Jio 11 Month Plan: ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ (Reliance Jio) ತಮ್ಮ ಬಳಕೆದಾರರಿಗೆ ಹತ್ತಾರು ಯೋಜನೆಗಳನ್ನು ನೀಡುತ್ತಿದೆ. ಅದರಲ್ಲೂ ಜಿಯೋಫೋನ್ ಗ್ರಾಹಕರಿಗೆ ಕಡಿಮೆ ಬೆಳೆಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತಿದೆ. ಪ್ರಸ್ತುತ ಜಿಯೋ ನೀಡುತ್ತಿರುವ 895 ರೂಗಳ ರಿಚಾರ್ಜ್ ಯೋಜನೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ವಿವರಿಸಲಿದ್ದೇನೆ. ಒನ್ ಯೋಜನೆಯಲ್ಲಿ ನಿಮಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಡೇಟಾ ಮತ್ತು ಉಚಿತ SMS ಸೌಲಭ್ಯಗಳನ್ನೂ ಕೇವಕ 895 ರೂಗಳಿಗೆ ನೀಡುತ್ತಿದೆ.
ಪ್ರಸ್ತುತ ಟೆಲಿಕಾಂ ವಲಯದಲ್ಲೇ ಅತಿ ಕಡಿಮೆ ಬೆಲೆಗೆ ಹೆಚ್ಚುವರಿಯ ಪ್ರಯೋಜನಗಳನ್ನು ನೀಡಲು ಹೆಸರುವಾಸಿಯಾಗಿರುವ ರಿಲಯನ್ಸ್ ಜಿಯೋ (Reliance Jio) ತಮ್ಮ ಜಿಯೋ ಗ್ರಾಹಕರನ್ನು ಕೊಂಚ ವಿಶೇಷವಾಗಿ ಗಮನಿಸುವುದನ್ನು ನೀವು ಕಾಣಬಹುದು. ಇದೆ ಸಾಮಾನ್ಯ ಬಳಕೆದಾರರ ಅಂದ್ರೆ ಜಿಯೊಫೋನ್ ಬಳಸದವರ ಈ ವಾರ್ಷಿಕ ಯೋಜನೆಯನ್ನು ಹೋಲಿಸಿ ನೋಡುವುದಾದರೆ ಅದರ ಆರಂಭಿಕ ಬೆಲೆ 3599 ರೂಗಳಾಗಿದೆ.
ಈ ಜಿಯೋಫೋನ್ ಯೋಜನೆ ನಿಮಗೆ 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಆದರೆ ಕೇವಲ ಜಿಯೊಫೋನ್ ಬಳಕೆದಾರರಿಗೆ ಮಾತ್ರ ಕೇವಲ 895 ರೂಗಳಿಗೆ ಪೂರ್ತಿ 336 ದಿನಗಳ ವ್ಯಾಲಿಡಿಟಿಯೊಂದಿಗೆ ಅಲ್ಲ ಸೌಲಭ್ಯಗಳನ್ನು ನೀಡುವುದು ಗಮನಿಸಬೇಕಾದ ಸಂಗತಿಯಾಗಿದೆ.
ಜಿಯೋದ ರೂ 895 ಯೋಜನೆಯು 336 ದಿನಗಳ ಮಾನ್ಯತೆಯ ಅವಧಿಯನ್ನು ಹೊಂದಿದೆ. ಈ ಮಾನ್ಯತೆಯನ್ನು 12 ಮರುಬಳಕೆಗಳಾಗಿ ವಿಂಗಡಿಸಲಾಗಿದೆ. ಇದು ಬಳಕೆದಾರರಿಗೆ ಪ್ರತಿ 28 ದಿನಗಳಿಗೊಮ್ಮೆ 2GB ಹೆಚ್ಚಿನ ವೇಗದ ಡೇಟಾವನ್ನು ನೀಡುತ್ತದೆ ಅಂದ್ರೆ ಪೂರ್ತಿ 28 ದಿನಗಳಿಗೆ ಕೇವಲ 2GB ಡೇಟಾ ಮಾತ್ರ ಪಡೆಯುತ್ತೀರಾ. ನಂತರ ಇಂಟರ್ನೆಟ್ ವೇಗವು 64Kbps ಗೆ ಇಳಿಯುತ್ತದೆ.
ಇದನ್ನೂ ಓದಿ: ಅಮೆಜಾನ್‌ನಲ್ಲಿ 50 ಇಂಚಿನ Smart QLED Google TV ಕೈಗೆಟಕುವ ಬೆಲೆಗೆ ಮಾರಾಟ! ಕೈ ಜಾರುವ ಮೊದಲು ಖರೀದಿಸಿಕೊಳ್ಳಿ.
ಒಟ್ಟಾರೆಯಾಗಿ ಈ ಡೇಟಾವು ಪೂರ್ಣ ಮಾನ್ಯತೆಯೊಂದಿಗೆ 24GB ಆಗಿದೆ. ಡೇಟಾ ಲಭ್ಯವಿದೆ. ಇದಲ್ಲದೆ ಪ್ಯಾಕ್ ಅನಿಯಮಿತ ವಾಯ್ಸ್ ಕರೆಗಳೊಂದಿಗೆ ಬರುತ್ತದೆ. ಅಂದರೆ ನೀವು ಎಷ್ಟು ಬೇಕಾದರೂ ಮಾತನಾಡಬಹುದು. ಇದಲ್ಲದೆ ಎಸ್‌ಎಂಎಸ್‌ಗೆ ಸಂಬಂಧಿಸಿದಂತೆ ಕಂಪನಿಯು ಈ ಯೋಜನೆಯಲ್ಲಿ ಪ್ರತಿ 28 ದಿನಗಳಿಗೊಮ್ಮೆ 50 ಎಸ್‌ಎಂಎಸ್ ಸೌಲಭ್ಯವನ್ನು ನೀಡುತ್ತದೆ.
ಇದರ ಹೊರತಾಗಿ ಈ ರೂ 895 ಯೋಜನೆಯು ಬಳಕೆದಾರರಿಗೆ ಹೆಚ್ಚುವರಿ ಪ್ರಯೋಜನಗಳಾಗಿ JioTV, JioCinema ಮತ್ತು JioCloud ಗೆ ಉಚಿತ ಪ್ರವೇಶವನ್ನು ನೀಡುತ್ತದೆ. ರಿಲಯನ್ಸ್ ಜಿಯೋದ ಈ ಪ್ರಿಪೇಯ್ಡ್ ಯೋಜನೆಯನ್ನು ಕಂಪನಿಯ ವೆಬ್‌ಸೈಟ್‌ನ ಜಿಯೋಫೋನ್ ವಿಭಾಗದಲ್ಲಿ ಪಟ್ಟಿ ಮಾಡಲಾಗಿದೆ ಎಂಬುದನ್ನು ಗಮನಿಸಬಹುದು.