55 Inch VW 4K Smart TV
55 Inch 4K Smart TV: ಭಾರತದಲ್ಲಿ ನೀವೊಂದು ಅತ್ಯುತ್ತಮವಾದ VW ಕಂಪನಿಯ ಅತ್ಯುತ್ತಮ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಅಥವಾ ನಿಮ್ಮ ಹಳೆ ಟಿವಿಯನ್ನು ಹೊಸ ಫೀಚರ್ಗಳೊಂದಿಗೆ ಅಪ್ಗ್ರೇಡ್ ಮಾಡಲು ಯೋಚಿಸುತ್ತಿದ್ದರೆ ಇದು ಒಳ್ಳೆ ಸಮಯವಾಗಿದೆ. ಯಾಕೆಂದರೆ ಪ್ರಸ್ತುತ ಯಾವುದೇ ಹೆಚ್ಚು ಹಣ ಖರ್ಚು ಮಾಡದೇ ನಿಮ್ಮ ಹಳೆ ಟಿವಿಯನ್ನು ಬಳಸಿಕೊಂಡು ಈ VW 55 inch 4k QLED Google Smart TV ಅನ್ನು ತುಂಬ ಕಡಿಮೆ ಬೆಲೆಗೆ ಖರೀದಿಸಬಹುದು. ಆಸಕ್ತರು ಫೆಡರಲ್ ಮತ್ತು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 3000 ರೂಗಳವರೆಗೆ ರಿಯಾಯಿತಿಯನ್ನು ನಿರೀಕ್ಷಿಸಬಹುದು. ಹಾಗಾದ್ರೆ ಇದರ ಸಂಪೂರ್ಣ ಫೀಚರ್ಗಳೊಂದಿಗೆ ಡಿಸ್ಕೌಂಟ್ ಆಫರ್ ಬೆಲೆ ಎಲ್ಲವನ್ನು ತಿಳಿಯಿರಿ.
ಪ್ರಸ್ತುತ ಅಮೆಜಾನ್‌ನಲ್ಲಿ ಸುಮಾರು ₹24,999 ರೂಗಳಿಗೆ ಪಟ್ಟಿಯಾಗಿ ಮಾರಾಟವಾಗುತ್ತಿರುವ ಈ VW ಸ್ಮಾರ್ಟ್ ಟಿವಿಯನ್ನು ಆಸಕ್ತ ಬಳಕೆದಾರರು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಅತ್ಯುತ್ತಮವಾದ ಡಿಸ್ಕೌಂಟ್ ಪಡೆಯಬಹುದು. ಅದರಲ್ಲೂ ನಿಮ್ಮ ಬಳಿ Federal Bank Credit Card ಇದ್ದರೆ ಸುಮಾರು ₹3000 ರೂಗಳವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಈ VW ಸ್ಮಾರ್ಟ್ ಟಿವಿ ನಿಮಗೆ ಅತ್ಯುತ್ತಮವಾದ ಪ್ರೀಮಿಯಂ ಡಿಸೈನಿಂಗ್ ಜೊತೆಗೆ ಉತ್ತಮವಾದ ವೀಕ್ಷಣಾ ಅನುಭವ ಮತ್ತು ಆಡಿಯೋ ಕ್ವಾಲಿಟಿಗಾಗಿ ಇದೊಂದು ಉತ್ತಮ ಆಯ್ಕೆಯಾಗಲಿದೆ.
ಹೆಚ್ಚುವರಿಯಾಗಿ ಅಲ್ಲದೆ ವಿನಿಮಯ ಕೊಡುಗೆಯನ್ನು ಸಹ (Exchange Offer) ಸಹ ಪಡೆಯಬಹುದು. ಈ VW ಸ್ಮಾರ್ಟ್ ಟಿವಿಯನ್ನು ಖರೀದಿಸಲು ನಿಮ್ಮ ಹಳೆಯ ಸ್ಮಾರ್ಟ್ ಟಿವಿಯನ್ನು ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು ₹3,050 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: BSNL Plan: ಬರೋಬ್ಬರಿ 72 ದಿನಗಳಿಗೆ ಅನ್ಲಿಮಿಟೆಡ್ ಕರೆ ಮತ್ತು 4G ಡೇಟಾ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯ!
ಅತ್ಯುತ್ತಮ ಫೀಚರ್ಗಳೊಂದಿಗೆ ಪ್ರೀಮಿಯಂ ಡಿಸ್ಪ್ಲೇ ಮತ್ತು ಸ್ಮಾರ್ಟ್ ತಂತ್ರಜ್ಞಾನವನ್ನು ಬಳಸಿಕೊಂಡು ಕೈಗೆಟುಕುವ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. 55 ಇಂಚಿನ QLED (ಕ್ವಾಂಟಮ್ ಡಾಟ್ LED) ಪ್ಯಾನೆಲ್ 3840×2160 ಪಿಕ್ಸೆಲ್‌ಗಳೊಂದಿಗೆ ಪ್ರಮಾಣಿತ LED ಹೊಳಪನ್ನು ಒದಗಿಸುತ್ತದೆ. 60 Hz ರಿಫ್ರೆಶ್ ದರದಲ್ಲಿ ಕಾರ್ಯನಿರ್ವಹಿಸುತ್ತವೆ. ಇದರ HDR10, HDR10+, ಮತ್ತು ಡಾಲ್ಬಿ ವಿಷನ್ ಸೇರಿದಂತೆ ಹೆಚ್ಚಿನ ಡೈನಾಮಿಕ್ ರೇಂಜ್ ಸ್ವರೂಪಗಳಿಗೆ ಬೆಂಬಲ ನೀಡುತ್ತದೆ.
ಆಡಿಯೋ ವಿಷಯದಲ್ಲಿ ಈ ಟಿವಿಯು 30W ಸೌಂಡ್ ವ್ಯವಸ್ಥೆಯನ್ನು ಹೊಂದಿದ್ದು ಹೆಚ್ಚಾಗಿ ಸಬ್ ವೂಫರ್‌ನೊಂದಿಗೆ 2.1 ಚಾನೆಲ್ ಆಗಿ ಕಾನ್ಫಿಗರ್ ಮಾಡಲಾಗಿದೆ. ತಲ್ಲೀನಗೊಳಿಸುವ ಸೌಂಡ್ ಅನುಭವಕ್ಕಾಗಿ ಡಾಲ್ಬಿ ಅಟ್ಮಾಸ್ ಬೆಂಬಲವನ್ನು ಹೊಂದಿದೆ. ಇದು ಗೂಗಲ್ ಟಿವಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಮುಖ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು, ವೈಯಕ್ತಿಕಗೊಳಿಸಿದ ಶಿಫಾರಸುಗಳು ಮತ್ತು ಗೂಗಲ್ ಅಸಿಸ್ಟೆಂಟ್ ವಾಯ್ಸ್ ರಿಮೋಟ್ ಮೂಲಕ ಹ್ಯಾಂಡ್ಸ್-ಫ್ರೀ ಕಂಟ್ರೋಲ್ ಒದಗಿಸುತ್ತದೆ. ಇದರಲ್ಲಿ ಮೂರು HDMI ಪೋರ್ಟ್‌ಗಳು ಒಂದು eARC ಬೆಂಬಲದೊಂದಿಗೆ ಎರಡು USB ಪೋರ್ಟ್‌ಗಳು, ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್ 5.1 ಸೇರಿದಂತೆ ಸಂಪರ್ಕ ಆಯ್ಕೆಗಳು ಬಲಿಷ್ಠವಾಗಿವೆ.