Jio ಟೆಲಿಕಾಂನ ಈ ಪ್ಲಾನ್ ರೀಚಾರ್ಜ್ ಮಾಡಿದ್ರೆ ಪ್ರತಿದಿನ 3GB ಡೇಟಾ ಖಚಿತ! ಬಿಗ್ ವ್ಯಾಲಿಡಿಟಿ ಲಭ್ಯ
ಜಿಯೋದ ಈ ಪ್ಲಾನ್ ಬಜೆಟ್ ದರದಲ್ಲಿ 3GB ಡೇಟಾಗೆ ಉತ್ತಮ ಎನಿಸಿದೆ
ಜಿಯೋ ಟೆಲಿಕಾಂನ 1199 ರೂ.ಗಳ ಪ್ಲಾನ್‌ನಲ್ಲಿ 84 ದಿನಗಳ ವ್ಯಾಲಿಡಿಟಿ ಲಭ್ಯ
ಈ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 3GB ಡೇಟಾ ಪ್ರಯೋಜನ ದೊರೆಯುತ್ತದೆ
ರಿಲಯನ್ಸ್ ಜಿಯೋ ಆಕರ್ಷಕ ರೀಚಾರ್ಜ್ ಪ್ಲಾನ್‌ಗಳ ಮೂಲಕ ದೇಶದ ಟೆಲಿಕಾಂ ವಲಯದಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ Jio ಸಂಸ್ಥೆಯು ಏರ್‌ಟೆಲ್ ಹಾಗೂ ವಿ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಾ ಸಾಗಿದೆ. ಜಿಯೋ ಯೋಜನೆಗಳ ಲಿಸ್ಟ್‌ನಲ್ಲಿ ಬಜೆಟ್ ಬೆಲೆಯಲ್ಲಿ ದೀರ್ಘಾವಧಿ ವ್ಯಾಲಿಡಿಟಿ ಪಡೆದ ಪ್ಲಾನ್‌ಗಳು ಸೇರಿವೆ. ಅದಾಗ್ಯೂ, ಹೆಚ್ಚಿನ ವ್ಯಾಲಿಡಿಟಿ ಜೊತೆಗೆ ಪ್ರತಿದಿನ ನಿಗದಿತ ಡೇಟಾ ಪ್ರಯೋಜನ ನೀಡುವ ಯೋಜನೆಗಳು ಬೇಡಿಕೆಯಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಜಿಯೋ ಟೆಲಿಕಾಂನ 1199 ರೂ.ಗಳ ಬೆಲೆಯ ಪ್ರೀಪೇಯ್ಡ್ ರೀಚಾರ್ಜ್ ಯೋಜನೆ ಹೆಚ್ಚು ಆಕರ್ಷಕವಾಗಿ ಕಾಣಿಸಿಕೊಂಡಿದೆ. ಈ ಬಜೆಟ್ ಬೆಲೆಯ ಯೋಜನೆಯು ದೈನಂದಿನ ಡೇಟಾ ಸೌಲಭ್ಯ ಪಡೆದುಕೊಂಡಿರುವ ಜೊತೆಗೆ 84 ದಿನಗಳ ವ್ಯಾಲಿಡಿಟಿ ಸಹ ಒಳಗೊಂಡಿದೆ. ಹಾಗಾದರೆ ಜಿಯೋ ಟೆಲಿಕಾಂನ 1199 ರೂ.ಗಳ ಪ್ಲಾನ್ ಹಾಗೂ ಇತರೆ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ.
SurveyJio ಟೆಲಿಕಾಂನ 1199 ರೂ.ಗಳ ಯೋಜನೆಯ ಮಾಹಿತಿ
ಜಿಯೋ ಟೆಲಿಕಾಂನ 1199 ರೂ.ಗಳ ವಾರ್ಷಿಕ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 84 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಈ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನ ಸಹ ಲಭ್ಯವಾಗಲಿದೆ. ಅಂದಹಾಗೆ ಈ ರೀಚಾರ್ಜ್ ಪ್ಲಾನಿನಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಕೂಡಾ ಸಿಗಲಿದೆ. ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 252GB ಡೇಟಾ ಸಿಗಲಿದೆ.

ಜಿಯೋದ ಇತರೆ ಆಕರ್ಷಕ ಯೋಜನೆಗಳು
ಜಿಯೋ ಟೆಲಿಕಾಂನ 1799 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 84 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಈ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನ ಸಹ ಲಭ್ಯವಾಗಲಿದೆ. ಅಂದಹಾಗೆ ಈ ರೀಚಾರ್ಜ್ ಪ್ಲಾನಿನಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಕೂಡಾ ಸಿಗಲಿದೆ. ಹಾಗೆಯೇ ನೆಟ್‌ಫ್ಲಿಕ್ಸ್ ಬೇಸಿಕ್ ಚಂದಾದಾರಿಕೆ ಸಹ ಲಭ್ಯ. ಇನ್ನು ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 252GB ಡೇಟಾ ಸಿಗಲಿದೆ.
ಜಿಯೋ ಟೆಲಿಕಾಂನ 449 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಒಟ್ಟು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಲಭ್ಯವಾಗುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಈ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನ ಸಹ ಲಭ್ಯವಾಗಲಿದೆ. ಅಂದಹಾಗೆ ಈ ರೀಚಾರ್ಜ್ ಪ್ಲಾನಿನಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಕೂಡಾ ಸಿಗಲಿದೆ. ಅಲ್ಲದೇ ಜಿಯೋ ಟಿವಿ ಚಂದಾದಾರಿಕೆ ಲಭ್ಯ ಜೊತೆಗೆ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 84 GB ಡೇಟಾ ಸಿಗಲಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile