ಈ ಬೆಲೆಗೆ ಬೇರೆಲ್ಲೂ ಸಿಗದ 43 ಇಂಚಿನ ಅದ್ದೂರಿಯ 4K QLED Smart TV ಫ್ಲಿಪ್ಕಾರ್ಟ್ ಸೇಲ್‌ನಲ್ಲಿ ಲಭ್ಯ!

Updated on 06-Aug-2025
HIGHLIGHTS

ದೊಡ್ಡ ಸ್ಕ್ರೀನ್ ಸ್ಮಾರ್ಟ್ ಟಿವಿ ಬರೋಬ್ಬರಿ 43 ಇಂಚಿನ ಅದ್ದೂರಿಯ ಸ್ಮಾರ್ಟ್ ಟಿವಿ.

ಫ್ಲಿಪ್ಕಾರ್ಟ್ ಸೇಲ್‌ನಲ್ಲಿ 4K QLED Smart TV ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ.

ಪ್ರಸ್ತುತ ₹18,499 ರೂಗಳಿಗೆ ಪಟ್ಟಿಯಾಗಿರುವ ಈ ಸ್ಮಾರ್ಟ್ ಟಿವಿ ವಿನಿಮಯ ಆಫರ್ ಅಡಿಯಲ್ಲಿ ಲಭ್ಯವಿದೆ.

ಭಾರತದಲ್ಲಿ ನಿಮಗೊಂದು ಹೊಸ ಮತ್ತು ದೊಡ್ಡ ಸ್ಕ್ರೀನ್ ಹೊಂದಿರುವ ಸ್ಮಾರ್ಟ್ ಟಿವಿ ಹುಡುಕುತ್ತಿದ್ದರೆ ಫ್ಲಿಪ್ಕಾರ್ಟ್ ನಿಮಗೆ ಸಿಹಿಸುದ್ದಿಯನ್ನು ನೀಡುತ್ತಿದೆ. ಬರೋಬ್ಬರಿ 43 ಇಂಚಿನ ಅದ್ದೂರಿಯ 4K QLED Smart TV ಫ್ಲಿಪ್ಕಾರ್ಟ್ ಸೇಲ್‌ನಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಸ್ಮಾರ್ಟ್ ಟಿವಿ ಪ್ರಸ್ತುತ ₹18,499 ರೂಗಳಿಗೆ ಪಟ್ಟಿ ಮಾಡಲಾಗಿದ್ದು ವಿನಿಮಯ ಆಫರ್ ಅಡಿಯಲ್ಲಿ ಸಿಕ್ಕಾಪಟ್ಟೆ ಡಿಸ್ಕೌಂಟ್ ನಂತರ ಎಂದು ಕಂಡು ಕೇಳದ ಬೆಲೆಗೆ ಈ ಥಾಮ್ಸನ್ 43 ಇಂಚಿನ ಕ್ಯೂಲೆಡ್ ಸ್ಮಾರ್ಟ್ ಟಿವಿ JioTele OS TV ನಿಮ್ಮ ಮನೆಗೆ ಕೊಂಡೊಯ್ಯಬಹುದು. ಹಾಗಾದ್ರೆ ಈ ಸ್ಮಾರ್ಟ್ ಟಿವಿಯ ಆಫರ್ ಬೆಲೆ ಎಷ್ಟು ಮತ್ತು ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಿರಿ.

43 ಇಂಚಿನ ಅದ್ದೂರಿಯ 4K QLED Smart TV ಆಫರ್

ಪ್ರಸ್ತುತ ಫ್ಲಿಪ್ಕಾರ್ಟ್ ಸೇಲ್‌ನಲ್ಲಿ ಲಭ್ಯವಿರುವ ಈ ಥಾಮ್ಸನ್ 43 ಇಂಚಿನ ಕ್ಯೂಲೆಡ್ ಸ್ಮಾರ್ಟ್ ಟಿವಿ JioTele OS TV ಸುಮಾರು ₹18,499 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಗ್ರಾಹಕರು ಇದನ್ನು ಖರೀದಿಸಲು ICICI ಮತ್ತು BOBCARD ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳವರೆಗಿನ ತ್ವರಿತ ಡಿಸ್ಕೌಂಟ್ ಪಡೆಯಬಹುದು.

ಅಲ್ಲದೆ ಈ 43 ಇಂಚಿನ ಕ್ಯೂಲೆಡ್ ಸ್ಮಾರ್ಟ್ ಟಿವಿ JioTele OS TV ಮೇಲೆ ಫ್ಲಿಪ್ಕಾರ್ಟ್ ನಿಮಗೆ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ ಸ್ಮಾರ್ಟ್ ಟಿವಿ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್ ಟಿವಿ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 5,400 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಸ್ಮಾರ್ಟ್ ಟಿವಿ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.

Also Read: EPFO Update 2025: ಇನ್ಮುಂದೆ ಹೊಸ UAN ಖಾತೆಯನ್ನು ಆಕ್ಟಿವೇಟ್ ಮಾಡಲು UMANG ಅಪ್ಲಿಕೇಶನ್ ಕಡ್ಡಾಯ!

43 inch QLED Ultra HD (4K) Smart TV ಫೀಚರ್ಗಳೇನು?

ಈ 43 ಇಂಚಿನ QLED 4K ಟಿವಿಯು ವೈಶಿಷ್ಟ್ಯಪೂರ್ಣ ಸ್ಮಾರ್ಟ್ ಟೆಲಿವಿಷನ್ ಆಗಿದೆ. ಇದು ಅದ್ಭುತವಾದ QLED 4K ಡಿಸ್ಪ್ಲೇ ಮತ್ತು ಡಾಲ್ಬಿ ಆಡಿಯೊದೊಂದಿಗೆ ಪವರ್ಫುಲ್ 40W ಸ್ಪೀಕರ್‌ಗಳನ್ನು ಹೊಂದಿದ್ದು ಇದು ಅದ್ಭುತವಾದ ವೀಕ್ಷಣೆ ಮತ್ತು ಆಲಿಸುವ ಅನುಭವವನ್ನು ನೀಡುತ್ತದೆ. ಜಿಯೋಟೆಲಿ ಓಎಸ್ ಮತ್ತು ಅಮ್ಲಾಜಿಕ್ ಪ್ರೊಸೆಸರ್ ನಿಂದ ನಡೆಸಲ್ಪಡುವ ಇದು 2GB RAM ಮತ್ತು 8GB ಸ್ಟೋರೇಜ್ನೊಂದಿಗೆ ಸುಗಮ ಸ್ಮಾರ್ಟ್ ಅನುಭವವನ್ನು ನೀಡುತ್ತದೆ. ಬಹು HDMI ಮತ್ತು USB ಪೋರ್ಟ್‌ಗಳು, ಅಂತರ್ನಿರ್ಮಿತ Wi-Fi ಮತ್ತು ಬ್ಲೂಟೂತ್ ಜೊತೆಗೆ ಸಂಪರ್ಕವು ತಡೆರಹಿತವಾಗಿದೆ. JioTele OS ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರು ಜನಪ್ರಿಯ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು ಮತ್ತು ನೂರಾರು ಉಚಿತ ಲೈವ್ ಚಾನೆಲ್‌ಗಳನ್ನು ಆನಂದಿಸಬಹುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :