಗೋಡೆಗಳಿರುವ ಜಾಗಗಳಲ್ಲಿ ಮೊಬೈಲ್ ಸಿಗ್ನಲ್ ಕಡಿಮೆಯಾದಾಗ ಕರೆಗಳು ಕಟ್ ಆಗುವುದನ್ನು ಅಥವಾ ಸ್ಪಷ್ಟತೆ ಇಲ್ಲದಿರುವುದನ್ನು ತಪ್ಪಿಸುತ್ತದೆ.

Also Read: 4K Google Smart TV: ಅಮೆಜಾನ್‌ನಲ್ಲಿ ಇಂದು 43 ಇಂಚಿನ ಗೂಗಲ್ ಸ್ಮಾರ್ಟ್ ಟಿವಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯ!

ವೈ-ಫೈ ಜಾಲದ ಹೆಚ್ಚು ಬ್ಯಾಂಡ್‌ವಿಡ್ತ್ ಸಾಮರ್ಥ್ಯವನ್ನು ಬಳಸುವುದರಿಂದ ಸಾಮಾನ್ಯ 2G/3G ಕರೆ ಉತ್ತಮವಾದ HD ಗುಣಮಟ್ಟದ ವಾಯ್ಸ್ ಕರೆಗಳನ್ನು ನೀಡಲಾಗುವುದು. ಈಗಾಗಲೇ ಹೇಳಿರುವಂತೆ ಮೊಬೈಲ್ ನೆಟ್ವರ್ಕ್ ಇಲ್ಲದ ಸ್ಥಳಗಳಲ್ಲೂ ಉತ್ತಮ ಗುಣಮಟ್ಟದ ಕರೆಗಳು ಮಾಡಲು ಸಾಧ್ಯವಾಗುತ್ತವೆ. ಆದರೆ ಈ ಫೀಚರ್ ಬಳಸಲು ನಿಮ್ಮ ಫೋನ್ ಸಪೋರ್ಟ್ ಮಾಡಬೇಕು ಎನ್ನುವುದನ್ನು ಗಮನಿಸಬೇಕಾಗಿದೆ.

VoWi-Fi ಸೇವೆಯನ್ನು ಬಳಸುವುದು ಹೇಗೆ?

  • ಆಂಡ್ರಾಯ್ಡ್‌ನಲ್ಲಿ ಬಳಸಲು ಮೊದಲು ಫೋನ್ ಸೆಟ್ಟಿಂಗ್‌ಗಳಿಗೆ ಹೋಗಿ ನಂತರ ನೆಟ್‌ವರ್ಕ್ ಮತ್ತು ಇಂಟರ್‌ನೆಟ್ ಅಥವಾ ಸಂಪರ್ಕಗಳಿಗೆ ಹೋಗಿ.
  • ಈಗ ಮೊಬೈಲ್ ನೆಟ್‌ವರ್ಕ್ ಅಥವಾ ಸಿಮ್ ಮತ್ತು ನೆಟ್‌ವರ್ಕ್ ಆಯ್ಕೆ ಮಾಡಿ ಅಲ್ಲಿ ವೈ-ಫೈ ಕಾಲಿಂಗ್ (ವೈ-ಫೈ ಕರೆ) ಅಥವಾ ವಾಯ್ಸ್ ಗಾಗಿ ವೈ-ಫೈ (ವಾಯ್ಸ್ ಓವರ್ ವೈ-ಫೈ) ಆಯ್ಕೆಯನ್ನು ಹುಡುಕಿ.
  • ಈಗ ನಿಮ್ಮ ಸ್ಮಾರ್ಟ್ಫೋನ್ ಈ ಫೀಚರ್ ಅನ್ನು ಸಪೋರ್ಟ್ ಮಾಡುವುದಾದರೆ ಈ ಫೀಚರ್ ಸೆಟ್ಟಿಂಗ್ ಸರ್ಚ್ ಮೂಲಕ ಸಹ ಹುಡುಕಿ ನೋಡಬಹುದು ಅದನ್ನು ಆನ್ ಮಾಡಿ ಮಾಡಿ ಅಷ್ಟೇ.
  • ಐಫೋನ್‌ನಲ್ಲಿ ಮೊದಲ ಸೆಟ್ಟಿಂಗ್‌ಗಳು ಸೆಟ್ಟಿಂಗ್‌ಗಳಿಗೆ ಹೋಗಿ ಸೆಲ್ಯುಲಾರ್ ಮೂಲಕ ವೈ-ಫೈ ಕಾಲಿಂಗ್ (ವೈ-ಫೈ ಕರೆ) ಹೋಗಿ.

ಈಗ ಅಲ್ಲಿ ವೈ-ಫೈ ಕಾಲಿಂಗ್ ಆನ್ ಡಿಸ್ ಐಫೋನ್ ಅನ್ನು ಆನ್ ಮಾಡಿ ಮಾಡಿ. ಕೆಲವೊಮ್ಮ ಸಪೋರ್ಟ್ ಮಾಡುವ ಫೋನ್ಗಳಲ್ಲಿ ಮೊದಲೇ ಆನ್ ಮಾಡಲಾಗಿರುತ್ತದೆ. ನಿಮ್ಮ ಫೋನ್ ಮೊಬೈಲ್ ಸಿಗ್ನಲ್ ದುರ್ಬಲವಾದಾಗ ತಾನಾಗಿಯೇ ವೈ-ಫೈ ಸಂಪರ್ಕಕ್ಕೆ ಬದಲಾಗುತ್ತದೆ. ಆ ಸಮಯದಲ್ಲಿ ನಿಮ್ಮ ಸ್ಕ್ರೀನ್ ಮೇಲೆ ನೆಟ್‌ವರ್ಕ್ ಹೆಸರಿನ ಪಕ್ಕದಲ್ಲಿ ಒಂದು ಸಣ್ಣ ವೈ-ಫೈ ಚಿಹ್ನೆ (Wi-Fi ಐಕಾನ್) ಕಾಣಿಸಿಕೊಳ್ಳುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo