ಶಿಯೋಮಿ ಸಂಸ್ಥೆಯು ಭಾರತದಲ್ಲಿ ಇಂದು (ಏಪ್ರಿಲ್ 15 ರಂದು) ತನ್ನ Xiaomi TV S Mini LED Series 2026 ಸ್ಮಾರ್ಟ್‌ಟಿವಿ ಸರಣಿಯನ್ನು ಬಿಡುಗಡೆ ಮಾಡಿದೆ. ಈ ನೂತನ ಟಿವಿ ಸರಣಿಯು ಮೂರು ವೇರಿಯಂಟ್‌ಗಳಲ್ಲಿ ಲಗ್ಗೆ ಇಟ್ಟಿದ್ದು, ಅವುಗಳು ಕ್ರಮವಾಗಿ 55 ಇಂಚು, 65 ಇಂಚು ಮತ್ತು 75 ಇಂಚು ಆಗಿವೆ. ಅಂದಹಾಗೆ ಈ ಮೂರು ವೇರಿಯಂಟ್ ಟಿವಿಗಳು 4K ರೆಸಲ್ಯೂಶನ್ ಸೌಲಭ್ಯ ಪಡೆದಿರುವ ಜೊತೆಗೆ 1,200 nits ಗರಿಷ್ಠ ಬ್ರೈಟ್ನೆಸ್ ಸಪೋರ್ಟ್ ಸಹ ಪಡೆದಿವೆ. ಹಾಗೆಯೇ ಈ ಸರಣಿಯು 34W ಕ್ವಾಡ್ ಸ್ಪೀಕರ್ ಯುನಿಟ್ ವ್ಯವಸ್ಥೆ ಒಳಗೊಂಡಿದೆ. ಇದರೊಂದಿಗೆ ಈ ಹೊಸ ಟಿವಿಗಳು ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್ ಅನ್ನು ಒಳಗೊಂಡಿವೆ. ಹಾಗಾದರೆ ಶಿಯೋಮಿ ಕಂಪನಿಯ ಈ ನೂತನ ಟಿವಿಗಳ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ಭಾರತದಲ್ಲಿ Oppo F33 5G ಮೊಬೈಲ್ ಲಾಂಚ್! 7,000mAh ಬ್ಯಾಟರಿ ಸೌಲಭ್ಯ
ಶಿಯೋಮಿ ಕಂಪನಿಯ ಈ ನೂತನ ಟಿವಿ ಸರಣಿಯನ್ನು ಮೂರು ವೇರಿಯಂಟ್ ಆಯ್ಕೆಯಲ್ಲಿ ಪರಿಚಯಿಸಿದೆ. ಈ ಸರಣಿಯ 55 ಇಂಚಿನ ಟಿವಿ ಬೆಲೆಯು 51,999 ರೂ.ಗಳು ಆಗಿದೆ. ಹಾಗೆಯೇ 65 ಇಂಚಿನ ಟಿವಿ ಬೆಲೆಯು 71,999 ರೂ.ಗಳು ಆಗಿದೆ. ಅದೇ ರೀತಿ 75 ಇಂಚಿನ ಟಿವಿ ಬೆಲೆಯು 99,999 ರೂ.ಗಳು ಆಗಿದೆ. ಅಂದಹಾಗೆ ಈ ಹೊಸ ಟಿವಿ ಸರಣಿಯು ಸದ್ಯ ಪ್ರಿ-ಬುಕಿಂಗ್‌ಗೆ ಲಭ್ಯವಿದೆ. ಇನ್ನು ಇದೇ ಏಪ್ರಿಲ್ 22 ರಿಂದ Mi.com, ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಶಿಯೋಮಿ ರೀಟೇಲ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿವೆ.
ಶಿಯೋಮಿಯ ನೂತನ ಟಿವಿಗಳು ಆಕರ್ಷಕ ಎನಿಸಿವೆ. ಇವು 55 ಇಂಚಿನ, 65 ಇಂಚಿನ ಮತ್ತು 75 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿವೆ. ಹಾಗೆಯೇ ಈ ಟಿವಿಗಳು 4K ಜೊತೆಗೆ 2,160 x 3840 ಪಿಕ್ಸೆಲ್ ರೆಸಲ್ಯೂಶನ್ ಸೌಲಭ್ಯ ಪಡೆದಿವೆ. ಹಾಗೆಯೇ 178-ಡಿಗ್ರಿ ವೀಕ್ಷಣಾ ಕೋನ ಮತ್ತು 60Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಇದರಲ್ಲದೇ ಕನಿಷ್ಠ 510 nits ಬ್ರೈಟ್ನೆಸ್ ಮತ್ತು 1200 nits ಗರಿಷ್ಠ ಬ್ರೈಟ್ನೆಸ್ ಪಡೆದಿವೆ. ಹಾಗೆಯೇ ಈ ಸರಣಿಯು ಕ್ವಾಡ್ 34W ಸ್ಪೀಕರ್ ರಚನೆ ಅನ್ನು ಪಡೆದಿರುವ ಜೊತೆಗೆ ಇದರಲ್ಲಿ ಎರಡು ಟ್ವೀಟರ್‌ಗಳು ಮತ್ತು ಡಾಲ್ಬಿ ಆಡಿಯೋ ಸಪೋರ್ಟ್ ಹೊಂದಿವೆ. ಅಲ್ಲದೇ DTS:X, DTS ವರ್ಚುವಲ್:X ಬೆಂಬಲ ಕೂಡಾ ಇದೆ.
ಇನ್ನು ಕನೆಕ್ಟಿವಿ ಆಯ್ಕೆಗಳನ್ನು ನೋಡುವುದಾದರೆ ಈ ಟಿವಿ ಸರಣಿಯು ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್ ಆಯ್ಕೆಗಳನ್ನು ಒಳಗೊಂಡಿದೆ. ಅಲ್ಲದೇ ಕ್ವಾಡ್-ಕೋರ್ A55 CPU ಅನ್ನು Mali-G 52 GPU ಜೊತೆಗೆ 2GB RAM ಮತ್ತು 32GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಈ ಸರಣಿಯು ಶಿಯೋಮಿಯ ಇತ್ತೀಚಿನ ಪ್ಯಾಚ್‌ವಾಲ್ ಇಂಟರ್ಫೇಸ್‌ನಲ್ಲಿ ಪ್ಯಾಚ್‌ವಾಲ್+ ಬೆಂಬಲವಿದೆ.