Jio ಕಂಪನಿಯ ಈ ಅಗ್ಗದ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಜಬರ್ದಸ್ತ್ ಪ್ರಯೋಜನಗಳು ಲಭ್ಯ
ಜಿಯೋ ಟೆಲಿಕಾಂನ 649 ರೂ.ಗಳ ಪ್ಲಾನಿನಲ್ಲಿ ಆಕರ್ಷಕ ಸೌಲಭ್ಯಗಳು
ಜಿಯೋ ಟೆಲಿಕಾಂನ ಈ ಯೋಜನೆಯಲ್ಲಿ ಅನಿಯಮಿತ ಡೇಟಾ ಪ್ರಯೋಜನ
ಜಿಯೋದ 649 ರೂ.ಗಳ ಪ್ಲಾನಿನಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಿಗುತ್ತದೆ
ಲೀಡಿಂಗ್ ಟೆಲಿಕಾಂ ಸಂಸ್ಥೆ ಎನಿಸಿಕೊಂಡಿರುವ Jio ಭಿನ್ನ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಈ ಟೆಲಿಕಾಂ ಬಳಕೆದಾರರ ಅಗತ್ಯತೆಗೆ ಅನುಗುಣವಾಗಿ ಹಲವು ಪ್ರೀಪೇಡ್ ಹಾಗೂ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ಸಹ ಪರಿಚಯಿಸಿದೆ. ಆ ಪೈಕಿ ಜಿಯೋ ಟೆಲಿಕಾಂ 649 ರೂ.ಗಳ ಪೋಸ್ಟ್‌ಪೇಯ್ಡ್ ಯೋಜನೆ ಬಹಳ ಆಕರ್ಷಕ ಎನಿಸಿದ್ದು, ಕುಟುಂಬ ಬಳಕೆದಾರರು ಮತ್ತು ಹೆಚ್ಚಿನ ಡೇಟಾ ಬಳಸುವವರಿಗೆ ಉತ್ತಮ ಎನಿಸಿದೆ. ಈ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ಆಕರ್ಷಕ ಡೇಟಾ ಪ್ರಯೋಜನ ಹಾಗೂ ಇತರೆ ಹೆಚ್ಚುವರಿ ಪ್ರಯೋಜನಗಳು ಸಹ ದೊರೆಯುತ್ತದೆ. ಹಾಗಾದರೆ ಜಿಯೋ ಟೆಲಿಕಾಂನ 649 ರೂ.ಗಳ ಪೋಸ್ಟ್‌ಪೇಯ್ಡ್ ಯೋಜನೆಯ ಹಾಗೂ ಇತರೆ ಜನಪ್ರಿಯ ಪ್ಲಾನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Motorola Edge 70 Max ಮೊಬೈಲ್ ಲಾಂಚ್‌ಗೆ ಡೇಟ್ ಫಿಕ್ಸ್! ಪ್ರೀಮಿಯಂ ಲುಕ್‌ನಲ್ಲಿ ಬರಲಿದೆ
Jio 649 ರೂ.ಗಳ ಪೋಸ್ಟ್‌ಪೇಯ್ಡ್ ಯೋಜನೆ
ಜಿಯೋ ಟೆಲಿಕಾಂನ 649 ರೂ.ಗಳ ಪೋಸ್ಟ್‌ಪೇಡ್ ಯೋಜನೆಯಲ್ಲಿ ಒಂದು ರೆಗ್ಯುಲರ್ ಸಿಮ್ ಸಿಗುತ್ತದೆ. ಅಲ್ಲದೇ ಈ ಯೋಜನೆಯಲ್ಲಿ ಅನಿಯಮಿತ ಡೇಟಾ ಸೌಲಭ್ಯ ಸಹ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಲೋಕಲ್, ನ್ಯಾಷನಲ್ ರೋಮಿಂಗ್ ವಾಯ್ಸ್ ಕರೆಗಳ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯವಿರುತ್ತದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಿಗುತ್ತದೆ.

ಸಂಸ್ಥೆಯ ಇತರೆ ಜನಪ್ರಿಯ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳು
ಜಿಯೋ ಟೆಲಿಕಾಂನ 449 ರೂ.ಗಳ ಪೋಸ್ಟ್‌ಪೇಡ್ ಪ್ಲಾನ್‌ನಲ್ಲಿ ಒಂದು ರೆಗ್ಯುಲರ್ ಸಿಮ್ ಜೊತೆಗೆ 3 ಆಡ್ ಆನ್ ಸಿಮ್ ಆಯ್ಕೆ ದೊರೆಯುತ್ತದೆ. ಅಲ್ಲದೇ ಈ ಯೋಜನೆಯಲ್ಲಿ 75GB ಡೇಟಾ ಸೌಲಭ್ಯ ಸಹ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಲೋಕಲ್, ನ್ಯಾಷನಲ್ ರೋಮಿಂಗ್ ವಾಯ್ಸ್ ಕರೆಗಳ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯವಿರುತ್ತದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಿಗುತ್ತದೆ.
ಜಿಯೋ ಕಂಪನಿಯ 749 ರೂ.ಗಳ ಪೋಸ್ಟ್‌ಪೇಡ್ ಯೋಜನೆಯಲ್ಲಿ ಒಂದು ರೆಗ್ಯುಲರ್ ಸಿಮ್ ಸಿಗುತ್ತದೆ. ಅಲ್ಲದೇ ಈ ಯೋಜನೆಯಲ್ಲಿ ಅನಿಯಮಿತ ಡೇಟಾ ಸೌಲಭ್ಯ ಸಹ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಲೋಕಲ್, ನ್ಯಾಷನಲ್ ರೋಮಿಂಗ್ ವಾಯ್ಸ್ ಕರೆಗಳ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯವಿರುತ್ತದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಿಗುತ್ತದೆ. ಇದರೊಂದಿಗೆ ನೆಟ್‌ಫ್ಲಿಕ್ಸ್ ಬೇಸಿಕ್ ಓಟಿಟಿ ಸೌಲಭ್ಯ ಸಹ ಸಿಗಲಿದೆ.
ಜಿಯೋ ಟೆಲಿಕಾಂನ 1549 ರೂ.ಗಳ ಪೋಸ್ಟ್‌ಪೇಡ್ ಪ್ಲಾನ್‌ನಲ್ಲಿ ಒಂದು ರೆಗ್ಯುಲರ್ ಸಿಮ್ ಆಯ್ಕೆ ಲಭ್ಯವಿರುತ್ತದೆ. ಅಲ್ಲದೇ ಈ ಪ್ಲಾನ್‌ನಲ್ಲಿ 300GB ಡೇಟಾ ಸೌಲಭ್ಯ ಸಹ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಲೋಕಲ್, ನ್ಯಾಷನಲ್ ರೋಮಿಂಗ್ ವಾಯ್ಸ್ ಕರೆಗಳ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯವಿರುತ್ತದೆ. ಜೊತೆಗೆ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ಸಿಗುತ್ತದೆ. ಇದರಲ್ಲಿ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಸೇರಿದಂತೆ ಇತರೆ ಓಟಿಟಿ ಚಂದಾದಾರಿಕೆಯ ಅವಕಾಶ ಲಭ್ಯವಾಗಲಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
