Sony ಕಂಪನಿಯ 65 ಇಂಚಿನ ಸ್ಮಾರ್ಟ್‌ಟಿವಿ ಖರೀದಿಸಲು ಇದುವೇ ಬೆಸ್ಟ್ ಟೈಮ್!
ಅಮೆಜಾನ್‌ನಲ್ಲಿ ಸೋನಿ 65 ಇಂಚಿನ ಸ್ಮಾರ್ಟ್‌ಟಿವಿ ಬಿಗ್ ಆಫರ್‌ನಲ್ಲಿ ಲಭ್ಯ
ಈ ಸ್ಮಾರ್ಟ್‌ಟಿವಿಯು ಸೋನಿ X1 4K ಪ್ರೊಸೆಸರ್ ಪವರ್ ಅನ್ನು ಪಡೆದಿದೆ
ಈ ಸ್ಮಾರ್ಟ್‌ಟಿವಿಯು 20W ಔಟ್‌ಪುಟ್ ಸೌಂಡ್ ಸಪೋರ್ಟ್ ಸೌಲಭ್ಯ ಹೊಂದಿದೆ
ಅಮೆಜಾನ್ ಪ್ರೈಮ್ ಡೇ ಸೇಲ್‌ನಲ್ಲಿ ಆಯ್ದ ಸ್ಮಾರ್ಟ್‌ಟಿವಿಗಳು ಸಹ ಭರ್ಜರಿ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿವೆ. ಈ ವಿಶೇಷ ಸೇಲ್‌ನಲ್ಲಿ ಸೋನಿ ಕಂಪನಿಯ Sony 65 ಇಂಚಿನ ಬ್ರಾವಿಯಾ 2 M2 ಸ್ಮಾರ್ಟ್ ಟಿವಿ ಸಖತ್ ರಿಯಾಯಿತಿ ಪಡೆದುಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್ ಮೂಲಕ ಈ ಮೊಬೈಲ್ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್ ಸಹ ಪಡೆಯಲು ಚಾನ್ಸ್ ಇದೆ. ಸಂಸ್ಥೆಯ ಈ ಸ್ಮಾರ್ಟ್ ಟಿವಿಯು ಸೋನಿ X1 4K ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಟಿವಿಯು ಡಾಲ್ಬಿ ಅಟ್ಮೋಸ್ ಆಡಿಯೋ ಸೌಲಭ್ಯ ಸಹ ಪಡೆದಿದೆ. ಹಾಗೆಯೇ ಈ ಸ್ಮಾರ್ಟ್‌ಟಿವಿಯು ಗೂಗಲ್ ಟಿವಿ ಸೇರಿದಂತೆ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಪಡೆದಿದೆ. ಹಾಗಾದರೆ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಸೋನಿ 65 ಇಂಚಿನ ಬ್ರಾವಿಯಾ 2 M2 ಸ್ಮಾರ್ಟ್ ಟಿವಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Vivo X200T ಮೊಬೈಲ್ ಬೆಲೆಯಲ್ಲಿ ಸಖತ್ ಇಳಿಕೆ; ಟ್ರಿಪಲ್ 50MP ಕ್ಯಾಮೆರಾ ಸೌಲಭ್ಯ
Sony 65 ಸ್ಮಾರ್ಟ್‌ಟಿವಿಗೆ ಭರ್ಜರಿ ರಿಯಾಯಿತಿ
ಆಕರ್ಷಕ ಫೀಚರ್ಸ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿರುವ ಸೋನಿ ಕಂಪನಿಯ ಸೋನಿ 65 ಇಂಚಿನ ಬ್ರಾವಿಯಾ 2 M2 ಸ್ಮಾರ್ಟ್ ಟಿವಿ ಅಮೆಜಾನ್ ಇ ಕಾಮರ್ಸ್ ಆಯೋಜಿಸಿರುವ ಸೇಲ್‌ನಲ್ಲಿ ಅತ್ಯುತ್ತಮ ಡಿಸ್ಕೌಂಟ್ ಪಡೆದುಕೊಂಡಿದೆ. ಈ ಸ್ಮಾರ್ಟ್ ಟಿವಿಯ 55 ಇಂಚಿನ ವೇರಿಯಂಟ್ ಬೆಲೆ 1,39,900 ರೂ.ಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 78,892 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಅಂದಹಾಗೆ ಈ ಸ್ಮಾರ್ಟ್ ಟಿವಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

ಸೋನಿ 65 ಇಂಚಿನ ಸ್ಮಾರ್ಟ್‌ಟಿವಿ ಫೀಚರ್ಸ್
ಸೋನಿ ಕಂಪನಿಯ ಈ ಸ್ಮಾರ್ಟ್‌ಟಿವಿಯು 65 ಇಂಚಿನ LED ಡಿಸ್‌ಪ್ಲೇಯ ಹೊಂದಿದ್ದು, ಇದು 4K ರೆಸಲ್ಯೂಶನ್ ಸಪೋರ್ಟ್ ಪಡೆದಿದೆ. ಇದರೊಂದಿಗೆ 60Hz ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ ಮೋಷನ್‌ಫ್ಲೋ XR 100 ಪಡೆದುಕೊಂಡಿದೆ. ಅಲ್ಲದೇ ಇದು 20W ಔಟ್‌ಪುಟ್ ಸೌಂಡ್ ಸಪೋರ್ಟ್ ಹೊಂದಿರುವ ಜೊತೆಗೆ DTS ಡಿಜಿಟಲ್ ಸರೌಂಡ್, DTS:X, ಡಾಲ್ಬಿ ಅಟ್ಮಾಸ್, ಡಾಲ್ಬಿ ಆಡಿಯೋ ಆಯ್ಕೆಗಳನ್ನು ಸಹ ಒಳಗೊಂಡಿದೆ.
ಸೋನಿ 65 ಇಂಚಿನ ಸ್ಮಾರ್ಟ್‌ಟಿವಿ ಗೂಗಲ್ ಟಿವಿ, ವಾಚ್‌ಲಿಸ್ಟ್, ಗೂಗಲ್ ಅಸಿಸ್ಟೆಂಟ್, ಗೂಗಲ್ ಕ್ಯಾಸ್ಟ್, ಗೇಮ್ ಮೆನು ಆಯ್ಕೆಗಳನ್ನು ಪಡೆದುಕೊಂಡಿದೆ. ಇದರೊಂದಿಗೆ ಈ ಸ್ಮಾರ್ಟ್ ಟಿವಿಯು ಈಥರ್ನೆಟ್, 4 HDMI ಪೋರ್ಟ್‌ಗಳು, ಎರಡು USB ಹಾಗೂ Wi-Fi ಕನೆಕ್ಟಿವಿಟಿ ಸೌಲಭ್ಯಗಳನ್ನು ಸಹ ಹೊಂದಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
