4K Google Smart TV: ನಿಮ್ಮ ಮನೆಯ ಮನರಂಜನಾ ಸೆಟಪ್ ಅನ್ನು ಹೊಸ ಸ್ಮಾರ್ಟ್ ಟಿವಿಯೊಂದಿಗೆ ಅಪ್‌ಗ್ರೇಡ್ ಮಾಡಲು ಯೋಚಿಸುತ್ತಿದ್ದರೆ TCL ಕಂಪನಿಯ ಈ ಲೇಟೆಸ್ಟ್ 43 ಇಂಚಿನ ಸ್ಮಾರ್ಟ್ ಟಿವಿ ಪ್ರಸ್ತುತ ಆಕರ್ಷಕ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ಬಜೆಟ್ ಸ್ನೇಹಿ ಬೆಲೆಯಲ್ಲಿ ನಿಮಗೆ Dolby Vision Atmos ಮತ್ತು 4K QLED ಪ್ಯಾನಲ್‌ನಂತಹ ಪ್ರೀಮಿಯಂ ಫೀಚರ್ಗಳನ್ನು ನೀಡುತ್ತಿದೆ. ಅಲ್ಲದೆ ಇದರ ಸಾಮಾನ್ಯ MRP ಬೆಲೆ ನೋಡುವುದಾದರೆ ಸುಮಾರು ₹54,990 ಆಗಿದೆ ಆದರೆ ಪ್ರಸ್ತುತ ಅಮೆಜಾನ್ ಸೇಲ್‌ನಲ್ಲಿ ಈ ಸ್ಮಾರ್ಟ್ ಟಿವಿಯನ್ನು ₹28,990 ರೂಗಳಿಗೆ ಮಾರಾಟವಾಗುತ್ತಿದೆ. ಆದರೆ ಆಫರ್ಗಳೊಂದಿಗೆ ಇನ್ನಷ್ಟು ಕಡಿಮೆ ಬೆಲೆಗೆ ಲಭ್ಯವಾಗಲಿದೆ.
ಅಮೆಜಾನ್ ಈ ಗಮನಾರ್ಹ ರಿಯಾಯಿತಿಯನ್ನು 43 ಇಂಚಿನ ಟಿವಿ TCL ಸ್ಮಾರ್ಟ್ ಟಿವಿ ಮೇಲೆ ನೀಡುತ್ತಿದ್ದು ಪ್ರಸ್ತುತ ಮಾರಾಟದಲ್ಲಿ ಲಭ್ಯವಿರುವ ಈ ಸ್ಮಾರ್ಟ್ ಟಿವಿಯನ್ನು ₹28,990 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಪ್ರಸ್ತುತ ಇದರ ಮೇಲೆ ಅಮೆಜಾನ್ ಉಚಿತವಾಗಿ ₹1000 ರೂಗಳ ಕೂಪನ್ ಡಿಸ್ಕೌಂಟ್ ನೀಡುತ್ತಿದೆ. ಅಲ್ಲದೆ ಹೆಚ್ಚುವರಿಯಾಗಿ Federal, Yes ಮತ್ತು HSBC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ₹1500 ರೂಗಳ ಹೆಚ್ಚುವರಿಯ ಡಿಸ್ಕೌಂಟ್ ಪಡೆಯಬಹುದು.
ಅಷ್ಟೇಯಲ್ಲದೆ ನೀವು ಈ ಸ್ಮಾರ್ಟ್ ಟಿವಿಯೊಂದಿಗೆ ನಿಮ್ಮ ಹಳೆಯ ಸ್ಮಾರ್ಟ್ ಟಿವಿಯನ್ನು ವಿನಿಮಯ ಮಾಡಿಕೊಳ್ಳುವ (Exchange Offer) ಆಯ್ಕೆಯನ್ನು ಸಹ ಪಡೆಯಬಹುದು. ಈ ಸ್ಮಾರ್ಟ್ ಟಿವಿಯನ್ನು ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಟಿವಿಯನ್ನು ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು ₹2,670 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು.
ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ. ಈ ಆಫರ್ ಎಷ್ಟು ದಿನ ಲಭ್ಯವಿರುತ್ತದೆ ಎಂಬುದು ಸ್ಪಷ್ಟವಿಲ್ಲ ಆದ್ದರಿಂದ ನೀವು ಬಜೆಟ್ ಸ್ನೇಹಿ QLED Google TV ಹುಡುಕುತ್ತಿದ್ದರೆ ಈಗಲೇ ಖರೀದಿಸುವುದು ಸೂಕ್ತವಾಗಿದೆ.
Also Read: MOTOROLA Dolby Digital Soundbar ಇಂದು ಫ್ಲಿಪ್‌ಕಾರ್ಟ್ ಸೂಪರ್ ವ್ಯಾಲ್ಯೂ ಸೇಲ್‌ನಲ್ಲಿ ಕಡಿಮೆ ಬೆಲೆಗೆ ಲಭ್ಯ!
ಹೌದು, ಟಿಸಿಎಲ್ ಕಂಪನಿ ಚೀನಾದೆ ಆದರೂ ಭಾರತೀಯ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಮಾರಾಟವಾಗುತ್ತಿರುವ ಸ್ಮಾರ್ಟ್ ಟಿವಿ ಬ್ರಾಂಡ್ಗಳಲ್ಲಿ ಒಂದಾಗಿದೆ. ಈ ಮೂಲಕ ತನ್ನನ್ನು ತಾನು ಪ್ರತಿಷ್ಠಿತ ಮತ್ತು ವಿಶ್ವಾಸಾರ್ಹ ಟೆಲಿವಿಷನ್ ಬ್ರಾಂಡ್ ಆಗಿ ಸ್ಥಾಪಿಸಿಕೊಂಡಿದೆ ವಿಶೇಷವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಕೈಗೆಟುಕುವ ಬೆಲೆಯಲ್ಲಿ ನೀಡುವ ಮೂಲಕ ಅವರು ಜಾಗತಿಕ ಎಲೆಕ್ಟ್ರಾನಿಕ್ಸ್ ದೈತ್ಯರಾಗಿದ್ದು ಮಿತಿಗಳನ್ನು ಮೀರಲು ಮತ್ತು QLED ಮತ್ತು Mini-LED ನಂತಹ ವೈಶಿಷ್ಟ್ಯಗಳನ್ನು ವ್ಯಾಪಕ ಪ್ರೇಕ್ಷಕರಿಗೆ ಪರಿಚಯಿಸಲು ಹೆಸರುವಾಸಿಯಾಗಿದ್ದಾರೆ.
ಈ ನಿರ್ದಿಷ್ಟ TCL QLED ಟಿವಿ ಹಲವಾರು ಕಾರಣಗಳಿಗಾಗಿ ಉತ್ತಮ ಆಯ್ಕೆಯಾಗಿದೆ. ಈ QLED (ಕ್ವಾಂಟಮ್ ಡಾಟ್ LED) ಪ್ಯಾನಲ್ ಹಳೆ ಮಾದರಿಯ LED ಸ್ಕ್ರೀನ್ಗಳಿಗಿಂತ ಪ್ರಮುಖ ಅಪ್‌ಗ್ರೇಡ್ ಆಗಿದ್ದು ಹೆಚ್ಚು ರೋಮಾಂಚಕ ಮತ್ತು ಲೈವ್ ದೃಶ್ಯಗಳಿಗಾಗಿ ವಿಶಾಲವಾದ ಬಣ್ಣದ ಹರವು ಮತ್ತು ಹೆಚ್ಚಿನ ಹೊಳಪನ್ನು Best 43-inch QLED TV Under 30000 ನೀಡುತ್ತದೆ. ಹೆಚ್ಚುವರಿಯಾಗಿ ಈ ಕಂಪನಿ 4K ಅಲ್ಟ್ರಾ HD ರೆಸಲ್ಯೂಶನ್, ಡಾಲ್ಬಿ ವಿಷನ್ ಮತ್ತು HDR10+ ಬೆಂಬಲದೊಂದಿಗೆ ಬರುತ್ತದೆ. ನೀವು ಕಾಂಟ್ರಾಸ್ಟ್ ಮತ್ತು ವಿವರಗಳೊಂದಿಗೆ ಸಿನಿಮೀಯ ಇಮೇಜ್ ಕ್ವಾಲಿಟಿಯನ್ನು ಪಡೆಯುತ್ತೀರಿ.
Also Read: 43 Inch Smart TV: ಅಮೆಜಾನ್ ಸೇಲ್‌ನಲ್ಲಿ 43 ಇಂಚಿನ LG ಸ್ಮಾರ್ಟ್ ಟಿವಿಯ ಮೇಲೆ ಭರ್ಜರಿ ಡಿಸ್ಕೌಂಟ್ಗಳು!