Amazon Prime Day Sale 2020: ಈ 5 ಸ್ಮಾರ್ಟ್‌ವಾಚ್ಗಳ ಮೇಲೆ ಭಾರಿ ಡಿಸ್ಕೌಂಟ್ ಪಡೆಯುವ ಅವಕಾಶ

Amazon Prime Day Sale 2020: ಈ 5 ಸ್ಮಾರ್ಟ್‌ವಾಚ್ಗಳ ಮೇಲೆ ಭಾರಿ ಡಿಸ್ಕೌಂಟ್ ಪಡೆಯುವ ಅವಕಾಶ
HIGHLIGHTS

ಈ Smartwatch ಕರೆಗಳಿಗೆ ಉತ್ತರಿಸಲು ಅಥವಾ ತಿರಸ್ಕರಿಸಲು ನಿಮಗೆ ಅವಕಾಶ ಮಾಡುವ ಡೀಲ್‌ಗಳು ಲಭ್ಯವಿದೆ.

Honor MagicWatch 1 ಈಗ ಕೇವಲ 4,999 ರೂಗಳಿಗೆ ಲಭ್ಯವಿದೆ. ಇದು 1.2 ಇಂಚಿನ AMOLED ಡಿಸ್ಪ್ಲೇ ಹೊಂದಿದೆ.

Samsung Galaxy Watch ಗ್ಲಾಸ್ ಸ್ಕ್ರಾಚ್ ಪ್ರೂಫ್ ಆಗಿ ಗೊರಿಲ್ಲಾ ಗ್ಲಾಸ್ DX+ ಆಗಿದೆ.

Amazon Prime Day Sale 2020: ನೆನ್ನೆ ಅಂದ್ರೆ ಆಗಸ್ಟ್ 6 ರಂದು ಪ್ರಾರಂಭವಾದ ಅಮೆಜಾನ್ ಪ್ರೈಮ್ ಡೇ ಮಾರಾಟದಲ್ಲಿ Smartwatch ನಿಮ್ಮ ದೈನಂದಿನ ದಿನಚರಿ, ಹೃದಯ ಬಡಿತ ಮತ್ತು ನಿಮ್ಮ ನಿದ್ರೆಯ ಸಮಯವನ್ನು ಟ್ರ್ಯಾಕ್ ಮಾಡುತ್ತವೆ. ಮತ್ತು ಬ್ಲೂಟೂತ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ಗೆ ಸಂಪರ್ಕಗೊಂಡು ನಿಮಗೆ ಬರುವ ಕರೆಗಳಿಗೆ ಉತ್ತರಿಸಲು ಅಥವಾ ತಿರಸ್ಕರಿಸಲು ನಿಮಗೆ ಅವಕಾಶ ಮಾಡುವ ಡೀಲ್‌ಗಳು ಲಭ್ಯವಿದೆ. ನೀವು ಸ್ಮಾರ್ಟ್ ಬ್ಯಾಂಡ್ ಅಥವಾ ಮಧ್ಯ ಶ್ರೇಣಿಯ ಸ್ಮಾರ್ಟ್ ವಾಚ್ ಅನ್ನು ಆಯ್ಕೆ ಮಾಡಬಹುದು. ನೀವೊಂದು ಅತ್ಯುತ್ತಮವಾದ ಸ್ಮಾರ್ಟ್ ವಾಚ್ ಅನ್ನು ಹುಡುಕುತ್ತಿದ್ದರೆ ನಿಮ್ಮನ್ನು ನೋಡಲು ಯೋಗ್ಯವಾದ ಕೆಲವು ಬೆಸ್ಟ್ ಡೀಲ್ ಇಲ್ಲಿವೆ.

Honor MagicWatch 1 & 2

ಹುವಾವೆಯ ಉಪ ಬ್ರಾಂಡ್ Honor MagicWatch 1 ಈಗ ಕೇವಲ 4,999 ರೂಗಳಿಗೆ ಲಭ್ಯವಿದೆ. ಇದು 1.2 ಇಂಚಿನ AMOLED ಡಿಸ್ಪ್ಲೇ ಸುತ್ತುವರಿದ ಬೆಳಕನ್ನು ಹೊಂದಿದೆ. ಇದು ಒಂದೇ ಚಾರ್ಜ್‌ನಲ್ಲಿ ಒಂದು ವಾರ ಇರುತ್ತದೆ. ಮತ್ತು 4.2 ಬ್ಲೂಟೂತ್ ಬೆಂಬಲವನ್ನು ಹೊಂದಿದೆ. ಇದು ರೌಂಡ್ ದಿ ಕ್ಲಾಕ್ ಹೃದಯ ಬಡಿತ ಮಾನಿಟರಿಂಗ್, ಜಿಪಿಎಸ್ ಮತ್ತು 10 ನಿಮಿಷಗಳ ಕಾಲ 50 ಮೀಟರ್ ವರೆಗೆ ವಾಟರ್ ಪ್ರೊಫ್ ಆಗಿದೆ. 

ಮತ್ತೊಂದೆಡೆ Honor MagicWatch 2 ಈಗ ಕೇವಲ 9,999 ರೂಗಳಲ್ಲಿ ಲಭ್ಯವಿದೆ. ಇದು ದೊಡ್ಡದಾದ 1.39 ಇಂಚಿನ AMOLED ಡಿಸ್ಪ್ಲೇ ಹೊಂದಿದೆ. ಇದರ ಬ್ಯಾಟರಿ ಸುಮಾರು ಎರಡು ವಾರಗಳವರೆಗೆ ಇರುತ್ತದೆ. ಬ್ಲೂಟೂತ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ಗೆ ಸಂಪರ್ಕಗೊಂಡು ನಿಮಗೆ ಬರುವ ಕರೆಗಳಿಗೆ ಉತ್ತರಿಸಲು ಅಥವಾ ತಿರಸ್ಕರಿಸಲು ನಿಮಗೆ ಅವಕಾಶ ಮಾಡಿಕೊಡುತ್ತದೆ.

Huawei Watch GT 2e Sport

ಇದು ಕಾಣುವ ವಿಧಾನದ ಹೊರತಾಗಿ Huawei Watch GT 2e Sport ಹೆಚ್ಚಿನ ವೈಶಿಷ್ಟ್ಯಗಳು ಹಾನರ್ ಮ್ಯಾಜಿಕ್ ವಾಚ್ 2 ಅನ್ನು ಹೋಲುತ್ತದೆ. ಇದು 1.39 ಇಂಚಿನ ಅಮೋಲೆಡ್ ಸ್ಕ್ರೀನ್, ಎರಡು ದಿನಗಳ ಬ್ಯಾಟರಿ ಬಾಳಿಕೆ, SpO2 ಹೃದಯ ಬಡಿತ ಮಾನಿಟರಿಂಗ್ ಅನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್‌ನಲ್ಲಿ ಎದ್ದು ಕಾಣುವ ವೈಶಿಷ್ಟ್ಯಗಳು ಪರ್ವತಾರೋಹಣಕ್ಕಾಗಿ ಎತ್ತರದ ಮಾಪಕ ಮತ್ತು ಜಿಪಿಎಸ್ + ಗ್ಲೋನಾಸ್ ಉಪಗ್ರಹ ಸ್ಥಾನೀಕರಣ ಫೀಚರ್ ಹೊಂದಿದ್ದು ಅಮೆಜಾನ್ ಪ್ರೈಮ್ ಡೇ ಸೇಲ್ ಅಲ್ಲಿ ಈಗ ಕೇವಲ 9,999 ರೂಗಳಲ್ಲಿ ಲಭ್ಯವಿದೆ.

Samsung Galaxy Watch

ಈ Samsung Galaxy Watch ಭಾರಿ ಬೆಲೆ ಕಡಿತವಾಗಿದೆ. ಏಕೆಂದರೆ ಇದು ಈಗ 15,990 ರೂಗಳಿಗೆ ಲಭ್ಯವಿದೆ. ಇದು 1.2 ಇಂಚಿನ ಡಿಸ್ಪ್ಲೇ ಹೊಂದಿದೆ. ಬಳಸಿದ ಗ್ಲಾಸ್ ಸ್ಕ್ರಾಚ್ ಪ್ರೂಫ್ ಆಗಿ ಗೊರಿಲ್ಲಾ ಗ್ಲಾಸ್ DX+ ಆಗಿದೆ. ಇದು 50 ಮೀಟರ್ ವರೆಗೆ ವಾಟರ್ ಪ್ರೂಫ್ ಆಗಿದೆ. ಇದರ ಬ್ಯಾಟರಿ ಎಷ್ಟು ಪ್ರಭಾವಶಾಲಿಯಾಗಿದೆ ಅಂದ್ರೆ ಇದು ಬ್ಲೂಟೂತ್ ಮೋಡ್‌ನಲ್ಲಿ ಸುಮಾರು 80 ಗಂಟೆಗಳಿರುತ್ತದೆ. ಮತ್ತು ಜಿಪಿಎಸ್ ಆನ್‌ನೊಂದಿಗೆ 24 ಗಂಟೆಗಳಿರುತ್ತದೆ. ಇದು 4.2 ಬ್ಲೂಟೂತ್ ಸಂಪರ್ಕವನ್ನು ಹೊಂದಿದೆ.

Mi Band 4

ಈ ಹೊಸ MI Band 4 ಅಲ್ಲಿನ ಕಡಿಮೆ ಮತ್ತು ಯುಟಿಲಿಟಿ ಬ್ಯಾಂಡ್‌ಗಳಲ್ಲಿ ಒಂದಾಗಿದೆ. Mi ಬ್ಯಾಂಡ್ 4 ಪ್ರಸ್ತುತ 2,099 ರೂಗಳಲ್ಲಿ ಲಭ್ಯವಿದೆ.  ಇದು 0.95 ಇಂಚಿನ AMOLED ಡಿಸ್ಪ್ಲೇ ಹೊಂದಿದೆ. ಇದು 24/7 ಹೃದಯ ಬಡಿತದ ಮೇಲ್ವಿಚಾರಣಾ ವ್ಯವಸ್ಥೆಯನ್ನು ಹೊಂದಿದೆ. ಇದು ಬ್ಲೂಟೂತ್ 5.0 ಅನ್ನು ಬೆಂಬಲಿಸುತ್ತದೆ ಮತ್ತು ಅದರ ಬ್ಯಾಟರಿ 20 ದಿನಗಳವರೆಗೆ ಹೋಗಬಹುದು. ನೀವು ಸ್ಮಾರ್ಟ್ ಬ್ಯಾಂಡ್‌ನೊಂದಿಗೆ ಸಂಗೀತವನ್ನು ನಿಯಂತ್ರಿಸಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo