ಜಿಯೋದ ಯೋಜನೆಗಳಲ್ಲಿ ಅನೇಕ ಉತ್ತಮ ಪ್ರಯೋಜನಗಳಿವೆ. ಏಕೆಂದರೆ ಜಿಯೋ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಆಫರ್ ಮತ್ತು ಡೀಲ್ ನೀಡುತ್ತದೆ. ಅತ್ಯಂತ ಜನಪ್ರಿಯ ರೀಚಾರ್ಜ್ ಆಯ್ಕೆಯು ಜಿಯೋದ 666 ರೂಪಾಯಿಗಳ ಯೋಜನೆ ಆಗಿದೆ. ಏಕೆಂದರೆ ಇದರಲ್ಲಿ ಅನೇಕ ಉತ್ತಮ ಪ್ರಯೋಜನಗಳಿವೆ. ಈ ಯೋಜನೆ ನಿಮಗೆ ಹೇಗೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎನ್ನುವುದರ ಜೊತೆಗೆ ಜಿಯೋದ ಹೆಚ್ಚಿನ ಯೋಜನೆಗಳ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
Survey
✅ Thank you for completing the survey!
ಜಿಯೋ 666 ರೂಗಳ ಪ್ರಿಪೇಯ್ಡ್ ಯೋಜನೆ:
ಜಿಯೋ 666 ರೂಪಾಯಿಗಳ ಯೋಜನೆಯು 84 ದಿನಗಳ ಮಾನ್ಯತೆಯ ಅವಧಿಯನ್ನು ಹೊಂದಿದೆ. ಈ ಯೋಜನೆಯನ್ನು ಖರೀದಿಸಿದಾಗ ನೀವು ಅನ್‌ಲಿಮಿಟೆಡ್ ಕರೆಯ ಸೌಲಭ್ಯವನ್ನು ಪಡೆಯುತ್ತೀರಿ. ಇದರಲ್ಲಿ ನಿಮಗೆ ದಿನಕ್ಕೆ 1.5GB ಡೇಟಾವನ್ನು ನೀಡುವುದರ ಜೊತೆಗೆ ಒಟ್ಟು 126GB ಡೇಟಾ ಲಭ್ಯವಿರುತ್ತದೆ. ಹೆಚ್ಚುವರಿಯಾಗಿ ಪ್ರತಿದಿನ 100 SMS ಅನ್ನು ಪಡೆಯುತ್ತೀರಿ. ಇದರೊಂದಿಗೆ ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಜಿಯೋ ಸೆಕ್ಯುರಿಟಿಗೆ ಉಚಿತ ಚಂದಾದಾರಿಕೆಗಳು ಸಹ ಈ ಯೋಜನೆಯಲ್ಲಿ ಲಭ್ಯವಿದೆ.
ನಿಮಗೆ ಹೆಚ್ಚಿನ ಡೇಟಾ ಬೇಕು ಎಂದು ಭಾವಿಸಿದರೆ ನೀವು ಈಗ 719 ರೂಪಾಯಿಗಳ ಯೋಜನೆಯನ್ನು ಖರೀದಿಸಬಹುದು. ಈ ಯೋಜನೆಯಲ್ಲಿ ಪ್ರತಿದಿನ 2GB ಡೇಟಾವನ್ನು ನೀಡಲಾಗುತ್ತದೆ. ಈ ಯೋಜನೆಯ ಮಾನ್ಯತೆ 84 ದಿನಗಳವರೆಗೆ ಇರುತ್ತದೆ. ಇದರಲ್ಲಿ ಹೆಚ್ಚುವರಿಯಾಗಿ ಅನ್‌ಲಿಮಿಟೆಡ್ ಕರೆ ಮಾಡುವ ಆಯ್ಕೆಯನ್ನು ನೀಡಲಾಗಿದ್ದು ನೀವು ಪ್ರತಿ ದಿನ 100 SMS ಅನ್ನು ಪಡೆಯುತ್ತೀರಿ. ಈ ಯೋಜನೆಯಲ್ಲು ನಿಮಗೆ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತದೆ. ಹೆಚ್ಚಿನ ಪ್ರಯೋಜನಗಳನ್ನು ಬಯಸಿದರೆ ನೀವು ಈ ಯೋಜನೆಯನ್ನು ಖರೀದಿಸಬಹುದು.
ಜಿಯೋ 749 ರೂಗಳ ಪ್ರಿಪೇಯ್ಡ್ ಯೋಜನೆ:
ಈ ಸಮಯದಲ್ಲಿ ಜಿಯೋ 749 ರೂಪಾಯಿಗಳ ಯೋಜನೆಯು ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಇದರಲ್ಲಿ ಅನ್‌ಲಿಮಿಟೆಡ್ ಕರೆಗಳ ಸೌಲಭ್ಯವಿದೆ. ಈ ಯೋಜನೆಯಲ್ಲಿ ನಿಮಗೆ ಒಟ್ಟು 180GB ಡೇಟಾವನ್ನು ನೀಡುವುದರ ಜೊತೆಗೆ ಪ್ರತಿ ದಿನ 100 SMS ಅನ್ನು ನೀಡಲಾಗುತ್ತದೆ. ಆದರೆ ಈ ಯೋಜನೆಯಲ್ಲಿ ಪ್ರತಿದಿನ ಲಭ್ಯವಿರುವ 2GB ಡೇಟಾದ ಮಿತಿ ವಿಭಿನ್ನವಾಗಿದ್ದು ಬಳಕೆಯ ಅನುಸಾರವಾಗಿ ಇದರ ವ್ಯಾಲಿಡಿಟಿ ಅವಲಂಭಿಸಿರುತ್ತದೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile