Jio ಕಂಪನಿಯ 749 ರೂ.ಗಳ ಪ್ಲಾನಿನಲ್ಲಿ ಪ್ರತಿದಿನ 2GB ಡೇಟಾ ಜೊತೆಗೆ 20GB ಡೇಟಾ ಉಚಿತ
ಜಿಯೋದ 749 ರೂ.ಗಳ ಯೋಜನೆ ಅಗ್ಗದ ಬೆಲೆಯಲ್ಲಿ ಉತ್ತಮ ಎನಿಸಿದೆ
ಜಿಯೋ ಟೆಲಿಕಾಂನ ಈ ರೀಚಾರ್ಜ್ ಯೋಜನೆಯಲ್ಲಿ 72 ದಿನಗಳ ವ್ಯಾಲಿಡಿಟಿ ಲಭ್ಯ
ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್ ಪ್ಲಾನಿನಲ್ಲಿ ಅನಿಯಮಿತ ಉಚಿತ ವಾಯ್ಸ್ ಕರೆ ಸೌಲಭ್ಯ
ದೇಶದ ಲೀಡಿಂಗ್ ಟೆಲಿಕಾಂ ಕಂಪನಿ ಎಂದೆನಿಸಿಕೊಂಡಿರುವ Jio ಕಂಪನಿಯು ಭಿನ್ನ ರೀಚಾರ್ಜ್‌ಯೋಜನೆಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಕೆಲವು ಆಕರ್ಷಕ ಯೋಜನೆಗಳ ಮೂಲಕ ಜಿಯೋ ಹಾಗೂ ವಿ ಸಂಸ್ಥೆಗಳಿಗೆ ನೇರ ಪೈಪೋಟಿ ನೀಡಿದೆ. ಅವುಗಳ ಪೈಕಿ ಜಿಯೋ ಕಂಪನಿಯ ಪ್ರತಿದಿನ ಡೇಟಾ ಪ್ರಯೋಜನ ಜೊತೆಗೆ ಬಿಗ್ ವ್ಯಾಲಿಡಿಟಿ ಒಳಗೊಂಡ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್‌ಗಳು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಿವೆ. ಮುಖ್ಯವಾಗಿ ಪ್ರತಿದಿನ ಹೆಚ್ಚಿನ ಡೇಟಾ ಸೌಲಭ್ಯ ಬಯಸುವ ಗ್ರಾಹಕರ ಗಮನ ಸೆಳೆದಿವೆ. ಅಂದಹಾಗೆ ಜಿಯೋದ 749 ರೂ.ಗಳ ಪ್ಲಾನ್‌ಗಳಲ್ಲಿ ಡೇಟಾ ಪ್ರಯೋಜನದ ಜೊತೆಗೆ ಹೆಚ್ಚುವರಿ ಓಟಿಟಿ ಚಂದಾದಾರಿಕೆಯ ಸೌಲಭ್ಯಗಳು ಕೂಡಾ ಸಿಗುತ್ತವೆ. ಹಾಗಾದರೆ ಜಿಯೋ ಟೆಲಿಕಾಂನ 749 ರೂ.ಗಳ ಯೋಜನೆಯ ಪ್ರಯೋಜನಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ iQOO Z11 ಮೊಬೈಲ್! 7,050mAh ಬ್ಯಾಟರಿ ಹೈಲೈಟ್
Jio ಟೆಲಿಕಾಂನ 749 ರೂ.ಗಳ ಯೋಜನೆ
ರಿಲಯನ್ಸ್ ಜಿಯೋ ಕಂಪನಿಯ 749 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2GB Data ಪ್ರಯೋಜನ ಸಿಗಲಿದೆ. ಇದರೊಂದಿಗೆ ಹೆಚ್ಚುವರಿಯಾಗಿ 20GB ಡೇಟಾ ಸೌಲಭ್ಯ ಸಹ ದೊರೆಯುತ್ತದೆ. ಅಲ್ಲದೇ ಈ ರೀಚಾರ್ಜ್ ಯೋಜನೆಯು 72 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಇದರೊಂದಿಗೆ ಜಿಯೋ ಕ್ಲೌಡ್ ಸೇರಿದಂತೆ ಜಿಯೋ ಟಿವಿ ಓಟಿಟಿ ಪ್ಲಾಟ್‌ಫಾರ್ಮ್ ಗಳ ಚಂದಾದಾರಿಕೆಯ ಪ್ರಯೋಜನ ಸಹ ದೊರೆಯುತ್ತದೆ.

ಜಿಯೋ ಕಂಪನಿಯ 719 ರೂ.ಗಳ ಯೋಜನೆ
ರಿಲಯನ್ಸ್ ಜಿಯೋ ಕಂಪನಿಯ 719 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ದೈನಂದಿನ 2GB Data ಪ್ರಯೋಜನ ಸಿಗಲಿದೆ. ಅಲ್ಲದೇ ಈ ರೀಚಾರ್ಜ್ ಯೋಜನೆಯು 70 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಇದರೊಂದಿಗೆ ಜಿಯೋ ಹಾಟ್‌ಸ್ಟಾರ್ ಸೇರಿದಂತೆ ಜಿಯೋ ಟಿವಿ ಓಟಿಟಿ ಪ್ಲಾಟ್‌ಫಾರ್ಮ್ ಗಳ ಚಂದಾದಾರಿಕೆಯ ಪ್ರಯೋಜನ ಸಹ ದೊರೆಯುತ್ತದೆ.
ಜಿಯೋ ಸಂಸ್ಥೆಯ 859 ರೂ.ಗಳ ಯೋಜನೆ
ರಿಲಯನ್ಸ್ ಜಿಯೋ ಕಂಪನಿಯ 859 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 2GB Data ಪ್ರಯೋಜನ ಸಿಗಲಿದೆ. ಅಲ್ಲದೇ ಈ ರೀಚಾರ್ಜ್ ಯೋಜನೆಯು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಇದರೊಂದಿಗೆ ಜಿಯೋ ಹಾಟ್‌ಸ್ಟಾರ್ ಸೇರಿದಂತೆ ಜಿಯೋ ಟಿವಿ ಓಟಿಟಿ ಪ್ಲಾಟ್‌ಫಾರ್ಮ್ ಗಳ ಚಂದಾದಾರಿಕೆಯ ಪ್ರಯೋಜನ ಸಹ ದೊರೆಯುತ್ತದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
