Jio vs Airtel vs Vodafone Idea 84 days recharge plans with daily 1 5gb data and unlimited calls
Jio, Airtel ಹಾಗೂ Vi ಟೆಲಿಕಾಂ ಸಂಸ್ಥೆಗಳು ಆಕರ್ಷಕ ಯೋಜನೆಗಳ ಮೂಲಕ ತಮ್ಮದೇ ಗ್ರಾಹಕ ಬಳಗವನ್ನು ಹೊಂದಿವೆ. ಅವುಗಳಲ್ಲಿ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ಹಾಗೂ ಪೋಸ್ಟ್‌ಪೇಯ್ಡ್ ರೀಚಾರ್ಜ್ ಪ್ಲ್ಯಾನ್ ಆಯ್ಕೆಗಳು ಸೇರಿವೆ. ಇನ್ನು ಕೆಲವು ಪ್ರೀಪೇಯ್ಡ್ ಯೋಜನೆಗಳು ಅಧಿಕ ಪ್ರಯೋಜನದಿಂದ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಅಂತಹ ಪ್ಲಾನ್ ನೋಡುವುದಾರರೆ Jio, Airtel ಹಾಗೂ Vi ಟೆಲಿಕಾಂಗಳ 3599 ರೂಗಳ ಪ್ಲಾನ್ ಡೇಟಾ, ವ್ಯಾಲಿಡಿಟಿ, ವಾಯ್ಸ್ ಕರೆಗಳು ಸೇರಿದಂತೆ ಹಲವು ಪ್ರಯೋಜನಗಳನ್ನು ಒಳಗೊಂಡಿವೆ. ಜಿಯೋ, ಏರ್‌ಟೆಲ್ ಹಾಗೂ ವಿ ಟೆಲಿಕಾಂ 3599 ರೂಗಳ ಪ್ಲ್ಯಾನಿನಲ್ಲಿ ಯಾವುದು ಬೆಸ್ಟ್? ಪ್ರಯೋಜನಗಳೆನು ಮುಂದೆ ನೋಡೋಣ ತಿಳಿಯೋಣ.
Also Read : Vivo V70 ಮತ್ತು Vivo V70 Elite ಫೋನ್‌ಗಳ ಬೆಲೆ ಲೀಕ್; ಕುತೂಹಲ ಹೆಚ್ಚಿಸಿದ ಫೀಚರ್ಸ್
ಭಾರ್ತಿ ಏರ್‌ಟೆಲ್‌ನ 3599 ರೂ.ಗಳ ರೀಚಾರ್ಜ್ ಯೋಜನೆಯು ವಾರ್ಷಿಕ ಅವಧಿಯ ಯೋಜನೆ ಆಗಿದೆ. ಈ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ 5G + ಪ್ರತಿದಿನ 2 GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದ್ದು, ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ. ಅಂದಹಾಗೆ ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಯೋಜನೆ ಜೊತೆಗೆ ಹೆಚ್ಚುವರಿಯಾಗಿ ಒಂದು ವರ್ಷದ Adobe Premiere Express ಚಂದಾದಾರಿಕೆಯು ಲಭ್ಯ.
ರಿಲಯನ್ಸ್ Jio 3599 ರೂ.ಗಳ ರೀಚಾರ್ಜ್ ಪ್ಲಾನ್ ಸಹ ವಾರ್ಷಿಕ ಅವಧಿಯ ಯೋಜನೆ ಆಗಿದೆ. ಈ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 2.5 GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿದ್ದು ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟಾರೇ 912.5GB ದೊರೆಯುತ್ತದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದ್ದು, ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ. ಅಂದಹಾಗೆ ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಯೋಜನೆ ಜೊತೆಗೆ ಹೆಚ್ಚುವರಿಯಾಗಿ JioTV ಹಾಗೂ JioAICloud ಚಂದಾದಾರಿಕೆಯು ಲಭ್ಯ.
ವೊಡಾಫೋನ್ ಐಡಿಯಾ ಟೆಲಿಕಾಂನ 3599 ರೂ.ಗಳ ರೀಚಾರ್ಜ್ ಪ್ಲಾನ್ ವಾರ್ಷಿಕ ಅವಧಿಯ ಮಾನ್ಯತೆ ಪಡೆದಿದೆ. ಈ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2 GB ಡೇಟಾ ಸೌಲಭ್ಯ ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದ್ದು, ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ. ಅಂದಹಾಗೆ ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಪ್ಲಾನ್ ವೀಕೆಂಡ್ ಡೇಟಾ ರೋಲ್‌ಓವರ್ ಸೌಲಭ್ಯವನ್ನು ಪಡೆದಿದೆ.