ನೀವೇನಾದರೂ LG ಕಂಪನಿಯ ಸ್ಮಾರ್ಟ್ ಟಿವಿಯನ್ನು ಆಕರ್ಷಕ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಸುವ ಪ್ಲಾನ್ ಮಾಡಿದ್ದಿರಾ? ಹಾಗಿದ್ದರೆ ಹೊಸ ಸ್ಮಾರ್ಟ್ ಟಿವಿ ಖರೀದಿಸಲು ಇದುವೇ ರೈಟ್ ಟೈಮ್. ಹೌದು, ಜನಪ್ರಿಯ ಇ ಕಾಮರ್ಸ್ ಪ್ಲಾಟ್‌ಫಾರ್ಮ್ Flipkart ನಲ್ಲಿ LG ಸಂಸ್ಥೆಯ AI TV UA8200 ಸಿರೀಸ್‌ನ 43 ಇಂಚಿನ ಸ್ಮಾರ್ಟ್ ಟಿವಿ ಭರ್ಜರಿ ರಿಯಾಯಿತಿ ದರದಲ್ಲಿ ಲಭ್ಯ ಇದೆ. ಬ್ಯಾಂಕ್ ಆಫರ್‌ಗಳ ಮೂಲಕ ಹೆಚ್ಚುವರಿ ಡಿಸ್ಕೌಂಟ್ ಸಹ ಪಡೆಯಬಹುದಾಗಿದೆ. ಇನ್ನು ಈ ಸ್ಮಾರ್ಟ್ ಟಿವಿಯು Alpha7 AI ಪ್ರೊಸೆಸರ್ 4K Gen8 ಸೌಲಭ್ಯ ಒಳಗೊಂಡಿರುವ ಜೊತೆಗೆ 4K ಸೂಪರ್ ಅಪ್‌ಸ್ಕೇಲಿಂಗ್ ಆಯ್ಕೆಯನ್ನು ಪಡೆದಿದೆ. ಈ ಟಿವಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ಕೊಡುಗೆ ಬಗ್ಗೆ ಮುಂದೆ ತಿಳಿಯೋಣ.
Also Read : OPPO Find X9s: ಡ್ಯುಯಲ್ 200MP ಕ್ಯಾಮೆರಾ ಜೊತೆಗೆ ಎಂಟ್ರಿ ಕೊಡಲಿದೆ ಒಪ್ಪೋದ ಹೊಸ ಸ್ಮಾರ್ಟ್‌ಫೋನ್!
LG ಸಂಸ್ಥೆಯ AI TV UA8200 ಸಿರೀಸ್‌ನ (2025 ಮಾಡೆಲ್) 43 ಇಂಚಿನ ಸ್ಮಾರ್ಟ್ ಟಿವಿ ಆಕರ್ಷಕ ಬೆಲೆ ಇಳಿಕೆ ಪಡೆದಿದೆ. Flipkart ತಾಣದಲ್ಲಿ ಈ ಸ್ಮಾರ್ಟ್ ಟಿವಿಯ ಮೂಲ ಬೆಲೆ 46,090 ರೂಗಳು ಆಗಿದ್ದು ಸದ್ಯ 29,990 ರೂಗಳ ಆಫರ್ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ.
LG ಸಂಸ್ಥೆಯ AI TV UA8200 ಸರಣಿಯ ಈ ಟಿವಿಯು 43 ಇಂಚಿನ (108 cm) LED ಸ್ಕ್ರೀನ್ ಅನ್ನು ಪಡೆದಿದೆ. ಈ ಟಿವಿ ಸ್ಕ್ರೀನ್ 3840 X 2160 ಪಿಕ್ಸಲ್ ರೆಸಲ್ಯೂಶನ್ ಜೊತೆಗೆ Ultra HD 4K ಸಪೋರ್ಟ್ ಹೊಂದಿದೆ. ಹಾಗೆಯೇ ಇದು 178 ಡಿಗ್ರಿ ವೀಕ್ಷಣಾ ನೋಟ ರಚನೆಯಲ್ಲಿದೆ. ಈ ಸ್ಮಾರ್ಟ್ ಟಿವಿಯು Alpha7 AI ಪ್ರೊಸೆಸರ್ 4K Gen8 ಸೌಲಭ್ಯ ಒಳಗೊಂಡಿದೆ ಹಾಗೂ 4K ಸೂಪರ್ ಅಪ್‌ಸ್ಕೇಲಿಂಗ್ ಆಯ್ಕೆ ಪಡೆದುಕೊಂಡಿದೆ. ಅಲ್ಲದೇ AI ಪಿಕ್ಚರ್ ಪ್ರೊ, 4K ಎಕ್ಸ್‌ಪ್ರೆಶನ್ ಎನ್ಹ್ಯಾನ್ಸರ್, ನೂತನ AI ಮ್ಯಾಜಿಕ್ ರಿಮೋಟ್ ಹೊಂದಾಣಿಕೆ, MS ಕೊಪಿಲಟ್ ಜೊತೆಗೆ AI ಸರ್ಚ್ ನಂತಹ ಇತ್ತೀಚಿನ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿದೆ.
ಈ ಟಿವಿಯು ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಯೂಟ್ಯೂಬ್, ಜಿಯೋಹಾಟ್‌ಸ್ಟಾರ್, Zee5 ಸೇರಿದಂತೆ ಸೋನಿಲೈವ್, LG ಚಾನೆಲ್‌ಗಳು, ಆಪಲ್ ಟಿವಿ, ಡಿಸ್ಕವರಿ+, ಸ್ಪಾಟಿಫೈ ನಂತಹ ಹಲವು ಅಪ್ಲಿಕೇಶನ್‌ಗಳ ಸಪೋರ್ಟ್ ಹೊಂದಿದೆ. ಇದು 2 GB RAM ಮತ್ತು 8 GB ಸ್ಟೋರೇಜ್ ಸೌಲಭ್ಯ ಪಡೆದಿದೆ. ಇನ್ನು ಈ ಟಿವಿಯ ಸೌಂಡ್ ಸಹ ಅತ್ಯುತ್ತಮವಾಗಿದೆ. ಇದು ಎರಡು ಸ್ಪೀಕರ್ಸ್‌ಗಳನ್ನು ಒಳಗೊಂಡಿದ್ದು ಅವುಗಳು 20W ಔಟ್‌ಪುಟ್ ಆಯ್ಕೆ ಪಡೆದಿದೆ. ಇದರೊಂದಿಗೆ ಡಾಲ್ಬಿ ಅಟ್ಮಾಸ್, AI ಸೌಂಡ್, ಕ್ಲಿಯರ್ ವಾಯ್ಸ್ ಪ್ರೊ (ಆಟೋ ವಾಲ್ಯೂಮ್ ಲೆವೆಲಿಂಗ್), AI ಅಕೌಸ್ಟಿಕ್ ಟ್ಯೂನಿಂಗ್, LG ಸೌಂಡ್ ಸಿಂಕ್, ಸೌಂಡ್ ಮೋಡ್ ಶೇರ್ ನಂತಹ ಆಯ್ಕೆಗಳು ಸಹ ಇವೆ.