1.91 ಇಂಚಿನ ಡಿಸ್ಪ್ಲೇ ಮತ್ತು ಬ್ಲೂಟೂತ್ ಕಾಲಿಂಗ್‌ನೊಂದಿಗೆ Fire-Boltt Lumos ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?

1.91 ಇಂಚಿನ ಡಿಸ್ಪ್ಲೇ ಮತ್ತು ಬ್ಲೂಟೂತ್ ಕಾಲಿಂಗ್‌ನೊಂದಿಗೆ Fire-Boltt Lumos ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
HIGHLIGHTS

ಹೊಸ Fire-Boltt Lumos ಸ್ಮಾರ್ಟ್ ವಾಚ್‌ನ ಪರಿಚಯದೊಂದಿಗೆ ಸ್ಮಾರ್ಟ್ ವಾಚ್ ಶ್ರೇಣಿಯನ್ನು ವಿಸ್ತರಿಸಿದೆ

Fire-Boltt Lumos ಸ್ಮಾರ್ಟ್ ವಾಚ್ ವಾಯ್ಸ್ ಅಸಿಸ್ಟೆಂಟ್ ಮತ್ತು ಬ್ಲೂಟೂತ್ ಕಾಲಿಂಗ್‌ನೊಂದಿಗೆ ಕೈಗೆಟಕುವ ಬೆಲೆಗೆ ಬಿಡುಗಡೆಯಾಗಿದೆ.

ಭಾರತದಲ್ಲಿ ಫೈರ್-ಬೋಲ್ಟ್ ತನ್ನ ಹೊಚ್ಚ ಹೊಸ Fire-Boltt Lumos ಸ್ಮಾರ್ಟ್ ವಾಚ್‌ನ ಪರಿಚಯದೊಂದಿಗೆ ಸ್ಮಾರ್ಟ್ ವಾಚ್ ಶ್ರೇಣಿಯನ್ನು ವಿಸ್ತರಿಸಿದೆ. ಕಳೆದ ವಾರ ಬ್ರ್ಯಾಂಡ್ 4GB ಆನ್‌ಬೋರ್ಡ್ ಸ್ಟೋರೇಜ್ ಒಳಗೊಂಡ ಫೈರ್-ಬೋಲ್ಟ್ ರಾಯಲ್ ಸ್ಮಾರ್ಟ್‌ವಾಚ್ ಅನ್ನು ಪ್ರಾರಂಭಿಸಿತು. ಈಗ ಲುಮೋಸ್ ಬಾರಿಯಾಗಿದ್ದು ಇದು ಪೂರ್ತಿ ಒಂದು ಚದರದ ಡಯಲ್ ಹೊಂದಿದ್ದು ಸ್ಟೇನ್‌ಲೆಸ್ ಸ್ಟೀಲ್ ಬಾಡಿ ಮತ್ತು ಮೆಟಾಲಿಕ್ ಸ್ಟ್ರಾಪ್ ಜೊತೆಗೆ ಪ್ರೀಮಿಯಂ ಲುಕ್ ಅನ್ನು ನೀಡುತ್ತದೆ. ಇದರ ಮತ್ತೊಂದೆಡೆ Fire-Boltt Lumos ಸ್ಮಾರ್ಟ್ ವಾಚ್ ವಾಯ್ಸ್ ಅಸಿಸ್ಟೆಂಟ್ ಮತ್ತು ಬ್ಲೂಟೂತ್ ಕಾಲಿಂಗ್‌ನೊಂದಿಗೆ ಕೈಗೆಟಕುವ ಬೆಲೆಗೆ ಬಿಡುಗಡೆಯಾಗಿದೆ.

Also Read: Airtel ಈ ಜಬರ್ದಸ್ತ್ 5G ಪ್ಲಾನ್‍ನಲ್ಲಿ Unlimited ಕರೆ ಮತ್ತು ಡೇಟಾದೊಂದಿಗೆ OTT ಸೇವೆಗಳು ಲಭ್ಯ!

Fire-Boltt Lumos ಸ್ಮಾರ್ಟ್ ವಾಚ್ ವಿಶೇಷಣಗಳು:

ಈ ಫೈರ್-ಬೋಲ್ಟ್ ಲುಮೋಸ್ ಸ್ಟೇನ್‌ಲೆಸ್ ಸ್ಟೀಲ್ ಬಾಡಿ ಮತ್ತು ಮೆಟಾಲಿಕ್ ಸ್ಟ್ರಾಪ್‌ನೊಂದಿಗೆ ಪ್ರೀಮಿಯಂ ಲುಕ್ ಹೊಂದಿದೆ. ಇದು 1.91 ಇಂಚಿನ HD ಸ್ಕ್ರೀನ್ ಹೊಂದಿದೆ. ಅಲ್ಲದೆ 240 x 280 ಪಿಕ್ಸೆಲ್‌ಗಳ ರೆಸಲ್ಯೂಶನ್ ನೀಡುತ್ತದೆ. ಇದು ಇಂಟರ್ನಲ್ ಮೈಕ್ರೊಫೋನ್ ಮತ್ತು ಸ್ಪೀಕರ್‌ನೊಂದಿಗೆ ಸಜ್ಜುಗೊಂಡಿದೆ ಬ್ಲೂಟೂತ್ ಕರೆ ಮತ್ತು ವಾಯ್ಸ್ ಅಸಿಸ್ಟೆಂಟ್ ಕಾರ್ಯಗಳನ್ನು ಬೆಂಬಲಿಸುತ್ತದೆ. ಇದರಲ್ಲಿ 100+ ಕ್ಲೌಡ್ ಆಧಾರಿತ ವಾಚ್ ಫೇಸ್ / ಡಿಸ್ಪ್ಲೇ ಡಿಸೈನಿಂಗ್ ಜೊತೆಗೆ ಬ್ಲೂಟೂತ್ ಕರೆ, ಕರೆ ಹಿಸ್ಟರಿ, ತ್ವರಿತ ಡಯಲ್ ಪ್ಯಾಡ್, ಸಿಂಕ್ ಕಾಂಟೆಕ್ಟ್ ಸಪೋರ್ಟ್ ಮಾಡುವುದರೊಂದಿಗೆ ವಾಯ್ಸ್ ಅಸಿಸ್ಟೆಂಟ್ ಮತ್ತು 100+ ಹೆಚ್ಚು ಕ್ರೀಡಾ ವಿಧಾನಗಳನ್ನು ಹೊಂದಿದೆ.

Fire-Boltt Lumos

Fire-Boltt Lumos ಹೆಲ್ತ್ ಸೂಟ್ ಅಡಿಯಲ್ಲಿ ಲುಮೋಸ್ ಹೃದಯ ಬಡಿತ ಮಾನಿಟರಿಂಗ್, SpO2 ಟ್ರ್ಯಾಕಿಂಗ್ ಮತ್ತು ನಿದ್ರೆಯ ಮೇಲ್ವಿಚಾರಣೆಯನ್ನು ಪ್ಯಾಕ್ ಮಾಡುತ್ತದೆ. ಫಿಟ್ನೆಸ್ ಉತ್ಸಾಹಿಗಳಿಗೆ ಸ್ಮಾರ್ಟ್ ವಾಚ್ 100+ ಕ್ಕೂ ಹೆಚ್ಚು ಕ್ರೀಡಾ ವಿಧಾನಗಳಿಗೆ ಬೆಂಬಲವನ್ನು ಹೊಂದಿದೆ. ಇದರಲ್ಲಿ ನಿಮಗೆ ಇಂಟರ್ನಲ್ ಗೇಮ್ಸ್, ಸ್ಮಾರ್ಟ್ ನೋಟಿಫಿಕೇಶನ್, ಹವಾಮಾನ ಅಪ್ಡೇಟ್, ಕ್ಯಾಲ್ಕುಲೇಟರ್, ಮ್ಯೂಸಿಕ್ ಮತ್ತು ಕ್ಯಾಮರಾ ಕಂಟ್ರೋಲ್ , ಅಲಾರಾಂ, ಟೈಮರ್, ಸ್ಟಾಪ್‌ವಾಚ್ ಮತ್ತು ಹೆಚ್ಚಿನವುಗಳಂತಹ ಹೆಚ್ಚುವರಿ ವೈಶಿಷ್ಟ್ಯಗಳ ಶ್ರೇಣಿಯು ಸ್ಮಾರ್ಟ್ ವಾಚ್‌ನಲ್ಲಿದೆ.

ಫೈರ್-ಬೋಲ್ಟ್ ಲುಮೋಸ್ ಬೆಲೆ ಮತ್ತು ಲಭ್ಯತೆ

ಈ ಲೇಟೆಸ್ಟ್ ಸ್ಮಾರ್ಟ್ ವಾಚ್ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡುವುದಾದ್ರೆ ಈ ಫೈರ್-ಬೋಲ್ಟ್ ಲುಮೋಸ್ ನಿಮಗೆ ಬ್ಲಾಕ್, ಬ್ಲೂ, ಗೋಲ್ಡ್, ಸಿಲ್ವರ್ ಮತ್ತು ರೋಸ್ ಗೋಲ್ಡ್ ಬಣ್ಣಗಳಲ್ಲಿ ಬಿಡುಗಡೆಯಾಗಿದೆ. ಇದನ್ನು ಆಸಕ್ತರು ಇದೇ ತಿಂಗಳ 30ನೇ ನವೆಂಬರ್ 2023 ರಿಂದ ಮೊದಲ ಮಾರಾಟಕ್ಕೆ ಬರಲಿದ್ದು ನೀವು ಇದನ್ನು Fireboltt.com ಮತ್ತು Amazon.in ನಲ್ಲಿ ವಿಶೇಷ ಪರಿಚಯಾತ್ಮಕ ಬೆಲೆ ಕೇವಲ 1,499 ರೂಗಳಿಗೆ ಖರೀದಿಸಬಹುದು.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo