Motorola Edge 70 Max ಮೊಬೈಲ್‌ ಲಾಂಚ್‌ಗೆ ಡೇಟ್‌ ಫಿಕ್ಸ್‌! ಪ್ರೀಮಿಯಂ ಲುಕ್‌ನಲ್ಲಿ ಬರಲಿದೆ

HIGHLIGHTS

ಸದ್ಯದಲ್ಲೇ ಭಾರತಕ್ಕೆ ಎಂಟ್ರಿ ಕೊಡಲಿದೆ ಮೊಟೊರೊಲಾ ಎಡ್ಜ್‌ 70 ಮ್ಯಾಕ್ಸ್

ಮೊಟೊರೊಲಾ ಎಡ್ಜ್‌ 70 ಮ್ಯಾಕ್ಸ್ ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದೆ

ಮೊಟೊರೊಲಾ ಎಡ್ಜ್‌ 70 ಮ್ಯಾಕ್ಸ್ ಫೋನ್‌ 7,100mAh ಬ್ಯಾಟರಿ ಬ್ಯಾಕ್‌ಅಪ್‌ನಲ್ಲಿ ಲಗ್ಗೆ ಇಡಲಿದೆ

Motorola Edge 70 Max ಮೊಬೈಲ್‌ ಲಾಂಚ್‌ಗೆ ಡೇಟ್‌ ಫಿಕ್ಸ್‌! ಪ್ರೀಮಿಯಂ ಲುಕ್‌ನಲ್ಲಿ ಬರಲಿದೆ

ಜನಪ್ರಿಯ ಮೊಟೊರೊಲಾ ಮೊಬೈಲ್ ಸಂಸ್ಥೆಯು ದೇಶೀಯ ಮಾರುಕಟ್ಟೆಗೆ ಹೊಸದಾಗಿ Motorola Edge 70 Max ಸ್ಮಾರ್ಟ್‌ಫೋನ್ ಅನ್ನು ಇದೇ ಜುಲೈ 15 ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಹೊಸ ಸ್ಮಾರ್ಟ್‌ಫೋನ್ ಲಾಂಚ್‌ ಕುರಿತು ಫೋನ್‌ನ ಮೀಸಲಾದ ಫ್ಲಿಪ್‌ಕಾರ್ಟ್ ತಾಣದಲ್ಲಿ ಮೈಕ್ರೋಸೈಟ್ ಮೂಲಕ ಈ ಘೋಷಣೆ ಮಾಡಲಾಗಿದೆ. ಅಂದಹಾಗೆ ಎಂಟ್ರಿ ಕೊಡಲಿರುವ ಈ ಮೊಬೈಲ್‌ ಸ್ನಾಪ್‌ಡ್ರಾಗನ್ 8 ಜನ್ 5 SoC ಚಿಪ್‌ಸೆಟ್‌ ಪ್ರೊಸೆಸರ್‌ನಲ್ಲಿ ಕೆಲಸ ಮಾಡುವ ನಿರೀಕ್ಷೆಗಳು ಇವೆ. ಇನ್ನು ಈ ಸ್ಮಾರ್ಟ್‌ಫೋನ್‌ 7,100mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರುವುದು ಬಹುತೇಕ ಕನ್ಫರ್ಮ್‌ ಆಗಿದೆ. ಹಾಗಾದರೆ ಮೊಟೊರೊಲಾ ಎಡ್ಜ್‌ 70 ಮ್ಯಾಕ್ಸ್ ಮೊಬೈಲ್‌ನ ಲಾಂಚ್‌ ಮಾಹಿತಿ, ನಿರೀಕ್ಷಿತ ಬೆಲೆ, ಫೀಚರ್ಸ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : BSNL ಟೆಲಿಕಾಂನ ಈ ಬಜೆಟ್‌ ಪ್ಲಾನ್‌ನಲ್ಲಿ 300 ದಿನಗಳ ವ್ಯಾಲಿಡಿಟಿ ಜೊತೆಗೆ ಆಕರ್ಷಕ ಡೇಟಾ

Motorola Edge 70 Max ಬಿಡುಗಡೆಗೆ ದಿನಾಂಕ ಫಿಕ್ಸ್‌

ಮೊಟೊರೊಲಾ ಮೊಬೈಲ್‌ ಸಂಸ್ಥೆಯ ಹೊಸ ಮೊಟೊರೊಲಾ ಎಡ್ಜ್‌ 70 ಮ್ಯಾಕ್ಸ್ ಮೊಬೈಲ್‌ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಮೊಟೊರೊಲಾದ ಈ ಫೋನ್‌ ಇದೇ ಜುಲೈ 15 ರಂದು ಬಿಡುಗಡೆ ಆಗುವುದು ಖಚಿತವಾಗಿದೆ. ಲಾಂಚ್‌ ಕುರಿತು ಫೋನ್‌ನ ಮೀಸಲಾದ ಫ್ಲಿಪ್‌ಕಾರ್ಟ್ ತಾಣದಲ್ಲಿ ಮೈಕ್ರೋಸೈಟ್ ತೆರೆಯಲಾಗಿದೆ. ಬಿಡುಗಡೆ ಬಳಿಕ ಫ್ಲಿಪ್‌ಕಾರ್ಟ್‌ ಮೂಲಕ ಮಾರಾಟ ಪ್ರಾರಂಭಿಸಲಿದೆ.

Motorola Edge 70 Max

ಮೊಟೊರೊಲಾ ಎಡ್ಜ್‌ 70 ಮ್ಯಾಕ್ಸ್ ನಿರೀಕ್ಷಿತ ಫೀಚರ್ಸ್‌ ಮಾಹಿತಿ

ಮುಂಬರುವ ಮೊಟೊರೊಲಾ ಎಡ್ಜ್‌ 70 ಮ್ಯಾಕ್ಸ್ ಫೋನ್‌ Quad HD+ LTPO ಡಿಸ್‌ಪ್ಲೇ ಅನ್ನು ಹೊಂದಿರುವ ಸಾಧ್ಯತೆಯಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 144Hz ರಿಫ್ರೆಶ್ ರೇಟ್‌ ಜೊತೆಗೆ 7,000 nits ವರೆಗಿನ ಹೈ ಬ್ರೈಟ್‌ನೆಸ್ ಸೌಲಭ್ಯ ಪಡೆದಿರಬಹುದು. ಹಾಗೆಯೇ ಇದರ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಪಡೆದಿರಲಿದೆ. ಅಲ್ಲದೇ ಇದು ಸ್ನಾಪ್‌ಡ್ರಾಗನ್ 8 ಜನ್ 5 SoC ಚಿಪ್‌ಸೆಟ್‌ ಪ್ರೊಸೆಸರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಗಳಿವೆ. ಇದಕ್ಕೆ ಪೂರಕವಾಗಿ ಹೈ ಎಂಡ್‌ ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿರಲಿದೆ.

ಮೊಟೊರೊಲಾ ಎಡ್ಜ್‌ 70 ಮ್ಯಾಕ್ಸ್ ಮೊಬೈಲ್‌ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಒಳಗೊಂಡಿರುವ ಸೂಚನೆಗಳು ಇವೆ. ಈ ಫೋನಿನ 7,100mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರುವುದು ಪಕ್ಕಾ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ 90W ಫಾಸ್ಟ್‌ ಚಾರ್ಜರ್‌ ಸೌಲಭ್ಯ ಪಡೆದಿರಲಿದೆ. ಅಲ್ಲದೇ 25W ವೈರಲೆಸ್‌ ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆ ಪಡೆದಿರಲಿದೆ. ಇದು ಫ್ಲಾಟ್-ಎಡ್ಜ್ ಲುಕ್ ಅನ್ನು ಒಳಗೊಂಡಿರಲಿದ್ದು, ಸ್ಕ್ವೇರ್ ಕ್ಯಾಮೆರಾ ಮಾಡ್ಯೂಲ್‌ ಪಡೆದಿರಲಿದೆ. ಇದಲ್ಲದೆ ಈ ಫೋನ್‌ ಅಲ್ಯೂಮಿನಿಯಂ ಫ್ರೇಮ್ ಮತ್ತು ಪ್ರೀಮಿಯಂ ಲುಕ್ ಪಡೆದಿರಲಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile