Vu Glo QLED Series Launched
ಭಾರತದಲ್ಲಿ ತನ್ನ ಹೊಸ Vu Glo QLED Series ಅನ್ನು ಬಿಡುಗಡೆ ಮಾಡಿದೆ. ಇದು ರೋಮಾಂಚಕ ಬಣ್ಣಗಳು ಮತ್ತು ತೀಕ್ಷ್ಣವಾದ ಚಿತ್ರ ಗುಣಮಟ್ಟಕ್ಕಾಗಿ ಸುಧಾರಿತ ಕ್ವಾಂಟಮ್ ಡಾಟ್ ತಂತ್ರಜ್ಞಾನವನ್ನು ಪರಿಚಯಿಸುತ್ತದೆ. ಈ ಹೊಸ ಶ್ರೇಣಿಯು ತನ್ನ ನಯವಾದ ವಿನ್ಯಾಸ ಮತ್ತು ಪವರ್ಫುಲ್ ಫೀಚರ್ಗಳೊಂದಿಗೆ ಪ್ರೀಮಿಯಂ ವೀಕ್ಷಣ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಕಂಪನಿ ಮಲ್ಟಿ ಸ್ಕ್ರೀನ್ 43, 50, 55 ಮತ್ತು 65 ಇಂಚಿನ ಗಾತ್ರಗಳಲ್ಲಿ ಪರಿಚಯಿಸಿದೆ. ಈ ಹೊಸ ಸರಣಿಯು ಸ್ಪರ್ಧಾತ್ಮಕ ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದೆ. ಇದರಲ್ಲಿ 43 ಇಂಚಿನ QLED ಸ್ಮಾರ್ಟ್ ಟಿವಿಗಳನ್ನು ಆರಂಭಿಕ 24,999 ರೂಗಳಿಗೆ ಬಿಡುಗಡೆಗೊಳಿಸಿದೆ.
ಭಾರತದಲ್ಲಿ Vu Glo QLED ಸರಣಿಯು ಸ್ಪರ್ಧಾತ್ಮಕ ಬೆಲೆಯನ್ನು ಹೊಂದಿದ್ದು ಭಾರತದಲ್ಲಿ ಬಿಡುಗಡೆಯಾದ ಈ Vu Glo QLED TV 2025 ಸ್ಮಾರ್ಟ್ ಟಿವಿಗಳ ಬೆಲೆ ಮತ್ತು ಆಫರ್ ಬಗ್ಗೆ ಮಾತನಾಡುವುದಾದರೆ ಆರಂಭಿಕ 43 ಇಂಚಿನ QLED Dolby ಎಡಿಷನ್ ಸ್ಮಾರ್ಟ್ ಟಿವಿ 24,999 ರೂಗಳಿಂದ ಆರಂಭವಾಗಿದೆ.
ಇದರ ಕ್ರಮವಾಗಿ ಇದರ 50 ಇಂಚಿನ QLED Dolby ಎಡಿಷನ್ ಸ್ಮಾರ್ಟ್ ಟಿವಿ 30,990 ರೂಗಳಿಗೆ ಮತ್ತು ಇದರ 55 ಇಂಚಿನ QLED Dolby ಎಡಿಷನ್ ಸ್ಮಾರ್ಟ್ ಟಿವಿ 35,990 ರೂಗಳಿಗೆ ಮತ್ತು ಕೊನೆಯದಾಗಿ ಇದರ 65 ಇಂಚಿನ QLED Dolby ಎಡಿಷನ್ ಸ್ಮಾರ್ಟ್ ಟಿವಿ 50,990 ರೂಗಳಿಗೆ ಪರಿಚಾಯಿಸಲಾಗಿದೆ. ಇಂದಿನಿಂದ ಈ ಟಿವಿ ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಇತರ ಗ್ರಾಹಕ ಎಲೆಕ್ಟ್ರಾನಿಕ್ಸ್ ಚಾನೆಲ್‌ಗಳ ಮೂಲಕ ಖರೀದಿಗೆ ಲಭ್ಯವಿದೆ.
Also Read: Samsung Dolby Soundbar ಇಂದು ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್ಗಳೊಂದಿಗೆ ಲಭ್ಯ!
ಈ ಹೊಸ Vu Glo QLED ಸರಣಿಯು ಈಗಾಗಲೇ ಮೇಲೆ ತಿಳಿಸಿರುವಂತೆ ಮಲ್ಟಿ ಸ್ಕ್ರೀನ್ 43, 50, 55 ಮತ್ತು 65 ಇಂಚಿನ ಗಾತ್ರಗಳಲ್ಲಿ ಬೆಜೆಲ್-ಲೆಸ್ ವಿನ್ಯಾಸ ಮತ್ತು ವಿಶಾಲವಾದ ಬಣ್ಣದ ಹರವು ಮತ್ತು ಅದ್ಭುತ ದೃಶ್ಯಗಳಿಗಾಗಿ HDR ಬೆಂಬಲದೊಂದಿಗೆ ರೋಮಾಂಚಕ QLED ಡಿಸ್ಪ್ಲೇಯನ್ನು ಹೊಂದಿದೆ. ಇದು ಸುಗಮ ಕಾರ್ಯಕ್ಷಮತೆಗಾಗಿ ಪ್ರಬಲ ಪ್ರೊಸೆಸರ್ ಅನ್ನು ಹೊಂದಿದೆ.
ಜನಪ್ರಿಯ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳೊಂದಿಗೆ ಸ್ಮಾರ್ಟ್ ಟಿವಿ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇವುಗಳ ಸೌಂಡ್ ವ್ಯವಸ್ಥೆಯು ತಲ್ಲೀನಗೊಳಿಸುವ ಧ್ವನಿಗಾಗಿ ಡಾಲ್ಬಿ ಆಡಿಯೊದೊಂದಿಗೆ ಸಂಯೋಜಿತ ಸ್ಪೀಕರ್‌ಗಳನ್ನು ಒಳಗೊಂಡಿದೆ. 400 ನಿಟ್‌ಗಳ ಹೊಳಪಿನೊಂದಿಗೆ 4K QLED ಡಿಸ್ಪ್ಲೇಗಳನ್ನು ನೀಡುತ್ತವೆ. ಇದು 92% NTSC ಬಣ್ಣದ ಗ್ಯಾಮಟ್ ಅನ್ನು ಒಳಗೊಂಡಿದೆ. ಅವು 1.5 GHz VuOn AI ಪ್ರೊಸೆಸರ್ ಜೊತೆಗೆ 2GB RAM ಮತ್ತು ಸುಮಾರು 16GB ಸ್ಟೋರೇಜ್ ಬೆಂಬಲಿತವಾದ Google TV ಯಲ್ಲಿ ಕಾರ್ಯನಿರ್ವಹಿಸುತ್ತವೆ.
ಈ ಸ್ಮಾರ್ಟ್ ಟಿವಿಗಳು ಡಾಲ್ಬಿ ವಿಷನ್, ಅಟ್ಮಾಸ್, ಗೂಗಲ್ ಅಸಿಸ್ಟೆಂಟ್ ಮತ್ತು ಸರಾಗ ನಿಯಂತ್ರಣಕ್ಕಾಗಿ ಇನ್‌ಸ್ಟಂಟ್ ನೆಟ್‌ವರ್ಕ್ ರಿಮೋಟ್ ಅನ್ನು ಒಳಗೊಂಡಿವೆ. ಅಲ್ಲದೆ ಕನೆಕ್ಷನ್ ಆಯ್ಕೆಗಳಲ್ಲಿ ಮಲ್ಟಿ HDMI ಪೋರ್ಟ್‌ಗಳು, USB ಪೋರ್ಟ್‌ಗಳು ಮತ್ತು ಅಂತರ್ನಿರ್ಮಿತ Wi-Fi ಸೇರಿವೆ. ಲಭ್ಯವಿರುವ ಎಲ್ಲಾ ಸ್ಕ್ರೀನ್ ಗಾತ್ರಗಳಲ್ಲಿ ನಿಮ್ಮ ಎಲ್ಲಾ ಮನರಂಜನಾ ಅಗತ್ಯಗಳನ್ನು ಪೂರೈಸುತ್ತದೆ.