Jio Offer: ಜಿಯೋದ ಈ 5 ಯೋಜನೆಗಳಲ್ಲಿ JioSaavn Pro ಚಂದಾದಾರಿಕೆ ಉಚಿತ! ಯಾವ ಪ್ಲಾನ್ ಬೆಲೆ ಎಷ್ಟು?

HIGHLIGHTS

ಜಿಯೋದ JioSaavn Pro ಚಂದಾದಾರಿಕೆಯು ಹಿಂದಿನ ಯೋಜನೆಗಳಿಗಿಂತ ಭಿನ್ನವಾಗಿದೆ

ಜಿಯೋದಿಂದ ಹೊಸದಾಗಿ ಪ್ರಾರಂಭಿಸಲಾದ ಯೋಜನೆಗಳು ದೈನಂದಿನ ಡೇಟಾವನ್ನು 2GB ವರೆಗೆ ನೀಡುತ್ತವೆ

Jio ಪ್ರೀಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿದ್ದು ಬಂಡಲ್ ಆಫರ್ ಅಡಿಯಲ್ಲಿ JioSaavn Pro ಚಂದಾದಾರಿಕೆಯನ್ನು ಒಳಗೊಂಡಿದೆ

Jio Offer: ಜಿಯೋದ ಈ 5 ಯೋಜನೆಗಳಲ್ಲಿ JioSaavn Pro ಚಂದಾದಾರಿಕೆ ಉಚಿತ! ಯಾವ ಪ್ಲಾನ್ ಬೆಲೆ ಎಷ್ಟು?

ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ ತಮ್ಮ ಬಳಕೆದಾರರಿಗೆ ಮತ್ತೊಂದು ವಿಶೇಷ ಆಫರ್ ಅನ್ನು ಉಚಿತವಾಗಿ ನೀಡಲು 5 ಹೊಸ ರಿಚಾರ್ಜ್ ಯೋಜನೆಗಳನ್ನು ತಂದಿದೆ. ಅಂದ್ರೆ ಈಗ ಜಿಯೋಸಾವನ್ ಪ್ರೊ (JioSaavn Pro) ಚಂದಾದಾರಿಕೆಯನ್ನು ಒಳಗೊಂಡಿರುವ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿದೆ. ಈ ರಿಚಾರ್ಜ್ ಯೋಜನೆಗಳ ಬೆಲೆಯಲ್ಲಿ ಜಿಯೋ ರೂ 269, ರೂ 529, ರೂ 589, ರೂ 739, ಮತ್ತು ರೂ 789 ರೂಗಳ ಹೊಸ ಮಾದರಿಯ ಯೋಜನೆಯನ್ನು ಪರಿಚಯಿಸಿದೆ. ಈ ಪ್ರತಿಯೊಂದು ಯೋಜನೆಯಲ್ಲಿ ನಿಮಗೆ ಉಚಿತವಾಗಿ ಜಿಯೋಸಾವನ್ ಪ್ರೊ (JioSaavn Pro) ಚಂದಾದಾರಿಕೆಯನ್ನು ನೀಡಲಾಗುವುದು.

Digit.in Survey
✅ Thank you for completing the survey!

ಜಿಯೋಸಾವನ್ ಪ್ರೊ (JioSaavn Pro) ಚಂದಾದಾರಿಕೆ

ಜಿಯೋ ಇತ್ತೀಚೆಗೆ ಐದು ಹೊಸ ಪ್ಲಾನ್‌ಗಳನ್ನು ಈ ಕೆಳಗಿನ ಬೆಲೆಯಲ್ಲಿ ಬಿಡುಗಡೆ ಮಾಡಿದೆ ಇತ್ತೀಚಿನ ಯೋಜನೆಗಳು ಡೇಟಾ, ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳೊಂದಿಗೆ ಬಳಕೆದಾರರಿಗೆ ಜಿಯೋಸಾವನ್ ಪ್ರೊ ಸದಸ್ಯತ್ವವನ್ನು ಒದಗಿಸುತ್ತದೆ. JioSaavn Pro ಚಂದಾದಾರಿಕೆಯು ಹಿಂದಿನ ಯೋಜನೆಗಳಿಗಿಂತ ಭಿನ್ನವಾಗಿದೆ.  ಏಕೆಂದರೆ ಅದು ಹೊಸ ಯೋಜನೆಗಳ ಮಾನ್ಯತೆಯ ಸಮಯದಲ್ಲಿ ಕೊನೆಗೊಳ್ಳುತ್ತದೆ.

ಜಿಯೋವಿನ JioSaavn Pro ರೀಚಾರ್ಜ್ ಯೋಜನೆಗಳು, ರೂ 269, ರೂ 539 ಮತ್ತು ರೂ 739 ಯೋಜನೆಗಳು ಬಳಕೆದಾರರಿಗೆ 1.5GB ದೈನಂದಿನ ಡೇಟಾ ಭತ್ಯೆಯನ್ನು ಒದಗಿಸುತ್ತದೆ. ಡೇಟಾ ಬಳಕೆ 2GB ತಲುಪಿದ ನಂತರ ಡೇಟಾದ ವೇಗವು 64Kbps ಗೆ ಕಡಿಮೆಯಾಗುತ್ತದೆ. ಹೆಚ್ಚುವರಿಯಾಗಿ ಅರ್ಹ ಚಂದಾದಾರರು ಈ ಪ್ಯಾಕ್‌ಗಳ ಮೂಲಕ ಅನಿಯಮಿತ 5G ಡೇಟಾವನ್ನು ಪಡೆಯುತ್ತಾರೆ.

Jio Saavn Pro ಚಂದಾದಾರಿಕೆಯನ್ನು ಪಡೆಯುವುದು ಹೇಗೆ?

ಮೊದಲಿಗೆ ನೀವು ಮೊಬೈಕ್ಲ್ ಅಲ್ಲಿ ಮೈಜಿಯೋ ತೆರೆದು ಅಥವಾ ನೇರವಾಗಿ ಪ್ಲೇಸ್ಟೋರ್ ಅಥವಾ ಆಪಲ್ ಸ್ಟೋರ್ ಮೂಲಕ JioSaavn ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದರೊಳಗೆ ಖಾತೆಯನ್ನು ರಚಿಸಿರಿ. ಇದರ ನಂತರ ಮೇಲೆ ನೀಡಿರುವ ಯಾವುದಾದರೊಂದು  ರೀಚಾರ್ಜ್ ಮಾಡಲು ಬಳಕೆದಾರರು MyJio, Jio.com ಆಯ್ಕೆ ಮಾಡಬಹುದು. ಇದರ ನಂತರ JioSaavn Pro ಅನ್ನು ಪ್ರವೇಶಿಸಲು ಬಳಕೆದಾರರು ಬೇರೆ ಯಾವುದೇ ಸರ್ಕಸ್ ಮಾಡುವಂತಿಲ್ಲ ಒಮ್ಮೆ ಈ ಬಂಡಲ್ ಆಫರ್ ಪ್ಲಾನ್ ರಿಚಾರ್ಜ್ ಮಾಡಿಕೊಂಡ ಬಳಕೆದಾರರಿಗೆ ಈ ಚಂದಾದಾರಿಕೆಯು ಸ್ವಯಂಚಾಲಿತವಾಗಿಯೇ ಸಕ್ರಿಯಗೊಳ್ಳುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo