50 Inch Smart TV: ಅಮೆಜಾನ್ ಸೇಲ್‌ನಲ್ಲಿ 50 ಇಂಚಿನ Philips ಸ್ಮಾರ್ಟ್ ಟಿವಿಯ ಮೇಲೆ ಭರ್ಜರಿ ಡಿಸ್ಕೌಂಟ್ಗಳು!

Updated on 15-Jan-2026
HIGHLIGHTS

ಪ್ರಸ್ತುತ ನಿಮಗೊಂದು 50 ಇಂಚಿನ ದೊಡ್ಡ ಸ್ಕ್ರೀನ್ ಸ್ಮಾರ್ಟ್ ಟಿವಿ ಬೇಕಿದ್ದರೆ ಒಂದು ಸುವರ್ಣಾವಕಾಶ ಇಲ್ಲಿದೆ.

ಜನಪ್ರಿಯ Philips ಕಂಪನಿಯ ಈ QLED ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಡಿಸ್ಕೌಂಟ್ ಸೀಮಿತ ಅವಧಿಗೆ ಲಭ್ಯವಿದೆ.

ಈ ಮಾರಾಟದಲ್ಲಿ ಆಸಕ್ತ ಬಳಕೆದಾರರು HSBC, YES ಮತ್ತು IDFC First ಬ್ಯಾಂಕ್ ಕಾರ್ಡ್ ಬಳಸಿ 10% ಡಿಸ್ಕೌಂಟ್ ಪಡೆಯಬಹುದು.

50 Inch Smart TV: ಭಾರತದಲ್ಲಿ ಜನಪ್ರಿಯ ಮತ್ತು ಅತಿದೊಡ್ಡ ಆನ್ಲೈನ್ ಶೋಪಿಂಗ್ ಮಾರ್ಕೆಟ್ ಅಮೆಜಾನ್ ಈ ವರ್ಷದ ಮೊದಲ ಮತ್ತು ಅತಿದೊಡ್ಡ ಅಮೆಜಾನ್ ರಿಪಬ್ಲಿಕ್ ಡೇ ಸೇಲ್ ಡೇಟ್ ಘೋಷಿಸಿದೆ. ಆದರೆ ಈ ಮಾರಾಟಕ್ಕೂ ಮುಂಚೆ ಸದ್ದಿಲ್ಲದೆ ಜನಪ್ರಿಯ Philips ಕಂಪನಿಯ ಈ Philips 50 inches 8100 Series 4K Ultra QLED Google Smart TV ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್ ಟಿವಿಯನ್ನು ಮಾರಾಟ ಮಾಡುತ್ತಿರುವುದು ನಿಜಕ್ಕೂ ಅಚ್ಚರಿಯಾಗಿದೆ. ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ (Amazon Great Republic Day Sale 2026) ಈ ಸ್ಮಾರ್ಟ್ ಟಿವಿಯ ಮೇಲೆ ಭರ್ಜರಿ ಡಿಸ್ಕೌಂಟ್ ಸೀಮಿತ ಅವಧಿಗೆ ನೀಡುತ್ತಿದೆ. ಈ ಲೇಟೆಸ್ಟ್ ಪ್ರೀಮಿಯಂ 4K Ultra ಸ್ಮಾರ್ಟ್ ಟಿವಿಯ ಮೇಲೆ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದೆ.

Also Read: Free Passes: ಗಣರಾಜ್ಯೋತ್ಸವದ ಪ್ರಯುಕ್ತ ನಡೆಯಲಿರುವ ಫುಲ್ ಡ್ರೆಸ್ ರಿಹರ್ಸಲ್ ಪರೇಡ್ ವೀಕ್ಷಿಸಲು ಉಚಿತ ಪಾಸ್ ಪಡೆಯುವುದು ಹೇಗೆ?

Philips 50 inches 8100 Series 4K Ultra QLED Google Smart TV

ಪ್ರಸ್ತುತ ಅಮೆಜಾನ್‌ನಲ್ಲಿ ಸುಮಾರು ₹24,999 ರೂಗಳಿಗೆ ಪಟ್ಟಿಯಾಗಿ ಮಾರಾಟವಾಗುತ್ತಿರುವ ಈ ಫಿಲಿಪ್ಸ್ ಸ್ಮಾರ್ಟ್ ಟಿವಿಯನ್ನು ಆಸಕ್ತ ಬಳಕೆದಾರರು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಅತ್ಯುತ್ತಮವಾದ ಡಿಸ್ಕೌಂಟ್ ಪಡೆಯಬಹುದು. ಈ ಮಾರಾಟದಲ್ಲಿ ಆಸಕ್ತ ಬಳಕೆದಾರರು HSBC, YES ಮತ್ತು IDFC First ಬ್ಯಾಂಕ್ ಕಾರ್ಡ್ ಬಳಸಿ 10% ಡಿಸ್ಕೌಂಟ್ ಪಡೆಯಬಹುದು. ಅಂದರೆ ಸುಮಾರು ₹1500 ರೂಗಳವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಈ ಫಿಲಿಪ್ಸ್ ಸ್ಮಾರ್ಟ್ ಟಿವಿ ನಿಮಗೆ ಅತ್ಯುತ್ತಮವಾದ ಪ್ರೀಮಿಯಂ ಡಿಸೈನಿಂಗ್ ಜೊತೆಗೆ ಉತ್ತಮವಾದ ವೀಕ್ಷಣಾ ಅನುಭವ ಮತ್ತು ಆಡಿಯೋ ಕ್ವಾಲಿಟಿಗಾಗಿ ಇದೊಂದು ಉತ್ತಮ ಆಯ್ಕೆಯಾಗಲಿದೆ.

Philips 50 Inch 4K Ultra QLED Google Smart TV ಫೀಚರ್ಗಳೇನು?

ಈ 50 ಇಂಚಿನ 8100 ಸರಣಿಯ 4K ಅಲ್ಟ್ರಾ QLED ಗೂಗಲ್ ಸ್ಮಾರ್ಟ್ ಟಿವಿ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿದ್ದು ಮನೆಯಲ್ಲಿಯೇ ಸಿನಿಮಾ ಥಿಯೇಟರ್‌ನಂತಹ ಅನುಭವವನ್ನು ನೀಡುತ್ತದೆ. ಇದರ ಪ್ರಮುಖ ಆಕರ್ಷಣೆ ಇದರ ಕ್ವಾಂಟಮ್ ಡಾಟ್ (QLED) ಡಿಸ್ಪ್ಲೇಯೊಂದಿಗೆ ಇದು 93% DCI-P3 ಕಲರ್ ಗ್ಯಾಮಟ್‌ನೊಂದಿಗೆ ಅತ್ಯಂತ ಸ್ಪಷ್ಟವಾದ ಮತ್ತು ನೈಜವಾದ ಬಣ್ಣಗಳನ್ನು ಪರದೆಯ ಮೇಲೆ ಮೂಡಿಸುತ್ತದೆ. ಈ ಟಿವಿಯು ಡಾಲ್ಬಿ ವಿಷನ್, HDR10 ಮತ್ತು HLG ಪ್ರಮುಖ HDR ಫಾರ್ಮ್ಯಾಟ್‌ಗಳನ್ನು ಬೆಂಬಲಿಸುವುದರಿಂದ ಕತ್ತಲೆಯ ದೃಶ್ಯಗಳು ಅಥವಾ ಹೆಚ್ಚು ಬೆಳಕಿನ ದೃಶ್ಯಗಳಾಗಲಿ ಪ್ರತಿಯೊಂದು ವಿವರವೂ ಬಹಳ ಸೂಕ್ಷ್ಮವಾಗಿ ಕಾಣಿಸುತ್ತದೆ.

ಇನ್ನು ಗೇಮಿಂಗ್ ಮತ್ತು ಕ್ರೀಡೆಗಳನ್ನು ಇಷ್ಟಪಡುವವರಿಗಾಗಿ 120Hz ರಿಫ್ರೆಶ್ ರೇಟ್ (HSR) ಮತ್ತು MEMC ತಂತ್ರಜ್ಞಾನವಿದ್ದು ಚಲಿಸುವ ಚಿತ್ರಗಳು ಯಾವುದೇ ಅಡೆತಡೆಯಿಲ್ಲದೆ ಸ್ಮೂತ್ ಆಗಿ ಮೂಡಿಬರುತ್ತವೆ. ಗೇಮರ್‌ಗಳಿಗಾಗಿ ALLM ಸೌಲಭ್ಯವಿದ್ದು ಇದು ಆಟವಾಡುವಾಗ ಲ್ಯಾಗ್ ಆಗದಂತೆ ನೋಡಿಕೊಳ್ಳುತ್ತದೆ. ಸ್ಮಾರ್ಟ್ ಫೀಚರ್‌ಗಳ ಬಗ್ಗೆ ಹೇಳುವುದಾದರೆ ಇದು Google TV OS ಮೂಲಕ ಕಾರ್ಯನಿರ್ವಹಿಸುತ್ತದೆ. ಇದು ನಮಗೆ ಬೇಕಾದ ಅಪ್ಲಿಕೇಶನ್‌ಗಳು ಮತ್ತು ಶೋಗಳನ್ನು ಸುಲಭವಾಗಿ ಹುಡುಕಲು ಸಹಾಯ ಮಾಡುತ್ತದೆ. ಈ ಟಿವಿಯಲ್ಲಿ 32GB ಇಂಟರ್ನಲ್ ಸ್ಟೋರೇಜ್ ಮತ್ತು 2GB RAM ಆಪ್‌ಗಳು ವೇಗವಾಗಿ ಕೆಲಸ ಮಾಡುತ್ತವೆ.

ಇದರಲ್ಲಿರುವ Google Assistant ಮೂಲಕ ನಾವು ಧ್ವನಿಯ ಮೂಲಕವೇ ಟಿವಿಯನ್ನು ನಿಯಂತ್ರಿಸಬಹುದು ಮತ್ತು Chromecast ಮೂಲಕ ಮೊಬೈಲ್‌ನಲ್ಲಿರುವ ವೀಡಿಯೊಗಳನ್ನು ಟಿವಿಗೆ ಕನೆಕ್ಟ್ ಮಾಡಬಹುದು. ಸೌಂಡ್ ವಿಚಾರದಲ್ಲಿ ಇದು 30W ಸ್ಪೀಕರ್ ಹೊಂದಿದ್ದು Dolby Atmos ತಂತ್ರಜ್ಞಾನದ ಸೌಂಡ್ ಕ್ವಾಲಿಟಿ ಅದ್ಭುತವಾಗಿದೆ. ಕನೆಕ್ಟಿವಿಟಿಗಾಗಿ ಮೂರು HDMI ಪೋರ್ಟ್‌ಗಳು ಎರಡು USB ಪೋರ್ಟ್‌ಗಳು ಮತ್ತು ಡ್ಯುಯಲ್ ಬ್ಯಾಂಡ್ ವೈ-ಫೈ ಸೌಲಭ್ಯವಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :