Thomson ಕಂಪನಿಯ 50 ಇಂಚಿನ ಈ ಸ್ಮಾರ್ಟ್‌ಟಿವಿ ಈಗ ಕಡಿಮೆ ಬೆಲೆಗೆ ಲಭ್ಯ!

HIGHLIGHTS

ಥಾಮ್ಸನ್ ಸಂಸ್ಥೆಯ ಈ ಸ್ಮಾರ್ಟ್‌ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ ಆಫರ್‌ ಪಡೆದಿದೆ

ಈ ಸ್ಮಾರ್ಟ್‌ಟಿವಿ ಮೂರು HDMI ಹಾಗೂ ಎರಡು USB ಪೋರ್ಟ್‌ ಆಯ್ಕೆಗಳನ್ನು ಹೊಂದಿದೆ

ಥಾಮ್ಸನ್ ಸಂಸ್ಥೆಯ ಈ ಸ್ಮಾರ್ಟ್‌ಟಿವಿ 48 W ಸೌಂಡ್‌ ಔಟ್‌ಪುಟ್ ಸೌಲಭ್ಯ ಪಡೆದುಕೊಂಡಿದೆ

ಥಾಮ್ಸನ್ ಕಂಪನಿಯ ಸ್ಮಾರ್ಟ್‌ ಟಿವಿಗಳು ಬಜೆಟ್‌ ದರದಲ್ಲಿ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿವೆ. ನೀವೇನಾದರೂ ಡಿಸ್ಕೌಂಟ್‌ ಬೆಲೆಯಲ್ಲಿ ಥಾಮ್ಸನ್ ಕಂಪನಿಯ ಸ್ಮಾರ್ಟ್‌ ಟಿವಿಯೊಂದನ್ನು ಖರೀದಿಸಲು ಬಯಸಿದರೆ ನಿಮಗೆ ಇಲ್ಲಿದೆ ಸಿಹಿಸುದ್ದಿ. ಹೌದು, ಜನಪ್ರಿಯ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಥಾಮ್ಸನ್ ಫೋನಿಕ್ಸ್ ಸಂಸ್ಥೆಯ 50 ಇಂಚಿನ QLED Ultra HD (Thomson Phoenix 50 inch) ಸ್ಮಾರ್ಟ್ ಟಿವಿ ಸಖತ್ ರಿಯಾಯಿತಿ ದರದಲ್ಲಿ ಲಭ್ಯ ಇದೆ. ಖರೀದಿದಾರರು ಬ್ಯಾಂಕ್‌ ಆಫರ್‌ಗಳ ಮೂಲಕ ಹೆಚ್ಚುವರಿ ಡಿಸ್ಕೌಂಟ್‌ ಸಹ ಪಡೆಯಬಹುದಾಗಿದೆ. ಇನ್ನು ಈ ಸ್ಮಾರ್ಟ್‌ ಟಿವಿಯು 16GB ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಹಾಗೆಯೇ ಡಾಲ್ಬಿ ಅಟ್ಮಾಸ್ 48 Watts ಸೌಂಡ್‌ ಔಟ್‌ಪುಟ್‌ ಪಡೆದುಕೊಂಡಿದೆ. ಇನ್ನುಳಿದಂತೆ ಥಾಮ್ಸನ್ ಕಂಪನಿಯ ಈ ಟಿವಿಗೆ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Ram Navami 2026 Wishes in Kannada: ನಿಮ್ಮ ಪ್ರೀತಿಪಾತ್ರರಿಗೆ ಶ್ರೀರಾಮ ನವಮಿ ಹಬ್ಬದ ಶುಭಾಶಯ ತಿಳಿಸಲು ಇಲ್ಲಿವೆ ಸಂದೇಶಗಳು

Thomson Phoenix 50 ಇಂಚಿನ ಸ್ಮಾರ್ಟ್‌ಟಿವಿ ಬೆಲೆಯಲ್ಲಿ ಇಳಿಕೆ

Thomson ಸಂಸ್ಥೆಯ ಥಾಮ್ಸನ್ ಫೋನಿಕ್ಸ್ 50 ಇಂಚಿನ QLED Ultra HD ಸ್ಮಾರ್ಟ್ ಟಿವಿ ಆಕರ್ಷಕ ಬೆಲೆ ಇಳಿಕೆ ಪಡೆದಿದೆ. ಫ್ಲಿಪ್‌ಕಾರ್ಟ್‌ ತಾಣದಲ್ಲಿ ಈ ಸ್ಮಾರ್ಟ್‌ ಟಿವಿಯ ಮೂಲ ಬೆಲೆ 40,999 ರೂಗಳು ಆಗಿದ್ದು ಸದ್ಯ 25,999 ರೂಗಳ ಆಫರ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ.

ಈ ಸ್ಮಾರ್ಟ್‌ಟಿವಿಯ ಪ್ರಮುಖ ಫೀಚರ್ಸ್‌

Thomson ಸಂಸ್ಥೆಯ ಈ ಸ್ಮಾರ್ಟ್‌ಟಿವಿಯು 50 ಇಂಚಿನ (126 cm) QLED ಸ್ಕ್ರೀನ್‌ ಅನ್ನು ಪಡೆದಿದೆ. ಈ ಟಿವಿ ಸ್ಕ್ರೀನ್‌ 3840 x 2160 ಪಿಕ್ಸಲ್‌ ರೆಸಲ್ಯೂಶನ್‌ ಜೊತೆಗೆ 178 ಡಿಗ್ರಿ ವೀಕ್ಷಣಾ ನೋಟ್‌ ಹೊಂದಿದೆ. ಹಾಗೆಯೇ ಇದು 450 nits ಬ್ರೈಟ್ನೆಸ್‌ ಸಪೋರ್ಟ್‌ ಒಳಗೊಂಡಿದೆ. ಈ ಸ್ಮಾರ್ಟ್‌ ಟಿವಿಯು ARM ಕಾರ್ಟೆಕ್ಸ್ A55*4 ಪ್ರೊಸೆಸರ್‌ ಸೌಲಭ್ಯ ಒಳಗೊಂಡಿದೆ ಹಾಗೂ 2 GB RAM ಮತ್ತು 16GB ಸ್ಟೋರೇಜ್‌ ಮೆಮೊರಿ ಪಡೆದುಕೊಂಡಿದೆ. ಅಲ್ಲದೇ ಇದು ಎರಡು ಸ್ಪೀಕರ್‌ ಸೌಲಭ್ಯ ಪಡೆದಿದ್ದು ಅವುಗಳು 48 W ಔಟ್‌ಪುಟ್‌ ಬೆಂಬಲ ಪಡೆದಿವೆ. ಇದರೊಂದಿಗೆ ಇದು ಸ್ಟ್ಯಾಂಡರ್ಡ್, ಮ್ಯೂಸಿಕ್, ನ್ಯೂಸ್‌, ಮೂವೀ, ಗೇಮ್‌, ಯೂಸರ್ ಹೆಸರಿನ ಆರು ಸೌಂಡ್‌ ಮೋಡ್‌ಗಳ ಆಯ್ಕೆ ಒಳಗೊಂಡಿದೆ.

ಈ ಸ್ಮಾರ್ಟ್‌ ಟಿವಿಯು ಮೂರು HDMI ಪೋರ್ಟ್‌ಗಳ ಆಯ್ಕೆ, ಎರಡು USB ಪೋರ್ಟ್‌ಗಳ ಆಯ್ಕೆಗಳ ಜೊತಗೆ ಹೆಡ್‌ಜ್ಯಾಕ್‌ ಸೌಲಭ್ಯ ಸಹ ಪಡೆದುಕೊಂಡಿದೆ. ಅಲ್ಲದೇ ಸುಲಭವಾಗಿ ಈ ಟಿವಿಯನ್ನು ಮೊಬೈಲ್‌, ಲ್ಯಾಪ್‌ಟಾಪ್‌ ಹಾಗೂ ಪಿಸಿ ಡಿವೈಸ್‌ಗೆ ಕಾಸ್ಟಿಂಗ್ ಮಾಡಬಹುದು. ಇದು ಬಿಲ್ಟ್‌ ಇನ್‌ ವೈಫೈ ಸೌಲಭ್ಯ ಹೊಂದಿದ್ದು ಜೊತೆಗೆ ಬ್ಲೂಟೂತ್‌ ಆಯ್ಕೆಯನ್ನು ಒಳಗೊಂಡಿದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :