Samsung ಸಂಸ್ಥೆಯ 65 ಇಂಚಿನ ಈ ಸ್ಮಾರ್ಟ್‌ ಟಿವಿ ಈಗ ಭಾರೀ ಆಫರ್‌ ಬೆಲೆಯಲ್ಲಿ ಲಭ್ಯ!

HIGHLIGHTS

ಅಮೆಜಾನ್‌ನಲ್ಲಿ ಸ್ಯಾಮ್‌ಸಂಗ್ ಈ ಟಿವಿ ಆಕರ್ಷಕ ಡಿಸ್ಕೌಂಟ್‌ನಲ್ಲಿ ಲಭ್ಯ

ಸ್ಯಾಮ್‌ಸಂಗ್ ಸಂಸ್ಥೆಯ ಈ ಟಿವಿ 30W ಸೌಂಡ್‌ ಔಟ್‌ಪುಟ್‌ ಸೌಲಭ್ಯ ಹೊಂದಿದೆ

ಸ್ಯಾಮ್‌ಸಂಗ್ನ ಈ ಟಿವಿ ಅಲೆಕ್ಸಾ ಮತ್ತು ಗೂಗಲ್‌ ಅಸಿಸ್ಟಂಟ್ ಸಪೋರ್ಟ್‌ ಪಡೆದಿದೆ

Samsung ಸಂಸ್ಥೆಯ 65 ಇಂಚಿನ ಈ ಸ್ಮಾರ್ಟ್‌ ಟಿವಿ ಈಗ ಭಾರೀ ಆಫರ್‌ ಬೆಲೆಯಲ್ಲಿ ಲಭ್ಯ!

ಅಮೆಜಾನ್‌ ಇ ಕಾಮರ್ಸ್‌ ಆಯೋಜಿಸಿರುವ Amazon Great Freedom Sale 2026 ಸೇಲ್‌ ಇದೀಗ ಮುಕ್ತಾಯದ ಹಂತಕ್ಕೆ ಬಂದಿದೆ. ಈ ಮಾರಾಟದಲ್ಲಿ Samsung 65 inches Crystal UHD 4K Smart TV ಸಖತ್ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿದೆ. ಇದಷ್ಟೇ ಅಲ್ಲದೆ ಕೆಲವು ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಇನ್‌ಸ್ಟಂಟ್‌ ಡಿಸ್ಕೌಂಟ್‌, ಎಕ್ಸ್‌ಚೇಂಜ್ ಆಫರ್‌, ನೋ-ಕಾಸ್ಟ್ EMI ಹಾಗೂ ಕ್ಯಾಶ್‌ಬ್ಯಾಕ್‌ ಸೌಲಭ್ಯಗಳನ್ನೂ ಖರೀದಿದಾರರು ಪಡೆಯಬಹುದು. ಅಂದಹಾಗೆ ಈ ಸ್ಮಾರ್ಟ್‌ ಟಿವಿಯು Alexa ಮತ್ತು Google Assistant ಬೆಂಬಲ ಸಹ ಪಡೆದುಕೊಂಡಿರುವ ಜೊತೆಗೆ 30W ಸೌಂಡ್‌ ಔಟ್‌ಪುಟ್‌ ಸೌಲಭ್ಯ ಹೊಂದಿದೆ. ಹಾಗಾದರೆ ಅಮೆಜಾನ್‌ ಗ್ರೇಟ್ ಫ್ರೀಡಂ ಸೇಲ್‌ನಲ್ಲಿ ಸ್ಯಾಮ್‌ಸಂಗ್ 65 ಇಂಚಿನ ಕ್ರಿಸ್ಟಲ್ UHD 4K ಸ್ಮಾರ್ಟ್ ಟಿವಿಗೆ ಲಭ್ಯ ಇರುವ ಆಫರ್‌ ಹಾಗೂ ಫೋನಿನ ಫೀಚರ್ಸ್‌ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : 9,000mAh ಬ್ಯಾಟರಿ ಇರುವ OnePlus Nord 6 ಮೊಬೈಲ್‌ ಈಗ ಡಿಸ್ಕೌಂಟ್‌ ಬೆಲೆಗೆ ಲಭ್ಯ!

Samsung ಸ್ಮಾರ್ಟ್‌ ಟಿವಿಗೆ ಬಿಗ್ ಆಫರ್‌

ಪ್ರೀಮಿಯಂ ವಿಭಾಗದಲ್ಲಿ ಆಕರ್ಷಕ ಫೀಚರ್ಸ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿರುವ ಸ್ಯಾಮ್‌ಸಂಗ್ ಕಂಪನಿಯ ಸ್ಯಾಮ್‌ಸಂಗ್ 65 ಇಂಚಿನ ಕ್ರಿಸ್ಟಲ್ UHD 4K ಸ್ಮಾರ್ಟ್ ಟಿವಿ (ಮಾಡೆಲ್‌ UA65UE85AHULXL) ಅಮೆಜಾನ್‌ ಇ ಕಾಮರ್ಸ್‌ ಆಯೋಜಿಸಿರುವ ಸೇಲ್‌ನಲ್ಲಿ ಬೊಂಬಾಟ್‌ ರಿಯಾಯಿತಿ ಪಡೆದುಕೊಂಡಿದೆ. ಈ ಸ್ಮಾರ್ಟ್‌ ಟಿವಿ ಬೆಲೆಯು 81,900 ರೂ.ಗಳು ಆಗಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್‌ 58,990 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಅಂದಹಾಗೆ ಈ ಕ್ರಿಸ್ಟಲ್ ಟಿವಿ ಶ್ರೇಣಿಯು ಇತರೆ ಗಾತ್ರಗಳ ಆಯ್ಕೆಯಲ್ಲಿ ಲಭ್ಯ. ಈ ಸ್ಮಾರ್ಟ್‌ ಟಿವಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Samsung 65 Inch 4K Smart TV Price Drops on Amazon Great Freedom Sale Check Offers

ಸ್ಯಾಮ್‌ಸಂಗ್ ಕ್ರಿಸ್ಟಲ್ ಸ್ಮಾರ್ಟ್‌ಟಿವಿ ಫೀಚರ್ಸ್‌

ಈ ಸ್ಮಾರ್ಟ್‌ಟಿವಿ 65 ಇಂಚಿನ ಗಾತ್ರದಲ್ಲಿ ಇದೆ. ಅಲ್ಲದೇ 4K ಅಲ್ಟ್ರಾ HD ರೆಸಲ್ಯೂಶನ್‌ ಜೊತೆಗೆ 50Hz ರಿಫ್ರೆಶ್‌ ರೇಟ್‌ ಸೌಲಭ್ಯ ಪಡೆದಿದೆ. ಸ್ಯಾಮ್‌ಸಂಗ್ ಕ್ರಿಸ್ಟಲ್ ಪ್ರೊಸೆಸರ್‌ 4K, HDR10+, 4K ಅಪ್‌ಸ್ಕೇಲಿಂಗ್, ಕಲರ್ ಬೂಸ್ಟರ್, ಕಾಂಟ್ರಾಸ್ಟ್ ಎನ್ಹ್ಯಾನ್ಸರ್, UHD ಡಿಮ್ಮಿಂಗ್ ಹಾಗೂ ಮೋಷನ್ ಎಸ್ಕಲೇಟರ್ ಸೇರಿದಂತೆ ಹಲವು ಡಿಸ್‌ಪ್ಲೇ ತಂತ್ರಜ್ಞಾನಗಳು ಸಪೋರ್ಟ್‌ ಪಡೆದಿದೆ. ಹಾಗೆಯೇ ಫಿಲ್ಮ್ ಮೋಡ್ ಮತ್ತು ಫಿಲ್ಮೇಕರ್ ಮೋಡ್ ಆಯ್ಕೆಗಳು ಸಹ ಲಭ್ಯವಿವೆ.

ಹಾಗೆಯೇ ಕನೆಕ್ಟಿವಿಟಿ ವಿಭಾಗದಲ್ಲಿ 3 HDMI ಪೋರ್ಟ್‌ಗಳು, 1 USB-A ಪೋರ್ಟ್‌, Wi-Fi 5, ಬ್ಲೂಟೂತ್ 5.3 ಮತ್ತು HDMI eARC ಸೌಲಭ್ಯಗಳಿವೆ. ಸೆಟ್‌ಟಾಪ್ ಬಾಕ್ಸ್, DTH, ಸೌಂಡ್‌ಬಾರ್, ಹೋಮ್ ಥಿಯೇಟರ್ ಹಾಗೂ ಗೇಮಿಂಗ್ ಕನ್ಸೋಲ್‌ಗಳನ್ನು ಸುಲಭವಾಗಿ ಸಂಪರ್ಕಿಸಬಹುದು. ಆಡಿಯೋ ವಿಭಾಗದಲ್ಲಿ 30W ಸೌಂಡ್‌ ಔಟ್‌ಪುಟ್‌ ಬೆಂಬಲವಿದೆ. ಅಲ್ಲದೇ ಇದು ಅಲೆಕ್ಸಾ ಮತ್ತು ಗೂಗಲ್‌ ಅಸಿಸ್ಟಂಟ್ ಸಪೋರ್ಟ್‌ ಪಡೆದಿದೆ. ಹಾಗೆಯೇ ಗೂಗಲ್‌ ಕಾಸ್ಟ್‌, ಏರ್‌ಪ್ಲೇ, ಮೊಬೈಲ್ ಮಿರರಿಂಗ್ ಆಯ್ಕೆಗಳನ್ನು ಒಳಗೊಂಡಿವೆ.

Disclosure: This Article Contains Affiliate Links

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile