ನೀವು Airtel ಗ್ರಾಹಕರೇ? ದೀರ್ಘಾವಧಿ ವ್ಯಾಲಿಡಿಟಿ ಅಗತ್ಯ ಇದೆಯೆ? ಹಾಗಿದ್ರೆ ಈ ಪ್ಲಾನ್ ನಿಮಗಾಗಿ!
ದೇಶದ ಎರಡನೇ ದೊಡ್ಡ ಟೆಲಿಕಾಂ ಎನಿಸಿರುವ Airtel ಕಂಪನಿಯು ಕೆಲವು ಆಕರ್ಷಕ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಜಿಯೋ ಹಾಗೂ ವಿ ಕಂಪನಿಗಳಿಗೆ ಫೈಟ್ ನೀಡುತ್ತಾ ಮುಂದೆ ಸಾಗಿದೆ. ಅಲ್ಲದೇ ಕಂಪನಿಯು ಬಳಕೆದಾರರ ಅನುಕೂಲಕ್ಕೆ ಅನುಗುಣವಾಗಿ ಭಿನ್ನ ಬೆಲೆಯ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳ ಆಯ್ಕೆಗಳನ್ನು ನೀಡಿದೆ. ಅದರಲ್ಲೂ ಬಜೆಟ್ ದರದಲ್ಲಿ ಆಕರ್ಷಕ ಡೇಟಾ ಅಥವಾ ಉತ್ತಮ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಕಂಪನಿಯ ಕೆಲವು ಪ್ಲಾನ್‌ಗಳು ಹೆಚ್ಚು ಉಪಯುಕ್ತವಾಗಿವೆ. ಆ ರೀತಿಯ ಯೋಜನೆಗಳ ಲಿಸ್ಟ್‌ನಲ್ಲಿ 1849 ರೂ.ಗಳ ಪ್ರೀಪೇಯ್ಡ್ ಯೋಜನೆ ಸಹ ಗಮನ ಸೆಳೆಯುತ್ತದೆ. ಪ್ರಮುಖವಾಗಿ ವ್ಯಾಲಿಡಿಟಿ ಜೊತೆಗೆ ಕನಿಷ್ಠ ಡೇಟಾ ಅಗತ್ಯವಿರುವವರಿಗೆ ಈ ಯೋಜನೆ ಮತ್ತಷ್ಟು ಆಕರ್ಷಕ ಪ್ಲಾನ್ ಎನಿಸಬಹುದು. ಹಾಗಾದರೆ ಏರ್‌ಟೆಲ್ ಟೆಲಿಕಾಂನ 1849 ರೂ.ಗಳ ಪ್ಲಾನ್‌ನಲ್ಲಿ ಲಭ್ಯವಿರುವ ಡೇಟಾ ಮತ್ತು ಇತರ ಪ್ರಯೋಜನಗಳ ಮಾಹಿತಿ ಮುಂದೆ ನೋಡೋಣ.
Airtel ಕಂಪನಿಯ 1849 ರೂ.ಗಳ ಪ್ಲಾನ್ ಮಾಹಿತಿ
ಏರ್‌ಟೆಲ್ ಟೆಲಿಕಾಂನ 1849 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ವ್ಯಾಲಿಡಿಟಿ ಯೋಜನೆಯಾಗಿದೆ. ಇದರಲ್ಲಿ ಯಾವುದೇ ಡೇಟಾ ಪ್ರಯೋಜನ ಸಿಗುವುದಿಲ್ಲ. ಇದರೊಂದಿಗೆ ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ನೀಡುತ್ತದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 3600 SMS ಪ್ರಯೋಜನ ಸಹ ಲಭ್ಯ ಆಗುವುದು. ಅಲ್ಲದೇ ಈ ಪ್ಲಾನಿನಲ್ಲಿ ಇತರೆ ಸೌಲಭ್ಯ ಲಭ್ಯ.
ಏರ್‌ಟೆಲ್ ಕಂಪನಿಯ 1099 ರೂ.ಗಳ ಪ್ಲಾನ್ ಮಾಹಿತಿ
ಏರ್‌ಟೆಲ್ ಟೆಲಿಕಾಂನ 1099 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನಿಯಮಿತ ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ನೀಡುತ್ತದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಪ್ರತಿದಿನ 100 SMS ಪ್ರಯೋಜನ ಸಹ ಲಭ್ಯ ಆಗುವುದು.
ಏರ್‌ಟೆಲ್ ಸಂಸ್ಥೆಯ 1199 ರೂ.ಗಳ ಪ್ಲಾನ್ ಸೌಲಭ್ಯಗಳು
ಏರ್‌ಟೆಲ್ ಟೆಲಿಕಾಂನ 1199 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 2.5GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ನೀಡುತ್ತದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಪ್ರತಿದಿನ 100 SMS ಪ್ರಯೋಜನ ಸಹ ಲಭ್ಯ ಆಗುವುದು. ಅಲ್ಲದೇ ಈ ಪ್ಲಾನಿನಲ್ಲಿ ಅಮೆಜಾನ್ ಪ್ರೈಮ್ ಲೈಟ್, ಅಡೋಬ್ ಎಕ್ಸ್‌ಪ್ರೆಸ್ ಪ್ರಿಮಿಯಂ ಚಂದಾದಾರಿಕೆ ಸಹ ಲಭ್ಯ.