365 ದಿನಗಳ ವ್ಯಾಲಿಡಿಟಿ ಒಳಗೊಂಡ Airtel ಟೆಲಿಕಾಂನ ಅತ್ಯುತ್ತಮ ರೀಚಾರ್ಜ್‌ ಪ್ಲಾನ್‌ ಇಲ್ಲಿದೆ!

HIGHLIGHTS

ಏರ್‌ಟೆಲ್‌ ಸಂಸ್ಥೆಯ 3999 ರೂ.ಗಳ ಪ್ಲಾನ್ ವಾರ್ಷಿಕ ಅವಧಿಗೆ ಉತ್ತಮ ಆಯ್ಕೆ

ಏರ್‌ಟೆಲ್‌ ಕಂಪನಿಯ ಈ ಪ್ರೀಪೇಯ್ಡ್‌ ಯೋಜನೆಯಲ್ಲಿ ಆಕರ್ಷಕ ಡೇಟಾ ಸೌಲಭ್ಯ

ಏರ್‌ಟೆಲ್‌ ಟೆಲಿಕಾಂನ ಈ ರೀಚಾರ್ಜ್‌ ಪ್ಲಾನ್‌ನಲ್ಲಿ ಉಚಿತ ವಾಯ್ಸ್‌ ಕರೆ ಪ್ರಯೋಜನ

365 ದಿನಗಳ ವ್ಯಾಲಿಡಿಟಿ ಒಳಗೊಂಡ Airtel ಟೆಲಿಕಾಂನ ಅತ್ಯುತ್ತಮ ರೀಚಾರ್ಜ್‌ ಪ್ಲಾನ್‌ ಇಲ್ಲಿದೆ!

ಜನಪ್ರಿಯ Airtel ಕಂಪನಿಯು ಕೆಲವು ಆಕರ್ಷಕ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ವಿ ಸಂಸ್ಥೆ ಹಾಗೂ ಜಿಯೋ ಟೆಲಿಕಾಂಗಳಿಗೆ ನೇರ ಪೈಪೋಟಿ ನೀಡುತ್ತಾ ಮುನ್ನಡೆದಿದೆ. ಅಲ್ಲದೇ ಬಳಕೆದಾರರ ಅನುಕೂಲಕ್ಕೆ ಅನುಗುಣವಾಗಿ ಭಿನ್ನ ಬೆಲೆಯ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳ ಆಯ್ಕೆಗಳನ್ನು ನೀಡಿದೆ. ಅದರಲ್ಲೂ ಆಕರ್ಷಕ ಡೇಟಾ ಅಥವಾ ವಾರ್ಷಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಕೆಲವು ಪ್ಲಾನ್‌ಗಳು ಹೆಚ್ಚು ಉಪಯುಕ್ತವಾಗಿವೆ. ಅಂತಹ ಯೋಜನೆಗಳ ಪಟ್ಟಿಯಲ್ಲಿ 3999 ರೂ.ಗಳ ಪ್ರೀಪೇಯ್ಡ್‌ ಪ್ಲಾನ್‌ ಸಹ ಗಮನ ಸೆಳೆಯುತ್ತದೆ. ಪ್ರಮುಖವಾಗಿ ಹೆಚ್ಚಿನ ದೈನಂದಿನ ಡೇಟಾ ಅಗತ್ಯವಿರುವವರಿಗೆ ಈ ಯೋಜನೆ ಆಕರ್ಷಕ ಪ್ಲಾನ್ ಎನಿಸಬಹುದು. ಹಾಗಾದರೆ ಏರ್‌ಟೆಲ್‌ ಟೆಲಿಕಾಂನ 3999 ರೂ.ಗಳ ಪ್ಲಾನ್‌ನಲ್ಲಿ ಲಭ್ಯವಿರುವ ಡೇಟಾ ಮತ್ತು ಇತರ ಪ್ರಯೋಜನಗಳ ಮಾಹಿತಿ ಮುಂದೆ ನೋಡೋಣ.

Digit.in Survey
✅ Thank you for completing the survey!

Also Read : 3D ಕರ್ವ್ಡ ಡಿಸ್‌ಪ್ಲೇ ಇರುವ iQOO Z11 ಮೊಬೈಲ್‌ ಬೆಲೆಯಲ್ಲಿ ಬೊಂಬಾಟ್‌ ಇಳಿಕೆ!

Airtel 3999 ರೂ.ಗಳ ಪ್ಲಾನ್‌ ಪ್ರಯೋಜನಗಳು

ಏರ್‌ಟೆಲ್‌ ಟೆಲಿಕಾಂನ 3,999 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 2.5GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಈ ಯೋಜನೆಯು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ನೀಡುತ್ತದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಪ್ರತಿದಿನ 100 SMS ಪ್ರಯೋಜನ ಸಹ ಲಭ್ಯ ಆಗುವುದು. ಇದರೊಂದಿಗೆ ಕೆಲವು ಓಟಿಟಿ ಚಂದಾದಾರಿಕೆಯ ಸೌಲಭ್ಯ ಲಭ್ಯ.

Airtel
Airtel

ಏರ್‌ಟೆಲ್‌ ಸಂಸ್ಥೆಯ 429 ರೂ.ಗಳ ಯೋಜನೆ

ಏರ್‌ಟೆಲ್‌ ಟೆಲಿಕಾಂನ 429 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ 2.5GB ಡೇಟಾ ಪ್ರಯೋಜನ ಸಿಗಲಿದೆ. ಇದರ ಜೊತೆಗೆ ಈ ರೀಚಾರ್ಜ್‌ ಯೋಜನೆಯು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಆಗುವುದು.

ಏರ್‌ಟೆಲ್‌ ಕಂಪನಿಯ 838 ರೂ.ಗಳ ಯೋಜನೆ

ಏರ್‌ಟೆಲ್‌ ಟೆಲಿಕಾಂನ 838 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 3GB ಡೇಟಾ ಸೌಲಭ್ಯ ಸಿಗಲಿದೆ. ಇದರೊಂದಿಗೆ ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಪ್ರಯೋಜನ ನೀಡುತ್ತದೆ. ಹಾಗೆಯೇ ಈ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಪ್ರತಿದಿನ 100 SMS ಸೌಲಭ್ಯ ಕೂಡಾ ಲಭ್ಯ.

ಏರ್‌ಟೆಲ್‌ ಕಂಪನಿಯ 979 ರೂ.ಗಳ ಯೋಜನೆ

ಏರ್‌ಟೆಲ್‌ ಟೆಲಿಕಾಂನ 979 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದೆ. ಇದರ ಜೊತೆಗೆ ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಸೌಲಭ್ಯ ನೀಡುತ್ತದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಪ್ರತಿದಿನ 100 SMS ಪ್ರಯೋಜನ ಸಹ ಲಭ್ಯ ಆಗುವುದು. ಈ ಪ್ಲಾನ್ ಕೆಲವು ಓಟಿಟಿ ಸೌಲಭ್ಯ ಸಹ ಪಡೆದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile