Best Smart TVs Under 15000
ಭಾರತದಲ್ಲಿ ನಿಮಗೊಂದು ಅತ್ಯುತ್ತಮ ಸ್ಮಾರ್ಟ್ ಟಿವಿ (Smart TV) ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಅಂದ್ರೆ ಸುಮಂರು 15,000 ರೂಗಳೊಳಗೆ ದೊಡ್ಡ ಸ್ಕ್ರೀನ್ ಹೊಂದಿರುವ 40-43 ಇಂಚಿನ ಸ್ಮಾರ್ಟ್ ಟಿವಿ ಬೇಕಿದ್ದರೆ ಒಮ್ಮೆ ಈ ಪಟ್ಟಿಯ ಮೇಲೆ ಕಣ್ಣಾಡಿಸಬಹುದು. ಈ ಋತುವಿನ ದೊಡ್ಡ ಸ್ಕ್ರೀನ್ ಮನರಂಜನೆಯ ಅದ್ಭುತ ಡೀಲ್‌ಗಳೊಂದಿಗೆ ನಿಮ್ಮ ಮನೆ ಮನರಂಜನಾ ಸೆಟಪ್ ಅನ್ನು ಅಪ್‌ಗ್ರೇಡ್ ಮಾಡುವುದು ಎಂದಿಗೂ ಕೈಗೆಟುಕುವಂತಿಲ್ಲ. ಈ ಪಟ್ಟಿಯಲ್ಲಿ ಅಮೆಜಾನ್ ಮೂಲಕ ಲಭ್ಯವಿರುವ 8 ಸ್ಮಾರ್ಟ್ ಟಿವಿಗಳ ಪಟ್ಟಿಯನ್ನು ಭಾರಿ ಡೀಲ್ ಮತ್ತು ಡಿಸ್ಕೌಂಟ್ಗಳೊಂದಿಗೆ ಖರೀದಿಸಲು ಒಳ್ಳೆ ಸಮಾಯವಾಗಿದೆ.
ಕಡಿಮೆ ಬೆಲೆಯಲ್ಲಿ ಮಾಡರ್ನ್ ಡಿಸೈನ್ ಟಿವಿ ಹುಡುಕುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಇದರ ‘ಫ್ರೇಮ್‌ಲೆಸ್’ ಅಂದರೆ ಅಂಚುಗಳಿಲ್ಲದ ವಿನ್ಯಾಸವು ನಿಮಗೆ ಸಿನಿಮಾ ಥಿಯೇಟರ್‌ನಂತಹ ಅನುಭವವನ್ನು ನೀಡುತ್ತದೆ. ಇದು ಲಿನಕ್ಸ್ (Linux) ಸಾಫ್ಟ್‌ವೇರ್ ಮೇಲೆ ಕಾರ್ಯನಿರ್ವಹಿಸುವುದರಿಂದ ಅಪ್ಲಿಕೇಶನ್‌ಗಳು ಬೇಗನೆ ತೆರೆದುಕೊಳ್ಳುತ್ತವೆ. ಇದು ನಿಮ್ಮ ಮನೆಯ ವಿಂಗ್ ರೂಮ್‌ಗೆ ಸ್ಟೈಲಿಶ್ ಲುಕ್ ನೀಡಲು ಈ 43 ಇಂಚಿನ ಟಿವಿ ಹೇಳಿ ಮಾಡಿಸಿದಂತಿದೆ.
Also Read: E-Passport: ಭಾರತದಲ್ಲಿ ಈಗ ಇ-ಪಾಸ್‌ಪೋರ್ಟ್ ಬಿಡುಗಡೆ! ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಪಡೆಯುವುದು ಹೇಗೆ?
ಈ ಆಪ್ಟಿಮ್ಯಾಕ್ಸ್ ಸರಣಿಯ ಟಿವಿಯು QLED ತಂತ್ರಜ್ಞಾನವನ್ನು ಹೊಂದಿದೆ ಇದು ಸಾಮಾನ್ಯ ಟಿವಿಗಿಂತ ಹೆಚ್ಚು ಅನುಕೂಲಕರವಾದ ಬಣ್ಣಗಳನ್ನು ಹೊಂದಿದೆ ಸ್ಪಷ್ಟವಾದ ಚಿತ್ರಗಳನ್ನು ತೋರಿಸುತ್ತದೆ. ಇದು ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನಲ್ಲಿ ಕೆಲಸ ಮಾಡುವುದರಿಂದ ಗೂಗಲ್ ಪ್ಲೇ ಸ್ಟೋರ್‌ನಿಂದ ನಿಮಗೆ ಬೇಕಾದ ಆಯಪ್‌ಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಿ ಮಾಡಬಹುದು. ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಗುಣಮಟ್ಟದ ಟಿವಿ ಬೇಕು ಎನ್ನುವವರಿಗೆ ಇದು ಬೆಸ್ಟ್ ಡೀಲ್.
ನಿಮ್ಮ ಮನೆಯಲ್ಲಿ ಕಡಿಮೆ ಇದ್ದು ಅತ್ಯುತ್ತಮ ಕ್ವಾಲಿಟಿ ಬೇಕಿದ್ದರೆ ಈ 40-ಇಂಚಿನ QLED ಟಿವಿ ಕೊಳ್ಳಬಹುದು. ಇದು ದೊಡ್ಡ ಟಿವಿಗಳಲ್ಲಿ ಇರುವಂತೆಯೇ ಎಲ್ಲಾ ಹೈಟೆಕ್ ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ಕಪ್ಪು ಬಣ್ಣದ ಫಿನಿಶಿಂಗ್ ಮತ್ತು ಸ್ಮಾರ್ಟ್ ಆಂಡ್ರಾಯ್ಡ್ ಫೀಚರ್‌ಗಳು ಮಲಗುವ ಕೋಣೆ ಅಥವಾ ಸಣ್ಣ ಕೊಠಡಿಗಳಿಗೆ ಅತಿ ಹೆಚ್ಚು ಸೂಕ್ತವಾಗಿದೆ.
ತೋಷಿಬಾ ಕಂಪನಿಯು ತನ್ನ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಈ 40 ಇಂಚಿನ ಸ್ಮಾರ್ಟ್ ಟಿವಿಯು ‘ರೆಗ್ಜಾ ಇಂಜಿನ್’ (REGZA ಇಂಜಿನ್) ತಂತ್ರಜ್ಞಾನವನ್ನು ಹೊಂದಿದ್ದು ಚಿತ್ರಗಳು ಹೆಚ್ಚು ನೈಸರ್ಗಿಕವಾಗಿ ಮತ್ತು ಸ್ಪಷ್ಟವಾಗಿ ಇದೆ. ಹೆಚ್ಚು ಕಾಲ ಬಾಳಿಕೆ ಬರುವ ಮತ್ತು ನಂಬಿಕಸ್ತ ಬ್ರ್ಯಾಂಡ್ನ ಟಿವಿ ಬೇಕು ಎನ್ನುವವರಿಗೆ ಇದು ಅತ್ಯುತ್ತಮ ಮೌಲ್ಯದ ಆಯ್ಕೆಯಾಗಿದೆ.
ವೆಸ್ಟಿಂಗ್‌ಹೌಸ್ ಪೈ ಸರಣಿಯ ಟಿವಿ ಸಿನಿಮಾ ಪ್ರಿಯರಿಗೆ ತುಂಬಾ ಇಷ್ಟವಾಗುತ್ತದೆ. ಇದರಲ್ಲಿ ಫುಲ್ ಹೆಚ್‌ಡಿ ಪೂರ್ಣ ಎಚ್‌ಡಿ ಚಿತ್ರಗಳ ಜೊತೆಗೆ ಅದ್ಭುತವಾದ ಶಬ್ದದ ಗುಣಮಟ್ಟ ಸೌಂಡ್ ಕ್ವಾಲಿಟಿ ಕೂಡ ಇದೆ. ಇದನ್ನು ತುಂಬಾ ಸುಲಭವಾಗಿ ಬಳಸುವುದು ಕುಟುಂಬದ ಎಲ್ಲರೂ ಸರಳವಾಗಿ ಕಾರ್ಯನಿರ್ವಹಿಸಬಹುದು. ಇದು ಒಂದು ಆಲ್-ರೌಂಡರ್ ಸ್ಮಾರ್ಟ್ ಟಿವಿಯಾಗಿದೆ.
ಕೊಡಾಕ್ ಕಂಪನಿಯ ಈ 2025 ರ ಹೊಸ ಆವೃತ್ತಿಯು ‘ಕ್ವಾಂಟಮ್ ಡಾಟ್’ ತಂತ್ರಜ್ಞಾನವನ್ನು ಹೊಂದಿದೆ. ಇದು ಚಿತ್ರಗಳನ್ನು ಹೆಚ್ಚು ಬ್ರೈಟ್ ಆಗಿ ಅಂದರೆ ಪ್ರಕಾಶಮಾನವಾಗಿ ತೋರಿಸುತ್ತದೆ. ಹೊಸ ತಂತ್ರಜ್ಞಾನದ ಜೊತೆಗೆ ವೇಗವಾಗಿ ಕೆಲಸ ಮಾಡುವ ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಬಯಸುವವರಿಗೆ ಈ ಟಿವಿ ಉತ್ತಮ ಡೀಲ್ ಆಗಿದೆ.
ಏಸರ್ ಕಂಪನಿಯ ಈ ಅಲ್ಟ್ರಾ ಸರಣಿಯು ಗೂಗಲ್ ಟಿವಿ ಸಾಫ್ಟ್‌ವೇರ್ ಹೊಂದಿದೆ. ಇದು ನಿಮ್ಮ ಇಷ್ಟದ ಸಿನಿಮಾಗಳು ಮತ್ತು ಸೀರಿಯಲ್‌ಗಳನ್ನು ಆಟೋಮ್ಯಾಟಿಕ್ ಆಗಿ ಸಜೆಸ್ಟ್ ಮಾಡುತ್ತದೆ. ಗೂಗಲ್ ಅಸಿಸ್ಟೆಂಟ್ ಮೂಲಕ ನೀವು ಧ್ವನಿ ನೀಡುವ ಮೂಲಕ ಟಿವಿಯನ್ನು ನಿಯಂತ್ರಿಸಬಹುದು. ಸ್ಮಾರ್ಟ್ ಫೀಚರ್ಸ್ ಇಷ್ಟಪಡುವವರಿಗೆ ಇದನ್ನು ಹೇಳಿ ಮಾಡಿದ ಟಿವಿ.
ಬ್ಲೂಪಂಕ್ಟ್ ಕಂಪನಿಯು ಸೌಂಡ್ ಸಿಸ್ಟಮ್‌ಗೆ ಬಹಳ ಫೇಮಸ್. ಈ ಸೈಬರ್ ಸೌಂಡ್ ಸರಣಿಯ ಟಿವಿಯಲ್ಲಿ ಚಿತ್ರಗಳು ಸ್ಪಷ್ಟವಾಗಿರುವುದರ ಜೊತೆಗೆ ಸೌಂಡ್ ಕೂಡ ಸಖತ್ ಪವರ್ಫುಲ್ ಆಗಿದೆ. ಮನೆಯಲ್ಲಿ ಯಾವುದೇ ಎಕ್ಸ್ಟ್ರಾ ಸ್ಪೀಕರ್ ಇಲ್ಲದೆಯೂ ನೀವು ಸಿನಿಮಾ ನೋಡಿ ಮಜಾ ಮಾಡಬಹುದು. ಇದೂ ಕೂಡ ಗೂಗಲ್ ಟಿವಿ ಸಿಸ್ಟಮ್‌ನಲ್ಲೇ ಬರುತ್ತದೆ.