ಅಮೆಜಾನ್‌ನಲ್ಲಿ ಇಂದು 43 ಇಂಚಿನ TOSHIBA 4K Smart TV ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ!

Updated on 04-Dec-2025
HIGHLIGHTS

ಬರೋಬ್ಬರಿ 43 ಇಂಚಿನ TOSHIBA 4K Smart TV ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ!

ತೊಷಿಬಾ ಗೂಗಲ್ ಹೊಸ ಫೀಚರ್ಗಳೊಂದಿಗೆ ಅಪ್ಗ್ರೇಡ್ ಮಾಡಲು ಯೋಚಿಸುತ್ತಿದ್ದರೆ ಇದೊಂದು ಒಳ್ಳೆ ಅವಕಾಶ.

ಆಸಕ್ತ ಬಳಕೆದಾರರು ಆಯ್ದ ಬ್ಯಾಂಕ್ ಕಾರ್ಡ್ ಬಳಸಿ ಸುಮಾರು 1500 ರೂಗಳವರೆಗೆ ಡಿಸ್ಕೌಂಟ್ ಪಡೆಯಬಹುದು.

TOSHIBA 4K Smart TV: ಭಾರತದಲ್ಲಿ ನಿಮಗೊಂದು ಅತ್ಯುತ್ತಮವಾದ ತೊಷಿಬಾ ಕಂಪನಿಯ ಸ್ಮಾರ್ಟ್ ಟಿವಿಯನ್ನು ಖರೀದಿಸಲು ಅಥವಾ ಈಗಾಗಲೇ ನಿಮ್ಮ ಬಳಿ ಇರುವ ಹಳೆ ಟಿವಿಯನ್ನು ಹೊಸ ಫೀಚರ್ಗಳೊಂದಿಗೆ ಅಪ್ಗ್ರೇಡ್ ಮಾಡಲು ಯೋಚಿಸುತ್ತಿದ್ದರೆ ಇದೊಂದು ಒಳ್ಳೆ ಸಮಯವಾಗಿದೆ. ಅಮೆಜಾನ್‌ನಲ್ಲಿ ಪ್ರಸ್ತುತ ಯಾವುದೇ ಹೆಚ್ಚು ಹಣ ಖರ್ಚು ಮಾಡದೇ ನಿಮ್ಮ ಹಳೆ ಸ್ಮಾರ್ಟ್ ಟಿವಿಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಈ TOSHIBA 43 inches C350NP Series 4K Ultra Google Smart TV ಅನ್ನು ತುಂಬ ಕಡಿಮೆ ಬೆಲೆಗೆ ಖರೀದಿಸಬಹುದು. ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಹಾಗಾದ್ರೆ ಇದರ ಸಂಪೂರ್ಣ ಫೀಚರ್ಗಳೊಂದಿಗೆ ಆಫರ್ ಬೆಲೆ ಎಲ್ಲವನ್ನು ತಿಳಿಯಿರಿ.

TOSHIBA 43 inches C350NP Series 4K Ultra Google Smart TV

ಈ ಟಿವಿ 43 ಇಂಚಿನ ಗಾತ್ರದಲ್ಲಿದ್ದು ಇದು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದು ಉತ್ತಮ ವೈಶಿಷ್ಟ್ಯಗಳನ್ನು ಮತ್ತು ಕಡಿಮೆ ಬೆಲೆಗಳನ್ನು ಹೊಂದಿದೆ. ಪ್ರಸ್ತುತ ಇದು 4K ಟಿವಿಗಳಲ್ಲಿ ಹಣಕ್ಕೆ ಉತ್ತಮ ಮೌಲ್ಯವನ್ನು ನೀಡುತ್ತದೆ. ಈ ಟಿವಿ REGZA ಎಂಜಿನ್ ZR ಎಂಬ ತಂತ್ರಜ್ಞಾನವನ್ನು ಬಳಸುತ್ತದೆ. ಇದು ಸಾಮಾನ್ಯ ಚಿತ್ರಗಳ ಗುಣಮಟ್ಟವನ್ನು ಹೆಚ್ಚಿಸಿ (AI 4K ಅಪ್ಸ್ಕೇಲಿಂಗ್) ಇದು 4K ನಂತೆ ಕಾಣುವಂತೆ ಮಾಡುತ್ತದೆ. ಇದರಿಂದ ನೀವು ತುಂಬಾ ಸ್ಪಷ್ಟವಾದ ಮತ್ತು ನಿಜವಾದ ಬಣ್ಣಗಳೊಂದಿಗೆ ಚಿತ್ರಗಳನ್ನು ನೋಡಬಹುದು.

ಅಲ್ಲದೆ ಇದು ಸಿನಿಮಾ ನೋಡಲು ಬೇಕಾದ ಡಾಲ್ಬಿ ವಿಷನ್ ಮತ್ತು HDR10 ವೈಶಿಷ್ಟ್ಯಗಳನ್ನು ಸಹ ಬೆಂಬಲಿಸುತ್ತದೆ. ಇದರಲ್ಲಿರುವ 24W REGZA ಪವರ್ ಆಡಿಯೊ ಸಿಸ್ಟಮ್ ಒಳ್ಳೆಯ ಧ್ವನಿಯನ್ನು ನೀಡುತ್ತದೆ. ಡಾಲ್ಬಿ ಅಟ್ಮಾಸ್ (Dolby Atmos) ಮತ್ತು DTS-X ತಂತ್ರಜ್ಞಾನಗಳು, ತುಂಬಾ ಸ್ಪಷ್ಟವಾಗಿ ಮತ್ತು ಸುತ್ತಲೂ ಕೇಳುವಂತೆ ಸೌಂಡ್ ಇರುತ್ತದೆ. ಗೇಮ್ ಆಡುವವರಿಗೆ ಇದು ಗೇಮ್ ಮೋಡ್, ALLM ಮತ್ತು VRR ವೈಶಿಷ್ಟ್ಯಗಳನ್ನು ಹೊಂದಿದೆ. ಈ ಗೇಮಿಂಗ್ ಅನುಭವವು ವೇಗವಾಗಿ ಮತ್ತು ಚೆನ್ನಾಗಿರುತ್ತದೆ.

Also Read: POCO C85 Launch Confirmed: ಭಾರತದಲ್ಲಿ ಮುಂಬರಲಿರುವ ಪೊಕೋ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಡೇಟ್ ಕಂಫಾರ್ಮ್!

TOSHIBA 43 inches C350NP Smart TV ಬೆಲೆ ಮತ್ತು ಲಭ್ಯತೆ

ಅಮೆಜಾನ್ ಇಂಡಿಯಾದಲ್ಲಿ ಈ ಟಿವಿಯ ಬೆಲೆ ಸಾಮಾನ್ಯವಾಗಿ ₹19,999 ಬೆಲೆಯಲ್ಲಿದೆ. ಇದರ ಆಫರ್‌ಗಳು ಮತ್ತು ಡೀಲ್‌ಗಳ ಬೆಲೆ ಬಗ್ಗೆ ಮಾತನಾಡುವುದದರೆ ಸಿಕ್ಕಾಪಟ್ಟೆ ಕಡಿಮೆಯಾಗಬಹುದು ಅಥವಾ ಹೆಚ್ಚಾಗಬಹುದು. ನಿಖರವಾದ ಬೆಲೆ ಮತ್ತು ಬ್ಯಾಂಕ್ ರಿಯಾಯಿತಿಗಳನ್ನು ತಿಳಿದುಕೊಳ್ಳಲು ಅಮೆಜಾನ್ ಲಿಂಕ್ ಪರಿಶೀಲಿಸುವುದು ಉತ್ತಮವಾಗಿದೆ. ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು.

ಅಲ್ಲದೆ ಈ ಸ್ಮಾರ್ಟ್ ಟಿವಿ ಮೇಲೆ ಅಮೆಜಾನ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ ಸ್ಮಾರ್ಟ್ ಟಿವಿ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ ಟಿವಿಯನ್ನು ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 3,050 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

TOSHIBA 43 inches C350NP Smart TV ಸ್ಮಾರ್ಟ್ ವೈಶಿಷ್ಟ್ಯಗಳು

ಇದು 4K ಅಲ್ಟ್ರಾ HD ರೆಸಲ್ಯೂಶನ್ (3840 x 2160) ಮತ್ತು 60 Hz ರಿಫ್ರೆಶ್ ದರವನ್ನು ಹೊಂದಿದೆ. ಇದು Google TV ಸಿಸ್ಟಮ್‌ನಲ್ಲಿ ಕೆಲಸ ಮಾಡುತ್ತಿದೆ. ಗೂಗಲ್ ಅಸಿಸ್ಟೆಂಟ್ (ಧ್ವನಿ ಮೂಲಕ ನಿಯಂತ್ರಣ) ಮತ್ತು ಫೋನ್‌ನಿಂದ ಟಿವಿಗೆ ವಿಷಯ ಕಳುಹಿಸಲು Chromecast ಇವೆ. ಇದು 3 HDMI ಪೋರ್ಟ್‌ಗಳು (eARC ಮತ್ತು ಗೇಮಿಂಗ್ ಸಪೋರ್ಟ್ ಜೊತೆಗೆ) 2 USB 2.0 ಪೋರ್ಟ್‌ಗಳು, ಇಂಟರ್ನೆಟ್‌ಗೆ ಈಥರ್ನೆಟ್ ಮತ್ತು ಡ್ಯುಯಲ್-ಬ್ಯಾಂಡ್ ವೈ-ಫೈ (2.4/5GHz), ಮತ್ತು ಬ್ಲೂಟೂತ್ 5.3 ಅನ್ನು ಹೊಂದಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :