Xiaomi ಕಂಪನಿಯಿಂದ ಹೊಸ ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆ; ಜಬರ್ದಸ್ತ್‌ ಸೌಂಡ್‌ ವ್ಯವಸ್ಥೆ

Xiaomi ಕಂಪನಿಯಿಂದ ಹೊಸ ಸ್ಮಾರ್ಟ್‌ಟಿವಿ ಸರಣಿ ಬಿಡುಗಡೆ; ಜಬರ್ದಸ್ತ್‌ ಸೌಂಡ್‌ ವ್ಯವಸ್ಥೆ

ಶಿಯೋಮಿ ಸಂಸ್ಥೆಯು ಭಾರತದಲ್ಲಿ ಇಂದು (ಏಪ್ರಿಲ್‌ 15 ರಂದು) ತನ್ನ Xiaomi TV S Mini LED Series 2026 ಸ್ಮಾರ್ಟ್‌ಟಿವಿ ಸರಣಿಯನ್ನು ಬಿಡುಗಡೆ ಮಾಡಿದೆ. ಈ ನೂತನ ಟಿವಿ ಸರಣಿಯು ಮೂರು ವೇರಿಯಂಟ್‌ಗಳಲ್ಲಿ ಲಗ್ಗೆ ಇಟ್ಟಿದ್ದು, ಅವುಗಳು ಕ್ರಮವಾಗಿ 55 ಇಂಚು, 65 ಇಂಚು ಮತ್ತು 75 ಇಂಚು ಆಗಿವೆ. ಅಂದಹಾಗೆ ಈ ಮೂರು ವೇರಿಯಂಟ್‌ ಟಿವಿಗಳು 4K ರೆಸಲ್ಯೂಶನ್ ಸೌಲಭ್ಯ ಪಡೆದಿರುವ ಜೊತೆಗೆ 1,200 nits ಗರಿಷ್ಠ ಬ್ರೈಟ್ನೆಸ್‌ ಸಪೋರ್ಟ್‌ ಸಹ ಪಡೆದಿವೆ. ಹಾಗೆಯೇ ಈ ಸರಣಿಯು 34W ಕ್ವಾಡ್ ಸ್ಪೀಕರ್ ಯುನಿಟ್ ವ್ಯವಸ್ಥೆ ಒಳಗೊಂಡಿದೆ. ಇದರೊಂದಿಗೆ ಈ ಹೊಸ ಟಿವಿಗಳು ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್ ಅನ್ನು ಒಳಗೊಂಡಿವೆ. ಹಾಗಾದರೆ ಶಿಯೋಮಿ ಕಂಪನಿಯ ಈ ನೂತನ ಟಿವಿಗಳ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಭಾರತದಲ್ಲಿ Oppo F33 5G ಮೊಬೈಲ್‌ ಲಾಂಚ್‌! 7,000mAh ಬ್ಯಾಟರಿ ಸೌಲಭ್ಯ

Xiaomi TV S Mini LED Series 2026: ಬೆಲೆ ಹಾಗೂ ಲಭ್ಯತೆ

ಶಿಯೋಮಿ ಕಂಪನಿಯ ಈ ನೂತನ ಟಿವಿ ಸರಣಿಯನ್ನು ಮೂರು ವೇರಿಯಂಟ್‌ ಆಯ್ಕೆಯಲ್ಲಿ ಪರಿಚಯಿಸಿದೆ. ಈ ಸರಣಿಯ 55 ಇಂಚಿನ ಟಿವಿ ಬೆಲೆಯು 51,999 ರೂ.ಗಳು ಆಗಿದೆ. ಹಾಗೆಯೇ 65 ಇಂಚಿನ ಟಿವಿ ಬೆಲೆಯು 71,999 ರೂ.ಗಳು ಆಗಿದೆ. ಅದೇ ರೀತಿ 75 ಇಂಚಿನ ಟಿವಿ ಬೆಲೆಯು 99,999 ರೂ.ಗಳು ಆಗಿದೆ. ಅಂದಹಾಗೆ ಈ ಹೊಸ ಟಿವಿ ಸರಣಿಯು ಸದ್ಯ ಪ್ರಿ-ಬುಕಿಂಗ್‌ಗೆ ಲಭ್ಯವಿದೆ. ಇನ್ನು ಇದೇ ಏಪ್ರಿಲ್ 22 ರಿಂದ Mi.com, ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಶಿಯೋಮಿ ರೀಟೇಲ್‌ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿವೆ.

Xiaomi

ಶಿಯೋಮಿಯ ಹೊಸ ಟಿವಿಗಳ ಫೀಚರ್ಸ್‌

ಶಿಯೋಮಿಯ ನೂತನ ಟಿವಿಗಳು ಆಕರ್ಷಕ ಎನಿಸಿವೆ. ಇವು 55 ಇಂಚಿನ, 65 ಇಂಚಿನ ಮತ್ತು 75 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿವೆ. ಹಾಗೆಯೇ ಈ ಟಿವಿಗಳು 4K ಜೊತೆಗೆ 2,160 x 3840 ಪಿಕ್ಸೆಲ್‌ ರೆಸಲ್ಯೂಶನ್ ಸೌಲಭ್ಯ ಪಡೆದಿವೆ. ಹಾಗೆಯೇ 178-ಡಿಗ್ರಿ ವೀಕ್ಷಣಾ ಕೋನ ಮತ್ತು 60Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದರಲ್ಲದೇ ಕನಿಷ್ಠ 510 nits ಬ್ರೈಟ್ನೆಸ್‌ ಮತ್ತು 1200 nits ಗರಿಷ್ಠ ಬ್ರೈಟ್ನೆಸ್‌ ಪಡೆದಿವೆ. ಹಾಗೆಯೇ ಈ ಸರಣಿಯು ಕ್ವಾಡ್ 34W ಸ್ಪೀಕರ್ ರಚನೆ ಅನ್ನು ಪಡೆದಿರುವ ಜೊತೆಗೆ ಇದರಲ್ಲಿ ಎರಡು ಟ್ವೀಟರ್‌ಗಳು ಮತ್ತು ಡಾಲ್ಬಿ ಆಡಿಯೋ ಸಪೋರ್ಟ್‌ ಹೊಂದಿವೆ. ಅಲ್ಲದೇ DTS:X, DTS ವರ್ಚುವಲ್:X ಬೆಂಬಲ ಕೂಡಾ ಇದೆ.

ಇನ್ನು ಕನೆಕ್ಟಿವಿ ಆಯ್ಕೆಗಳನ್ನು ನೋಡುವುದಾದರೆ ಈ ಟಿವಿ ಸರಣಿಯು ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್ ಆಯ್ಕೆಗಳನ್ನು ಒಳಗೊಂಡಿದೆ. ಅಲ್ಲದೇ ಕ್ವಾಡ್-ಕೋರ್ A55 CPU ಅನ್ನು Mali-G 52 GPU ಜೊತೆಗೆ 2GB RAM ಮತ್ತು 32GB ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಈ ಸರಣಿಯು ಶಿಯೋಮಿಯ ಇತ್ತೀಚಿನ ಪ್ಯಾಚ್‌ವಾಲ್ ಇಂಟರ್ಫೇಸ್‌ನಲ್ಲಿ ಪ್ಯಾಚ್‌ವಾಲ್+ ಬೆಂಬಲವಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo