Jio, Airtel, Vi and BSNL in 2026
ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಜನಪ್ರಿಯ ಟೆಲಿಕಾಂ ಕಂಪನಿಗಳಗಿರುವ ಜಿಯೋ, ಏರ್‌ಟೆಲ್, ಬಿಎಸ್‌ಎನ್‌ಎಲ್ ಮತ್ತು ವೋಡಾಫೋನ್ ಐಡಿಯಾ ಕಂಪನಿಗಳು ತಮ್ಮ ಗ್ರಾಹಕರಿಗೆ ಅನೇಕ ಯೋಜನೆಗಳನ್ನು ಕಡಿಮೆ ಬೆಲೆಗೆ ನಿಡುತ್ತಿವೆ. ಆ ಪಟ್ಟಿಯಲ್ಲಿ ಈ ₹299 ರೂಗಳ ಪ್ಲಾನ್ ಸಹ ಒಂದಾಗಿದೆ. ಈ ಪ್ಲಾನ್ ನಿಜಕ್ಕೂ ಗ್ರಾಹಕರು ಬಹಳ ಜನಪ್ರಿಯವಾಗಿದ್ದು ನೀವು ವೇಗದ 5G ಇಂಟರ್ನೆಟ್ ಬಯಸುವವರಾಗಿರಲಿ ಅಥವಾ ಹೆಚ್ಚಿನ ಡೇಟಾ ಬಳಸುವವರಾಗಿರಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಅನುಕೂಲ ಈ ಯೋಜನೆಗಳಲ್ಲಿದೆ. ಈ ಕೆಳಗೆ Jio, Airtel, BSNL ಮತ್ತು Vi ಹೊಂದಿರುವ ಈ ₹299 ಪ್ಲಾನ್ ಬಗ್ಗೆ ವಿವರಗಳನ್ನು ನೀಡಲಾಗಿದ್ದು ಇದರಲ್ಲಿ ಯಾರ ಪ್ಲಾನ್ ಬೆಸ್ಟ್ ಮತ್ತು ಯಾಕೆ? ಎನ್ನುವುದನ್ನು ತಿಳಿಯಬಹುದು.
Also Read: Amazon’s Republic Day Sale 2026 ಶುರುವಾಗಲಿದ್ದು ಉಚಿತ ಪ್ರೈಮ್ ಡೀಲ್ ಪಡೆಯಲು Jio ಅತ್ಯುತ್ತಮ ಯೋಜನೆ ಇಲ್ಲಿದೆ!
ಜಿಯೋ ಕಂಪನಿಯ ಈ ಪ್ಲಾನ್ ಮುಖ್ಯವಾಗಿ ಅತಿ ವೇಗದ ಇಂಟರ್ನೆಟ್ ಬಯಸುವವರಿಗಾಗಿ ಇದೆ. ನಿಮಗೆ ಇದರಲ್ಲಿ ದಿನಕ್ಕೆ 1.5GB ಹೈ-ಸ್ಪೀಡ್ ಡೇಟಾ ಸಿಗುತ್ತದೆ ಮತ್ತು ಇದರ ವ್ಯಾಲಿಡಿಟಿ 28 ದಿನಗಳಾಗಿವೆ. ಅಂದರೆ ಒಟ್ಟು 42GB ಡೇಟಾ ದೊರೆಯುತ್ತದೆ. ಈ ಯೋಜನೆಯ ವಿಶೇಷತೆ ಏನೆಂದರೆ ನೀವು 5G ನೆಟ್‌ವರ್ಕ್ ಇರುವ ಪ್ರದೇಶದಲ್ಲಿದ್ದರೆ ಅನಿಯಮಿತ 5G ಡೇಟಾ ಬಳಸಬಹುದು. ಇದರ ಜೊತೆಗೆ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕಾಲ್ ಮಾಡಬಹುದು ದಿನಕ್ಕೆ 100 SMS ಮತ್ತು ಜಿಯೋ ಸಿನಿಮಾ, ಜಿಯೋ ಟಿವಿ ಅಪ್ಲಿಕೇಶನ್‌ಗಳು ಉಚಿತ ಚಂದದಾರಿಕೆ ಲಭ್ಯವಿರುತ್ತದೆ.
ಏರ್‌ಟೆಲ್‌ನ ಈ ಯೋಜನೆ ಉತ್ತಮ ನೆಟ್‌ವರ್ಕ್ ಮತ್ತು ಕರೆಗಳ ಗುಣಮಟ್ಟಕ್ಕೆ ಹೆಸರಾಗಿದೆ. ಇದು ಕೂಡ 28 ದಿನಕ್ಕೆ 1.5GB ನೀಡಲಾಗುತ್ತದೆ. ಇದರೊಂದಿಗೆ ಭಾರತದಲ್ಲಿ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ (STD) ಕರೆಗಳನ್ನು ಮಾಡಬಹುದು ಹಾಗೂ ದಿನಕ್ಕೆ 100 SMS ಕಳುಹಿಸಬಹುದು. ಏರ್‌ಟೆಲ್ ಬಳಕೆದಾರರಿಗೆ ಎಕ್ಸ್‌ಟ್ರೀಮ್ ಪ್ಲೇ ಮತ್ತು ರಿವಾರ್ಡ್ಸ್‌ಮಿನಿ ಅಂತಹ ಕೆಲವು ಹೆಚ್ಚುವರಿ ಸೌಲಭ್ಯಗಳು ಸಿಗುತ್ತವೆ. ನಗರ ಪ್ರದೇಶಗಳಲ್ಲಿ ಉತ್ತಮ ನೆಟ್‌ವರ್ಕ್ ಬಯಸುವವರಿಗೆ ಇದು ಸೂಕ್ತವಾದ ಯೋಜನೆಯಾಗಿದೆ.
ಕಡಿಮೆ ಖರ್ಚಿನಲ್ಲಿ ಹೆಚ್ಚು ಡೇಟಾ ಬೇಕು ಎನ್ನುವವರಿಗೆ ಬಿಎಸ್‌ಎನ್‌ಎಲ್ ಅತ್ಯುತ್ತಮ ಆಯ್ಕೆಯಾಗಿದೆ. ಈ ಪ್ಲಾನ್‌ನಲ್ಲಿ ಸಾಮಾನ್ಯವಾಗಿ ದಿನಕ್ಕೆ 2GB ಇಂದ 3GB ವರೆಗಿನ ಡೇಟಾ ಸಿಗುತ್ತದೆ ಮತ್ತು ಇದರ ವ್ಯಾಲಿಡಿಟಿ 28 ರಿಂದ 30 ರಷ್ಟು ಇರುತ್ತದೆ. ಅನ್ಲಿಮಿಟೆಡ್ ಕರೆಗಳು ಮತ್ತು ದಿನಕ್ಕೆ 100 SMS ಸೌಲಭ್ಯವಿದೆ. ಬಿಎಸ್‌ಎನ್‌ಎಲ್ 4G ಮತ್ತು 5G ಸೇವೆಗಳು ಕೆಲವು ಕಡೆ ಈ ಹಂತವಾಗಿ ಬರುತ್ತಿದ್ದರೂ ಹಳ್ಳಿಗಳಲ್ಲಿ ಮತ್ತು ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಡೇಟಾ ಬಳಸುವವರಿಗೆ ಇದು ತುಂಬಾ ಲಾಭದಾಯಕವಾಗಿದೆ.
ವೋಡಾಫೋನ್ ಐಡಿಯಾ (Vi) ಕಂಪನಿಯ ಈ ಪ್ಲಾನ್ ರಾತ್ರಿ ವೇಳೆ ಇಂಟರ್ನೆಟ್ ಬಳಸುವವರಿಗೆ ಮತ್ತು ಸಿನಿಮಾ ನೋಡುವವರಿಗೆ ತುಂಬಾ ಇಷ್ಟವಾಗುತ್ತದೆ. ದಿನಕ್ಕೆ 1.5GB ಡೇಟಾ 28 ಸಿಗುತ್ತದೆ. ಇದರ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ‘ಬಿಂಜ್ ಆಲ್ ನೈಟ್’ ಸೌಲಭ್ಯ. ಇದರ ಪ್ರಕಾರ ರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನೀವು ಎಷ್ಟು ಬೇಕಾದರೂ ಅನ್ಲಿಮಿಟೆಡ್ ಡೇಟಾ ಬಳಸಬಹುದು ಇದು ನಿಮ್ಮ ದಿನದ ಕೋಟಾದಿಂದ ಕಟ್ ಆಗುವುದಿಲ್ಲ. ಅಷ್ಟೇ ಅಲ್ಲದೆ ಸೋಮವಾರದಿಂದ ಶುಕ್ರವಾರದವರೆಗೆ ಉಳಿದ ಶನಿವಾರ ಮತ್ತು ಭಾನುವಾರದಂದು ‘ಡೇಟಾ ರೋಲ್’ ಸೌಲಭ್ಯವೂ ಇದೆ.