256GB ಸ್ಟೋರೇಜ್ ಇರುವ OnePlus 15R ಮೊಬೈಲ್‌ ಬೆಲೆಯಲ್ಲಿ ಆಕರ್ಷಕ ಇಳಿಕೆ!

HIGHLIGHTS

ಅಮೆಜಾನ್‌ ಸೇಲ್‌ನಲ್ಲಿ ಒನ್‌ಪ್ಲಸ್‌ 15R ಫೋನಿಗೆ ಉತ್ತಮ ಆಫರ್

ಒನ್‌ಪ್ಲಸ್‌ 15R ಮೊಬೈಲ್‌ 7,400mAh ಬ್ಯಾಟರಿ ಬೆಂಬಲ ಪಡೆದಿದೆ

ಈ ಮೊಬೈಲ್‌ ಸ್ನಾಪ್‌ಡ್ರಾಗನ್ 8 ಜೆನ್ 5 ಚಿಪ್‌ಸೆಟ್‌ ಪ್ರೊಸೆಸರ್‌ ಹೊಂದಿದೆ

256GB ಸ್ಟೋರೇಜ್ ಇರುವ OnePlus 15R ಮೊಬೈಲ್‌ ಬೆಲೆಯಲ್ಲಿ ಆಕರ್ಷಕ ಇಳಿಕೆ!

ಇ ಕಾಮರ್ಸ್‌ ದೈತ್ಯ ಎನಿಸಿರುವ ಅಮೆಜಾನ್‌ನ ಆಯೋಜಿಸಿರುವ Amazon Great Indian Festival Sale 2026 ಸೇಲ್ ಗ್ರಾಹಕರ ಗಮನ ಸೆಳೆಯುತ್ತಿದೆ. ಈ ಮಾರಾಟದಲ್ಲಿ ಆಯ್ದ ಫೋನ್‌ಗಳಿಗೆ ಭರ್ಜರಿ ರಿಯಾಯಿತಿ ಲಭ್ಯವಿದೆ. ಆ ಪೈಕಿ ಒನ್‌ಪ್ಲಸ್‌ ಕಂಪನಿಯ OnePlus 15R ಮೊಬೈಲ್‌ ಆಕರ್ಷಕ ಆಫರ್‌ ದರದಲ್ಲಿ ಕಾಣಿಸಿಕೊಂಡಿದೆ. ಇನ್ನು ಆಸಕ್ತ ಖರೀದಿದಾರರು ಲಭ್ಯವಿರುವ ಆಯ್ದ ಬ್ಯಾಂಕ್‌ಗಳ ಕೊಡುಗೆಗಳು ಹಾಗೂ ಎಕ್ಸ್‌ಚೇಂಜ್ ಆಫರ್‌ ಮೂಲಕ ಈ ಮೊಬೈಲ್‌ ಖರೀದಿಸಿದರೆ ಇನ್ನಷ್ಟು ಡಿಸ್ಕೌಂಟ್‌ ಸಹ ಪಡೆಯಲು ಅವಕಾಶ ಇದೆ. ಈ ಮೊಬೈಲ್‌ ಸ್ನಾಪ್‌ಡ್ರಾಗನ್ 8 ಜೆನ್ 5 ಚಿಪ್‌ಸೆಟ್ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ಸ್ಮಾರ್ಟ್‌ಫೋನ್‌ 7,400mAh ಬ್ಯಾಟರಿ ಸಪೋರ್ಟ್ ಸಹ ಪಡೆದಿದೆ. ಅಲ್ಲದೇ ಈ ಮೊಬೈಲ್‌ ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಹಾಗಾದರೆ ಅಮೆಜಾನ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಒನ್‌ಪ್ಲಸ್‌ 15R ಸ್ಮಾರ್ಟ್‌ಫೋನಿಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : 32MP ಸೆಲ್ಫಿ ಕ್ಯಾಮೆರಾ ಒಳಗೊಂಡ Vivo S2 ಮೊಬೈಲ್‌ ಖರೀದಿಸಲು ಈ ಆಫರ್‌ ಅತ್ಯುತ್ತಮ!

OnePlus 15R ಫೋನಿಗೆ ಭರ್ಜರಿ ಆಫರ್‌

ಮೀಡ್‌ರೇಂಜ್‌ ದರ ಹಾಗೂ ಆಕರ್ಷಕ ಫೀಚರ್ಸ್‌ ಮೂಲಕ ಮಾರುಕಟ್ಟೆಯ ಗಮನ ಸೆಳೆದಿರುವ ಒನ್‌ಪ್ಲಸ್‌ 15R ಮೊಬೈಲ್‌ ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಬೊಂಬಾಟ್ ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಮೊಬೈಲ್‌ 12GB RAM + 256GB ಸ್ಟೋರೇಜ್ ವೇರಿಯಂಟ್‌ ಬೆಲೆ 61,000 ರೂ.ಗಳು ಆಗಿದ್ದು, ಆದರೆ ಆಫರ್‌ನಲ್ಲಿ ಪ್ರಸ್ತುತ ಈ ಮೊಬೈಲ್‌ 56,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಇನ್ನು ಈ ಮೊಬೈಲ್‌ ಅನ್ನು ಗ್ರಾಹಕರು ವೈಲೇಟ್, ಮಿಂಟ್ ಬ್ರೀಜ್ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಸಬಹುದು. ಒನ್‌ಪ್ಲಸ್‌ 15R ಸ್ಮಾರ್ಟ್‌ಫೋನ್‌ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

OnePlus 15R

ಒನ್‌ಪ್ಲಸ್‌ 15R ಮೊಬೈಲ್‌ ಫೀಚರ್ಸ್‌ ಹೀಗಿವೆ

ಒನ್‌ಪ್ಲಸ್‌ 15R ಮೊಬೈಲ್‌ 165Hz ರಿಫ್ರೆಶ್ ರೇಟ್‌ ಸೌಲಭ್ಯದ ಜೊತೆಗೆ 6.83 ಇಂಚಿನ 1.5K AMOLED ಡಿಸ್‌ಪ್ಲೇ ಅನ್ನು ಹೊಂದಿದೆ. ಇದರ ಸ್ಕ್ರೀನ್‌ 2800 x 1272 ಪಿಕ್ಸಲ್‌ ರೆಸಲ್ಯೂಶನ್ ಅನ್ನು ಪಡೆದುಕೊಂಡಿದೆ. ಈ ಮೊಬೈಲ್‌ ಸ್ನಾಪ್‌ಡ್ರಾಗನ್ 8 ಜೆನ್ 5 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಅನುಗುಣವಾಗಿ Android 16 ಸಪೋರ್ಟ್‌ ಒಳಗೊಂಡಿದೆ. ಅಲ್ಲದೇ ಇದು 12GB + 256 GB ಹಾಗೂ 12GB + 512 GB ಸ್ಟೋರೇಜ್‌ ಆಯ್ಕೆಯನ್ನು ಒಳಗೊಂಡಿದೆ.

ಇನ್ನು ಒನ್‌ಪ್ಲಸ್‌ 15R ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದುಕೊಂಡಿದೆ. ಈ ಫೋನ್ 50MP ಪ್ರಾಥಮಿಕ ಕ್ಯಾಮೆರಾ ಹೊಂದಿರುವ ಜೊತೆಗೆ 8MP ಅಲ್ಟ್ರಾ ವೈಡ್‌ ಸೆನ್ಸಾರ್‌ ಸೆಕೆಂಡರಿ ಕ್ಯಾಮೆರಾ ಪಡೆದಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಫೋನ್‌ 32MP ಕ್ಯಾಮೆರಾವನ್ನು ಒಳಗೊಂಡಿದೆ. 4K 120fps ವಿಡಿಯೋ ಸಪೋರ್ಟ್‌ ಸಹ ಇದೆ. ಅಲ್ಲದೇ ನೀರು ಹಾಗೂ ಧೂಳು ನಿರೋಧಕತೆಗಾಗಿ IP68/69 ರೇಟಿಂಗ್‌ ಸೌಲಭ್ಯ ಸಹ ಒಳಗೊಂಡಿದೆ. ಹಾಗೆಯೇ ಈ ಫೋನ್‌ 7,400mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 80W SUPERVOOC ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಪಡೆದಿದೆ.

Disclosure: This Article Contains Affiliate Links

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile