43 Inch Samsung 4K Smart TV
Samsung 4K Smart TV: ಭಾರತದಲ್ಲಿ ನೀವೊಂದು ಅತ್ಯುತ್ತಮವಾದ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಅಥವಾ ನಿಮ್ಮ ಹಳೆ ಟಿವಿಯನ್ನು ಹೊಸ ಫೀಚರ್ಗಳೊಂದಿಗೆ ಅಪ್ಗ್ರೇಡ್ ಮಾಡಲು ಯೋಚಿಸುತ್ತಿದ್ದರೆ ಇದು ಒಳ್ಳೆ ಸಮಯವಾಗಿದೆ. ಯಾಕೆಂದರೆ ಪ್ರಸ್ತುತ ಯಾವುದೇ ಹೆಚ್ಚು ಹಣ ಖರ್ಚು ಮಾಡದೇ ನಿಮ್ಮ ಹಳೆ ಟಿವಿಯನ್ನು ಬಳಸಿಕೊಂಡು ಈ Samsung 43 inches Crystal 4K Vista Series Smart TV ಅನ್ನು ತುಂಬ ಕಡಿಮೆ ಬೆಲೆಗೆ ಖರೀದಿಸಬಹುದು. ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 3000 ರೂಗಳವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಹಾಗಾದ್ರೆ ಇದರ ಸಂಪೂರ್ಣ ಫೀಚರ್ಗಳೊಂದಿಗೆ ಆಫರ್ ಬೆಲೆ ಎಲ್ಲವನ್ನು ತಿಳಿಯಿರಿ.
ಪ್ರಸ್ತುತ ಅಮೆಜಾನ್‌ನಲ್ಲಿ ಸುಮಾರು ₹25,990 ರೂಗಳಿಗೆ ಪಟ್ಟಿಯಾಗಿ ಮಾರಾಟವಾಗುತ್ತಿರುವ ಈ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿಯನ್ನು ಆಸಕ್ತ ಬಳಕೆದಾರರು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಅತ್ಯುತ್ತಮವಾದ ಡಿಸ್ಕೌಂಟ್ ಪಡೆಯಬಹುದು. ಅದರಲ್ಲೂ ನಿಮ್ಮ ಬಳಿ Federal Bank Credit Card ಇದ್ದರೆ ಸುಮಾರು ₹3000 ರೂಗಳವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಈ ಸ್ಯಾಮ್‌ಸಂಗ್ ಸ್ಮಾರ್ಟ್ ಟಿವಿ ನಿಮಗೆ ಅತ್ಯುತ್ತಮವಾದ ಪ್ರೀಮಿಯಂ ಡಿಸೈನಿಂಗ್ ಜೊತೆಗೆ ಉತ್ತಮವಾದ ವೀಕ್ಷಣಾ ಅನುಭವ ಮತ್ತು ಆಡಿಯೋ ಕ್ವಾಲಿಟಿಗಾಗಿ ಇದೊಂದು ಉತ್ತಮ ಆಯ್ಕೆಯಾಗಲಿದೆ.
ಹೆಚ್ಚುವರಿಯಾಗಿ ಅಲ್ಲದೆ ವಿನಿಮಯ ಕೊಡುಗೆಯನ್ನು ಸಹ (Exchange Offer) ಸಹ ಪಡೆಯಬಹುದು. ಈ Samsung ಸ್ಮಾರ್ಟ್ ಟಿವಿಯನ್ನು ಖರೀದಿಸಲು ನಿಮ್ಮ ಹಳೆಯ ಸ್ಮಾರ್ಟ್ ಟಿವಿಯನ್ನು ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು ₹3,050 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: ಅಮೆಜಾನ್‌ನಲ್ಲಿ ಇಂದು Sony IMX882 ಕ್ಯಾಮೆರಾದ iQOO Z10 5G ಸ್ಮಾರ್ಟ್ಫೋನ್ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯ!
ಸ್ಯಾಮ್‌ಸಂಗ್ 43 ಇಂಚಿನ ಎಲ್‌ಇಡಿ ಸ್ಕ್ರೀನ್ ಹೊಂದಿದ್ದು 4K Ultra HD ವೀಕ್ಷಣೆಯ ಉತ್ತಮ ಅನುಭವವನ್ನು ನೀಡುತ್ತದೆ. ಇದರ ಸ್ಕ್ರೀನ್ ಸ್ಪಷ್ಟತೆ 3840×2160 ಪಿಕ್ಸೆಲ್ಗಳು ಮತ್ತು ಸಾಮಾನ್ಯ 50Hz ರಿಫ್ರೆಶ್ ದರವನ್ನು ಹೊಂದಿದೆ. ಇದರಲ್ಲಿ ಕ್ರಿಸ್ಟಲ್ ಪ್ರೊಸೆಸರ್ 4K ಸಾಮಾನ್ಯ ಚಿತ್ರಗಳನ್ನು ಸಹ 4K ಗುಣಮಟ್ಟಕ್ಕೆ ಏರಿಸುತ್ತದೆ. ಇದು ಉತ್ತಮ ಕಾಂಟ್ರಾಸ್ಟ್‌ಗಾಗಿ HDR10+ ಬೆಂಬಲವೂ ಇದೆ. ಈ ಸ್ಮಾರ್ಟ್ ಟಿವಿ ಟಿಜೆನ್ ಓಎಸ್ ಮೇಲೆ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ತೆಳ್ಳಗಿನ ಅಂಚುಗಳಿಲ್ಲದ ಸುಂದರ ವಿನ್ಯಾಸ ಹೊಂದಿದೆ.
ಹೆಚ್ಚುವರಿಯಾಗಿ ಇದರಲ್ಲಿ 20W ಸಾಮರ್ಥ್ಯದ 2-ಚಾನೆಲ್ ಸ್ಪೀಕರ್‌ಗಳಿದ್ದು ಕಂಟೆಂಟ್ ತಕ್ಕಂತೆ ಸೌಂಡ್ ಉತ್ತಮಗೊಳಿಸುವ ಅಡಾಪ್ಟಿವ್ ಸೌಂಡ್ ಮತ್ತು ಹೊಂದಿಕೆಯಾಗುವ ಸೌಂಡ್‌ಬಾರ್‌ಗೆ ಸೌಂಡ್ ಹೊಂದಿದೆ. ಇದರ ಅಂತರ್ನಿರ್ಮಿತ ವೈ-ಫೈ 5 ಮತ್ತು ಬ್ಲೂಟೂಟ್ 5.2 , ಮೂರು HDMI ಪೋರ್ಟ್‌ಗಳು ಮತ್ತು ಒಂದು USB-A ಪೋರ್ಟ್ ಇದೆ. ಇದು ಬಿಕ್ಸ್‌ಬಿ, ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್, Voice ಅಸಿಸ್ಟೆಂಟ್ ಸಹ ಬೆಂಬಲಿಸುತ್ತದೆ. ಅಲ್ಲದೆ ವೇಗವಾಗಿ ಚಲಿಸುವ ದೃಶ್ಯಗಳನ್ನು ಉತ್ತಮಗೊಳಿಸಲು ಮೋಷನ್ ಎಕ್ಸ್‌ಲರೇಟರ್ ಮತ್ತು ಗೇಮಿಂಗ್‌ಗಾಗಿ ಆಟೋ ಲೋ ಲ್ಯಾಟೆನ್ಸಿ ಮೋಡ್ (ALLM) ಸಹ ಇದೆ.