ಬರೋಬ್ಬರಿ 32 ಇಂಚಿನ ಜಬರ್ದಸ್ತ್ QLED Smart TV ಫ್ಲಿಪ್‌ಕಾರ್ಟ್‌ನಲ್ಲಿ ₹7,799 ರೂಗಳಿಗೆ ಲಭ್ಯ!

Updated on 12-Sep-2025
HIGHLIGHTS

ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ (Flipkart Big Billion Days 2025) ಶುರು ಮಾಡಲು ಸಜ್ಜಾಗಿದೆ.

ಇದರಲ್ಲಿ QLED ಟೆಕ್ನಾಲಜಿ ಮತ್ತು ಲಿನಕ್ಸ್ ಆಧಾರಿತ ಆಪರೇಟಿಂಗ್ ಸಿಸ್ಟಮ್‌ನ ಸಂಯೋಜನೆಯನ್ನು ನೀಡುತ್ತದೆ.

ಈ ಸ್ಮಾರ್ಟ್ ಟಿವಿ ಕೇವಲ ₹7,799 ರೂಗಳಿಗೆ ಲಭ್ಯವಿದ್ದು ಈ ಬೆಲೆಗೆ ಇದಕ್ಕಿಂತ ಅತ್ಯುತ್ತಮ ಸ್ಮಾರ್ಟ್ ಟಿವಿ ಮತ್ತೊಂದಿಲ್ಲ ಬಿಡಿ.

QLED Smart TV: ಭಾರತದಲ್ಲಿ ಫ್ಲಿಪ್ಕಾರ್ಟ್ ಅತಿ ಶೀಘ್ರದಲ್ಲೇ ತನ್ನ ಮುಂಬರಲಿರುವ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ (Flipkart Big Billion Days 2025) ಶುರು ಮಾಡಲು ಸಜ್ಜಾಗಿದೆ. ಆದರೆ ಕಂಪನಿ ಮಾರಾಟಕ್ಕೂ ಮುಂಚಿತವಾಗಿ ಆರಂಭಿಕ ಆಫರ್ ಅಡಿಯಲ್ಲಿ Thomson Alpha 32 inch QLED HD Ready Smart Linux TV ಅನ್ನು ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಇದು ಕೈಗೆಟುಕುವ ಬೆಲೆಯಲ್ಲಿ ಲಿಮಿಟೆಡ್ ಸಮಯಕ್ಕೆ ಮಾತ್ರ ಲಭ್ಯವಾಗಲಿದ್ದು ಇದರಲ್ಲಿ QLED ಟೆಕ್ನಾಲಜಿ ಮತ್ತು ಲಿನಕ್ಸ್ ಆಧಾರಿತ ಆಪರೇಟಿಂಗ್ ಸಿಸ್ಟಮ್‌ನ ಸಂಯೋಜನೆಯನ್ನು ನೀಡುತ್ತದೆ. ಇದು ರೋಮಾಂಚಕ ಬಣ್ಣಗಳು ಮತ್ತು ಸ್ಪಷ್ಟ ದೃಶ್ಯಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.

Thomson Alpha 32 inch QLED HD Ready Smart Linux TV ಯಾಕೆ ಖರೀದಿಸಬೇಕು?

ಪ್ರಸ್ತುತ 32 ಇಂಚಿನ ಈ ಸ್ಮಾರ್ಟ್ ಟಿವಿ ಕೇವಲ ₹7,799 ರೂಗಳಿಗೆ ಲಭ್ಯವಿದ್ದು ಈ ಬೆಲೆಗೆ ಇದಕ್ಕಿಂತ ಅತ್ಯುತ್ತಮ ಸ್ಮಾರ್ಟ್ ಟಿವಿ ಮತ್ತೊಂದಿಲ್ಲ ಬಿಡಿ. ಈ ಟೆಲಿವಿಷನ್‌ನ ಪ್ರಮುಖ ಹೈಲೈಟ್ ಎಂದರೆ ಅದರ QLED ಕ್ವಾಂಟಮ್ ಡಾಟ್ ಲೈಟ್ ಎಮಿಟಿಂಗ್ ಡಯೋಡ್ ಡಿಸ್ಪ್ಲೇಯೊಂದಿಗೆ ಸಾಂಪ್ರದಾಯಿಕ LED ಟಿವಿಗಳಿಗೆ ಹೋಲಿಸಿದರೆ QLED ತಂತ್ರಜ್ಞಾನವು ಕ್ವಾಂಟಮ್ ಡಾಟ್‌ಗಳನ್ನು ಬಳಸಿಕೊಂಡು ಹೆಚ್ಚು ಎದ್ದುಕಾಣುವ ಮತ್ತು ನಿಖರವಾದ ಬಣ್ಣಗಳನ್ನು ಉತ್ಪಾದಿಸುತ್ತದೆ.

ಉತ್ತಮ ಕಾಂಟ್ರಾಸ್ಟ್ ಮತ್ತು ವಿಶಾಲವಾದ ಬಣ್ಣದ ಹರವು ನೀಡುತ್ತದೆ. ಇದು 178-ಡಿಗ್ರಿ ವೀಕ್ಷಣಾ ಕೋನ ಮತ್ತು 60 Hz ರಿಫ್ರೆಶ್ ದರವನ್ನು ಹೊಂದಿದೆ. ಇದು ವಿವಿಧ ಸ್ಥಾನಗಳಿಂದ ವಿಷಯವು ಉತ್ತಮವಾಗಿ ಕಾಣುತ್ತದೆ ಮತ್ತು ಸರಾಗವಾಗಿ ಪ್ಲೇ ಆಗುತ್ತದೆ ಎಂದು ಖಚಿತಪಡಿಸುತ್ತದೆ. ಬೆಜೆಲ್-ರಹಿತ ವಿನ್ಯಾಸವು ನಯವಾದ ಆಧುನಿಕ ಸ್ಪರ್ಶವನ್ನು ನೀಡುತ್ತದೆ. ತಲ್ಲೀನಗೊಳಿಸುವ ಅನುಭವಕ್ಕಾಗಿ ಸ್ಕ್ರೀನ್ ಪ್ರದೇಶವನ್ನು ಹೆಚ್ಚಿಸುತ್ತದೆ.

Also Read: boAt Cinematic Dolby Soundbar ಇಂದು ಅಮೆಜಾನ್ ‘Early Deals’ ಸೇಲ್‌ನಲ್ಲಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯ!

ಈ ಥಾಮ್ಸನ್ ಸ್ಮಾರ್ಟ್ ಟಿವಿಯ ಸ್ಮಾರ್ಟ್ ಫೀಚರ್ಗಳೇನು?

ಈ ಥಾಮ್ಸನ್ ಟಿವಿ ಲಿನಕ್ಸ್ ಆಧಾರಿತ ಆಪರೇಟಿಂಗ್ ಸಿಸ್ಟಂನಲ್ಲಿ ಬಳಕೆದಾರ ಸ್ನೇಹಿ ಇಂಟರ್ಫೇಸ್ ಅನ್ನು ಒದಗಿಸುತ್ತದೆ. ಇದು YouTube, Prime Video ಮತ್ತು Disney+ Hotstar ನಂತಹ ಜನಪ್ರಿಯ ಸ್ಟ್ರೀಮಿಂಗ್ ಸೇವೆಗಳಿಗಾಗಿ ಮೊದಲೇ ಸ್ಥಾಪಿಸಲಾದ ಅಪ್ಲಿಕೇಶನ್‌ಗಳೊಂದಿಗೆ ಬರುತ್ತದೆ. ಈ ಟಿವಿಯಲ್ಲಿ ಗೂಗಲ್ ಪ್ಲೇ ಸ್ಟೋರ್ ಹೊಂದಿರುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಅಂದರೆ ನೀವು ಹೆಚ್ಚುವರಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ.

ಆದರೆ ಟಿವಿ ಕ್ವಾಡ್-ಕೋರ್ A35 ಪ್ರೊಸೆಸರ್ ಮತ್ತು ಮಾಲಿ G31 GPU ನಿಂದ ಚಾಲಿತವಾಗಿದ್ದು 512MB RAM ಮತ್ತು 4GB ಸ್ಟೋರೇಜ್ ಹೊಂದಿದ್ದು ಸರೌಂಡ್ ಸೌಂಡ್ ತಂತ್ರಜ್ಞಾನದೊಂದಿಗೆ 36W ಸ್ಪೀಕರ್ ಸೆಟಪ್ ನಿರ್ವಹಿಸುತ್ತದೆ. ಇದರ ಸಂಪರ್ಕ ಆಯ್ಕೆಗಳಲ್ಲಿ ಎರಡು HDMI ಪೋರ್ಟ್‌ಗಳು ಮತ್ತು ಎರಡು USB ಪೋರ್ಟ್‌ಗಳು ಹಾಗೂ ಅಂತರ್ನಿರ್ಮಿತ Wi-Fi ಸೇರಿವೆ.

Thomson Alpha 32 inch QLED HD Ready Smart Linux TV ಬೆಲೆ ಮತ್ತು ಆಫರ್ಗಳೇನು?

ಪ್ರಸ್ತುತ ಈ ಸ್ಮಾರ್ಟ್ ಟಿವಿಯ ಬೆಲೆಯನ್ನು ನೋಡುವುದಾದರೆ ಫ್ಲಿಪ್ಕಾರ್ಟ್ ಮಾರುಕಟ್ಟೆಯಲ್ಲಿ ₹7,799 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಆಸಕ್ತ ಬಳಕೆದಾರರು ಇದರೊಂದಿಗೆ ತಮ್ಮ ಹಳೆ ಸ್ಮಾರ್ಟ್ ಟಿವಿಯನ್ನು ವಿನಿಮಯ ಮಾಡಿಕೊಳ್ಳಬಹುದು. ಫ್ಲಿಪ್ಕಾರ್ಟ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ನೀಡುತ್ತಿದೆ.

ಈ ಸ್ಮಾರ್ಟ್‌ ಟಿವಿಯನ್ನು ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು ₹5,800 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಟಿವಿಯ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ. ಅಲ್ಲದೆ HDFC Bank Credit Card ಬಳಸಿಕೊಂಡು EMI ಸೌಲಭ್ಯದೊಂದಿಗೆ ಸುಮಾರು 1500 ರೂಗಳ ಡಿಸ್ಕೌಂಟ್ ನಿರೀಕ್ಷಿಸಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :