Jio ಟೆಲಿಕಾಂನ ಈ Postpaid ಯೋಜನೆಯಲ್ಲಿ 100GB ಡೇಟಾ ಜೊತೆಗೆ OTT ಸೌಲಭ್ಯ
ಜಿಯೋ ಟೆಲಿಕಾಂನ 749 ರೂ.ಗಳ ಪ್ಲಾನಿನಲ್ಲಿ ಆಕರ್ಷಕ ಸೌಲಭ್ಯಗಳು
ಜಿಯೋ ಟೆಲಿಕಾಂನ ಈ ಯೋಜನೆಯಲ್ಲಿ ಅನಿಯಮಿತ ಡೇಟಾ ಪ್ರಯೋಜನ
ಜಿಯೋದ 749 ರೂ.ಗಳ ಪ್ಲಾನಿನಲ್ಲಿ ಜನಪ್ರಿಯ OTT ಚಂದಾದಾರಿಕೆಯ ಆಯ್ಕೆ ಇದೆ
ಪ್ರಮುಖ ಟೆಲಿಕಾಂ ಸಂಸ್ಥೆ ಎನಿಸಿಕೊಂಡಿರುವ Jio ಭಿನ್ನ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಈ ಟೆಲಿಕಾಂ ಗ್ರಾಹಕರ ಅಗತ್ಯತೆಗೆ ಅನುಗುಣವಾಗಿ ಹಲವು ಪ್ರೀಪೇಡ್ ಹಾಗೂ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಸಹ ಪರಿಚಯಿಸಿದೆ. ಆ ಪೈಕಿ ಜಿಯೋ ಟೆಲಿಕಾಂ 749 ರೂ.ಗಳ ಪೋಸ್ಟ್‌ಪೇಯ್ಡ್ ಪ್ಲಾನ್ ಬಹಳ ಜನಪ್ರಿಯವಾಗಿದ್ದು, ಕುಟುಂಬ ಬಳಕೆದಾರರು ಮತ್ತು ಹೆಚ್ಚಿನ ಡೇಟಾ ಬಳಸುವವರಿಗೆ ಆಕರ್ಷಕ ಎನಿಸಿದೆ. ಈ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಆಕರ್ಷಕ ಡೇಟಾ ಪ್ರಯೋಜನ ಹಾಗೂ ಇತರೆ ಹೆಚ್ಚುವರಿ ಪ್ರಯೋಜನಗಳು ಸಹ ದೊರೆಯುತ್ತದೆ. ಹಾಗಾದರೆ ಜಿಯೋ ಟೆಲಿಕಾಂನ 749 ರೂ.ಗಳ ಪೋಸ್ಟ್‌ಪೇಯ್ಡ್ ಯೋಜನೆಯ ಹಾಗೂ ಇತರೆ ಜನಪ್ರಿಯ ಪ್ಲಾನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : 7,200mAh ಬ್ಯಾಟರಿ ಇರುವ Vivo T5X 5G ಮೊಬೈಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆ!
Jio 749 ರೂ.ಗಳ ಪೋಸ್ಟ್‌ಪೇಯ್ಡ್ ಯೋಜನೆ
ಜಿಯೋ ಕಂಪನಿಯ 749 ರೂ.ಗಳ ಪೋಸ್ಟ್‌ಪೇಡ್ ಯೋಜನೆಯಲ್ಲಿ 3 ಸಿಮ್ ವರೆಗೆ ಆಯ್ಕೆ ಸಿಗುತ್ತದೆ. ಅಲ್ಲದೇ ಈ ಯೋಜನೆಯಲ್ಲಿ 100GB ಡೇಟಾ ಸೌಲಭ್ಯ ಸಹ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಲೋಕಲ್, ನ್ಯಾಷನಲ್ ರೋಮಿಂಗ್ ವಾಯ್ಸ್ ಕರೆಗಳ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯವಿರುತ್ತದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಿಗುತ್ತದೆ. ಇದರಲ್ಲಿ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಲೈಟ್, ಜಿಯೋ ಟಿವಿ ಹಾಗೂ ಜಿಯೋ ಎಐ ಕ್ಲೌಡ್ ಚಂದಾದಾರಿಕೆಯ ಪ್ರಯೋಜನ ಇರುತ್ತದೆ.

ಇತರೆ ಜನಪ್ರಿಯ ಪೋಸ್ಟ್‌ಪೇಯ್ಡ್ ಯೋಜನೆಗಳ ಮಾಹಿತಿ
ಜಿಯೋ ಸಂಸ್ಥೆಯ 649 ರೂ.ಗಳ ಪೋಸ್ಟ್‌ಪೇಡ್ ಯೋಜನೆಯಲ್ಲಿ ಒಂದು ರೆಗ್ಯುಲರ್ ಸಿಮ್ ಆಯ್ಕೆ ಸಿಗುತ್ತದೆ. ಅಲ್ಲದೇ ಈ ಪ್ಲಾನಿನಲ್ಲಿ ಅನಿಯಮಿತ ಡೇಟಾ ಸೌಲಭ್ಯ ಸಹ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಲೋಕಲ್, ನ್ಯಾಷನಲ್ ರೋಮಿಂಗ್ ವಾಯ್ಸ್ ಕರೆಗಳ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯವಿರುತ್ತದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಿಗುತ್ತದೆ. ಇದರಲ್ಲಿ ಹೆಚ್ಚುವರಿಯಾಗಿ ಜಿಯೋ ಟಿವಿ ಹಾಗೂ ಜಿಯೋ ಎಐ ಕ್ಲೌಡ್ ಚಂದಾದಾರಿಕೆಯ ಸೌಲಭ್ಯ ಇರುತ್ತದೆ.
ಜಿಯೋ ಟೆಲಿಕಾಂನ 449 ರೂ.ಗಳ ಪೋಸ್ಟ್‌ಪೇಡ್ ಯೋಜನೆಯಲ್ಲಿ ಒಂದು ರೆಗ್ಯುಲರ್ ಸಿಮ್ ಆಯ್ಕೆ ಸಿಗುತ್ತದೆ. ಅಲ್ಲದೇ ಈ ಯೋಜನೆಯಲ್ಲಿ 75GB ಡೇಟಾ ಸೌಲಭ್ಯ ಸಹ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಲೋಕಲ್, ನ್ಯಾಷನಲ್ ರೋಮಿಂಗ್ ವಾಯ್ಸ್ ಕರೆಗಳ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯವಿರುತ್ತದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಿಗುತ್ತದೆ. ಇದರಲ್ಲಿ ಹೆಚ್ಚುವರಿಯಾಗಿ ಜಿಯೋ ಟಿವಿ ಹಾಗೂ ಜಿಯೋ ಎಐ ಕ್ಲೌಡ್ ಚಂದಾದಾರಿಕೆಯ ಅವಕಾಶ ಇರುತ್ತದೆ.
ಜಿಯೋ ಸಂಸ್ಥೆಯ 1549 ರೂ.ಗಳ ಪೋಸ್ಟ್‌ಪೇಡ್ ಯೋಜನೆಯಲ್ಲಿ ಒಂದು ರೆಗ್ಯುಲರ್ ಸಿಮ್ ಆಯ್ಕೆ ಸಿಗುತ್ತದೆ. ಅಲ್ಲದೇ ಈ ಪ್ಲಾನಿನಲ್ಲಿ 500GB ವರೆಗೂ ಡೇಟಾ ಸೌಲಭ್ಯ ಸಹ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಲೋಕಲ್, ನ್ಯಾಷನಲ್ ರೋಮಿಂಗ್ ವಾಯ್ಸ್ ಕರೆಗಳ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯವಿರುತ್ತದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಿಗುತ್ತದೆ. ಇದರಲ್ಲಿ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಲೈಟ್, ಜಿಯೋ ಟಿವಿ ಹಾಗೂ ಜಿಯೋ ಎಐ ಕ್ಲೌಡ್ ಚಂದಾದಾರಿಕೆಯ ಅವಕಾಶ ಇರುತ್ತದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
