Ram Navami 2026 Wishes in Kannada: ನಿಮ್ಮ ಪ್ರೀತಿಪಾತ್ರರಿಗೆ ಶ್ರೀರಾಮ ನವಮಿ ಹಬ್ಬದ ಶುಭಾಶಯ ತಿಳಿಸಲು ಇಲ್ಲಿವೆ ಸಂದೇಶಗಳು
Ram Navami 2026 Wishes in Kannada: ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾದ ಶ್ರೀರಾಮ ನವಮಿಯನ್ನು ದೇಶದಾದ್ಯಂತ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಈ ದಿನವು ಭಗವಾನ್ ಶ್ರೀರಾಮನ ಜನ್ಮದಿನವಾಗಿದೆ. ಈ ಪವಿತ್ರ ದಿನದಂದು ರಾಮನ ಭಕ್ತರು ಉಪವಾಸ ವ್ರತಗಳನ್ನು ಆಚರಿಸಿ, ದೇವಾಲಯಗಳಲ್ಲಿ ವಿಶೇಷ ಪೂಜೆಗಳು, ಹೋಮಗಳು ಮತ್ತು ಭಜನೆಗಳಲ್ಲಿ ತೊಡಗುತ್ತಾರೆ. ಮರ್ಯಾದಾ ಪುರುಷೋತ್ತಮನಾದ ಶ್ರೀರಾಮನ ಜೀವನವು ನಿಷ್ಠೆ ಹಾಗೂ ಕರ್ತವ್ಯಪಾಲನೆ ಎಲ್ಲರಿಗೂ ಆದರ್ಶವಾಗಿದೆ. ಈ ಹಬ್ಬವು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಇದು ಸತ್ಯ, ಧರ್ಮದ ಮೌಲ್ಯಗಳನ್ನು ನೆನಪಿಸುವ ಮಹತ್ವದ ದಿನವಾಗಿದೆ. ಈ ದಿನದಂದು ಉತ್ತರ ಪ್ರದೇಶದ ಅಯೋಧ್ಯೆ ಸೇರಿದಂತೆ ದೇಶದ ಅನೇಕ ರಾಮ ಮಂದಿರಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಹಬ್ಬದ ಅಂಗವಾಗಿ ಅನೇಕ ಕಡೆಗಳಲ್ಲಿ ಭಕ್ತರು ಪ್ರಸಾದ ವಿತರಣೆ ಮಾಡುತ್ತಾರೆ. ಈ ಹಬ್ಬದ ಸಂದರ್ಭದಲ್ಲಿ ನೀವು ನಿಮ್ಮ ಆತ್ಮೀಯರಿಗೆ ಹಾಗೂ ಕುಟುಂಬದವರಿಗೆ ಶ್ರೀರಾಮ ನವಮಿ ಹಬ್ಬದ ಶುಭಾಶಯಗಳನ್ನು ಶೇರ್‌ಮಾಡಬಹುದು.
SurveyAlso Read : Motorola G96 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ! ಈ ಚಾನ್ಸ್ ಕಳ್ಕೋಬೇಡಿ
Ram Navami 2026: ಶ್ರೀರಾಮ ನವಮಿ ಹಬ್ಬದ ಶುಭಾಶಯಗಳು
ನೀವು ನಿಮ್ಮ ಸ್ನೇಹಿತರಿಗೆ, ಆತ್ಮೀಯರಿಗೆ ಹಾಗೂ ಕುಟುಂಬದವರಿಗೆ ಶ್ರೀರಾಮ ನವಮಿ ಹಬ್ಬದ ಶುಭಾಶಯಗಳನ್ನು ವಾಟ್ಸಪ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಸೇರಿದಂತೆ ಇತರೆ ಸೋಶೀಯಲ್ ಮೀಡಿಯಾಗಳ ಮೂಲಕ ತಿಳಿಸಬಹುದು. ಹಬ್ಬದ ಶುಭಾಶಯ ಕೋರಲು ಈ ಲೇಖನದಲ್ಲಿ ಕೆಲವು ಮೆಸೆಜ್‌ಗಳನ್ನು ನೀಡಲಾಗಿದೆ ನೋಡಿ.

– ಶ್ರೀರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಶ್ರೀರಾಮನ ಕೃಪೆ ನಿಮ್ಮ ಜೀವನವನ್ನು ಸಂತೋಷದಿಂದ ತುಂಬಲಿ.
– ರಾಮನವಮಿ ಹಬ್ಬದ ಶುಭಾಶಯಗಳು. ನಿಮ್ಮ ಮನೆಗೆ ಶಾಂತಿ ಮತ್ತು ಸಮೃದ್ಧಿ ಸದಾ ನೆಲೆಸಿರಲಿ.
– ಶ್ರೀರಾಮನವಮಿ ಹಬ್ಬದ ಶುಭಾಶಯಗಳು. ಶ್ರೀರಾಮನ ಆಶೀರ್ವಾದ ನಿಮ್ಮೆಲ್ಲರ ಮೇಲೆ ಇರಲಿ.
– ರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಧರ್ಮ ಮತ್ತು ಸತ್ಯ ಬೆಳಗಲಿ.
– ಶ್ರೀರಾಮನವಮಿ ಶುಭಾಶಯಗಳು. ನಿಮ್ಮ ಎಲ್ಲಾ ಕನಸುಗಳು ನನಸಾಗಲಿ.
– ರಾಮನವಮಿ ಹಬ್ಬದ ಶುಭಾಶಯಗಳು. ನಿಮ್ಮ ಕುಟುಂಬದಲ್ಲಿ ಸದಾ ಸಂತೋಷ ತುಂಬಿರಲಿ.
– ಶ್ರೀರಾಮನವಮಿ ಹಾರ್ದಿಕ ಶುಭಾಶಯಗಳು. ಶ್ರೀರಾಮನ ಮಾರ್ಗ ನಿಮ್ಮನ್ನು ಯಶಸ್ಸಿನ ಕಡೆಗೆ ನಡೆಸಲಿ.

– ರಾಮನವಮಿ ಹಬ್ಬದ ಶುಭಾಶಯಗಳು. ನಿಮ್ಮ ಜೀವನದಲ್ಲಿ ಶಾಂತಿ ಮತ್ತು ಸಂತೃಪ್ತಿ ಇರಲಿ.
– ಶ್ರೀರಾಮನವಮಿ ಹಬ್ಬದ ಶುಭಾಶಯಗಳು. ಭಗವಾನ್ ರಾಮನ ಕೃಪೆ ಸದಾ ನಿಮ್ಮೊಂದಿಗೆ ಇರಲಿ.
– ರಾಮನವಮಿ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನ ಧನ್ಯವಾಗಿರಲಿ.
– ಶ್ರೀರಾಮನವಮಿ ಶುಭಾಶಯಗಳು. ನಿಮ್ಮ ಮನೆಯಲ್ಲಿ ಆನಂದ ಮತ್ತು ಆರೋಗ್ಯ ಹೆಚ್ಚಲಿ.
– ರಾಮನವಮಿ ಹಬ್ಬದ ಶುಭಾಶಯಗಳು. ಶ್ರೀರಾಮನ ದಿವ್ಯ ಕೃಪೆ ನಿಮ್ಮ ಮೇಲೆ ಸದಾ ಇರಲಿ.
– ಶ್ರೀರಾಮನವಮಿ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಬೆಳಕು ಮತ್ತು ಸಂತೋಷ ಹರಡಲಿ.
– ರಾಮನವಮಿ ಹಬ್ಬದ ಶುಭಾಶಯಗಳು. ನಿಮ್ಮ ಎಲ್ಲಾ ಕಷ್ಟಗಳು ದೂರವಾಗಲಿ.

– ಶ್ರೀರಾಮನವಮಿ ಶುಭಾಶಯಗಳು. ನಿಮ್ಮ ಜೀವನದಲ್ಲಿ ಸದಾ ಶಾಂತಿ ನೆಲೆಸಿರಲಿ.
– ರಾಮನವಮಿ ಹಾರ್ದಿಕ ಶುಭಾಶಯಗಳು. ಶ್ರೀರಾಮನ ಕೃಪೆಯಿಂದ ನಿಮ್ಮ ಬದುಕು ಸುಖವಾಗಿರಲಿ.
– ಶ್ರೀರಾಮನವಮಿ ಹಬ್ಬದ ಶುಭಾಶಯಗಳು. ನಿಮ್ಮ ಕುಟುಂಬಕ್ಕೆ ಆರೋಗ್ಯ ಮತ್ತು ಐಶ್ವರ್ಯ ದೊರಕಲಿ.
– ರಾಮನವಮಿ ಶುಭಾಶಯಗಳು. ನಿಮ್ಮ ಮನಸ್ಸಿನಲ್ಲಿ ಸದಾ ಭಕ್ತಿ ತುಂಬಿರಲಿ.
– ಶ್ರೀರಾಮನವಮಿ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಯಶಸ್ಸು ಮತ್ತು ಸಮೃದ್ಧಿ ಇರಲಿ.
– ರಾಮನವಮಿ ಹಬ್ಬದ ಶುಭಾಶಯಗಳು. ಶ್ರೀರಾಮನ ಆಶೀರ್ವಾದದಿಂದ ನಿಮ್ಮ ಜೀವನ ಮಂಗಳಮಯವಾಗಲಿ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile