Nothing Phone 3a Lite ಬಿಡುಗಡೆ ಆಗೋಯ್ತು! ಬೆಲೆ ಮತ್ತು ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ
ಇಂದು ಹೊಸ Nothing Phone 3a Lite ಸ್ಮಾರ್ಟ್ ಫೋನ್ ಅಧಿಕೃತವಾಗಿ ಬಿಡುಗಡೆಯಾಗಿದೆ.
ಈ ಬಾರಿ ಗ್ಲಿಫ್ ಇಂಟರ್ಫೇಸ್ ಬದಲಿಗೆ ಒಂದೇ 'ಗ್ಲಿಫ್ ಲೈಟ್' ಮತ್ತು LED ನೋಟಿಫಿಕೇಷನ್ ಸಿಸ್ಟಂ ಹೊಂದಿದೆ.
Nothing Phone 3a Lite ಸ್ಮಾರ್ಟ್ಫೋನ್ ಈಗಾಗಲೇ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಲಭ್ಯ.
ಜನಪ್ರಿಯ ನಥಿಂಗ್ ಸ್ಮಾರ್ಟ್ಫೋನ್ ಬ್ರಾಂಡ್ ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಹೊಸ Nothing Phone 3a Lite ಸ್ಮಾರ್ಟ್ ಫೋನ್ ಅಧಿಕೃತವಾಗಿ ಬಿಡುಗಡೆಯಾಗಿದ್ದು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಅತ್ಯುತ್ತಮ ಆರಂಭಿಕ ಬೆಲೆಯೊಂದಿಗೆ ಕಂಪನಿಯ ಶ್ರೇಣಿಯಲ್ಲಿ ಅತ್ಯಂತ ಬಜೆಟ್ ಸ್ನೇಹಿ ಪ್ರವೇಶವಾಗಿದೆ. ಈ ಹೊಸ ಮಾದರಿಯು ನಥಿಂಗ್‌ನ ಸಿಗ್ನೇಚರ್ ಪಾರದರ್ಶಕ ವಿನ್ಯಾಸ ಮತ್ತು ಸೌಂದರ್ಯವನ್ನು ಉಳಿಸಿಕೊಂಡಿದೆ. ಆದರೆ ಪೂರ್ಣ ಗ್ಲಿಫ್ ಇಂಟರ್ಫೇಸ್ ಬದಲಿಗೆ ಒಂದೇ ‘ಗ್ಲಿಫ್ ಲೈಟ್’ ಮತ್ತು LED ನೋಟಿಫಿಕೇಷನ್ ಸಿಸ್ಟಂ ಅನ್ನು ಸರಳಗೊಳಿಸುವ ಮೂಲಕ ಬೆಲೆಯನ್ನು ಕೊಂಚ ಕಡಿಮೆಗೊಳಿಸಿದೆ. ಈ ಫೋನ್ ಯುರೋಪ್‌ನಲ್ಲಿ ತಕ್ಷಣವೇ ಖರೀದಿಗೆ ಲಭ್ಯವಿದ್ದರೂ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯ ಬಗ್ಗೆ ದೃಢಪಡಿಸಿಲ್ಲ.
SurveyNothing Phone 3a Lite ಬೆಲೆ ಮತ್ತು ಲಭ್ಯತೆ
Nothing Phone 3a Lite ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ ಲಭ್ಯವಿದ್ದು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು EUR 249 (ಸುಮಾರು 25,600 ರೂಗಳಿಗೆ) ಮತ್ತು ಇದರ ಮತ್ತೊಂದು ಇದರ 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು EUR 279 (ಸುಮಾರು 28,700 ರೂಗಳಿಗೆ) ಪಟ್ಟಿ ಮಾಡಲಾಗಿದೆ. ಈ Nothing Phone 3a Lite ಸ್ಮಾರ್ಟ್ಫೋನ್ ಈಗಾಗಲೇ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.
If your phone doesn’t light up your life, why? Presenting, Phone (3a) Lite. pic.twitter.com/XfxQb9vaDk
— Nothing (@nothing) October 29, 2025
Nothing Phone 3a Lite ಡಿಸ್ಪ್ಲೇ ಮತ್ತು ಕ್ಯಾಮೆರಾ ಫೀಚರ್ಗಳೇನು?
Nothing Phone 3a Lite ಸ್ಮಾರ್ಟ್ಫೋನ್ 6.77 ಇಂಚಿನ flexible AMOLED (1080 x 2392 ಪಿಕ್ಸೆಲ್‌ಗಳು) ಡಿಸ್ಪ್ಲೇ ಪೂರ್ತಿ 120Hz ರಿಫ್ರೆಶ್ ರೇಟ್ ಹೊಂದಿದೆ. ಸ್ಮಾರ್ಟ್ಫೋನ್ ಸ್ಕ್ರೀನ್ ಪ್ರೊಟೆಕ್ಷನ್‌ಗಾಗಿ ಗೊರಿಲ್ಲಾ ಗ್ಲಾಸ್ 7i ಗ್ಲಾಸ್ ಹೊಂದಿದೆ. Nothing Phone 3a Lite ಫೋನ್ ಕಾಮೆರದಲ್ಲಿ 50MP 1/1.57-inch Samsung ಸೆನ್ಸರ್ ಮತ್ತೊಂದು 8MP ಅಲ್ಟ್ರಾ ವೈಡ್ ಕ್ಯಾಮೆರಾವನ್ನು ಹೊಂದಿದೆ. ಸ್ಮಾರ್ಟ್ಫೋನ್ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 16MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.
Also Read: Moto G67 Power 5G ಸ್ಮಾರ್ಟ್ಫೋನ್ Sony ಕ್ಯಾಮೆರಾ ಮತ್ತು 7000mAh ಬ್ಯಾಟರಿಯೊಂದಿಗೆ ಬಿಡುಗಡೆಗೆ ಡೇಟ್ ಕಂಫಾರ್ಮ್!
ನಥಿಂಗ್ Phone 3a Lite ಹಾರ್ಡ್ವೇರ್, ಬ್ಯಾಟರಿ ಮತ್ತು ಸೆನ್ಸರ್ಗಳೇನು?
Nothing Phone 3a Lite ಫೋನ್ MediaTek Dimensity 7300 Pro 5G ಪ್ರೊಸೆಸರ್ ಮತ್ತು ಆಂಡ್ರಾಯ್ಡ್ 16 ಆಪರೇಟಿಂಗ್ ಸಿಸ್ಟಮ್ ಜೊತೆಗೆ ಬರುತ್ತದೆ. ಇದರ ಕನೆಕ್ಟಿಂಗ್ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi, 3.5mm Audio Jack, USB Type C Charge Port, AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ Nothing Phone 3a Lite ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು 33W ಫಾಸ್ಟ್ ಚಾರ್ಜಿಂಗ್ ಅನ್ನು ಪ್ಯಾಕ್ ಮಾಡುತ್ತದೆ. ಅಲ್ಲದೆ ಕಂಪನಿ ಇದರಲ್ಲಿ 3 ವರ್ಷದ ಆಪರೇಟಿಂಗ್ ಸಿಸ್ಟಮ್ ಅಪ್ಡೇಟ್ ಮತ್ತು 6 ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ನೀಡುವುದಾಗಿ ಭರವಸೆ ನೀಡಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile