ಜಿಯೋದ ಈ ಪ್ಲಾನಿನಲ್ಲಿ 70GB Data ಸಿಗುತ್ತೆ! ಯೋಜನೆಯ ಬೆಲೆ 399 ರೂ.ಗಳು

HIGHLIGHTS

ಜಿಯೋದ ಈ ಯೋಜನೆಯಲ್ಲಿ ಒಟ್ಟು 70GB ಡೇಟಾ ಲಭ್ಯ

ಜಿಯೋ ಟೆಲಿಕಾಂನ 399 ರೂ.ಗಳ ಪ್ಲಾನ್‌ನಲ್ಲಿ 28 ದಿನಗಳ ವ್ಯಾಲಿಡಿಟಿ

ಜಿಯೋದ ಈ ಯೋಜನೆಯಲ್ಲಿ ಪ್ರತಿದಿನ 100 SMS ದೊರೆಯುತ್ತದೆ

ಜಿಯೋದ ಈ ಪ್ಲಾನಿನಲ್ಲಿ 70GB Data ಸಿಗುತ್ತೆ! ಯೋಜನೆಯ ಬೆಲೆ 399 ರೂ.ಗಳು

ಭಾರತೀಯ ಟೆಲಿಕಾಂ ವಲಯದಲ್ಲಿ Jio ಸಂಸ್ಥೆಯು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಹಲವು ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿ ಯೋಜನೆಗಳನ್ನು ಪರಿಚಯಿಸಿರುವ ಜಿಯೋ ಆಕರ್ಷಕ ಡೇಟಾ, ಓಟಿಟಿ ಪ್ಲಾನ್‌ಗಳ ಲಿಸ್ಟ್‌ ಸಹ ಒಳಗೊಂಡಿದೆ. ಜಿಯೋ ಟೆಲಿಕಾಂನ ಯೋಜನೆಗಳ ಲಿಸ್ಟ್‌ನಲ್ಲಿ ಕಡಿಮೆ ದರದಲ್ಲಿ ದೈನಂದಿನ ಡೇಟಾ ಸೌಲಭ್ಯ ಪಡೆದ ಯೋಜನೆಗಳು ಸೇರಿವೆ. ಅದಾಗ್ಯೂ, ಕಡಿಮೆ ಬೆಲೆಯಲ್ಲಿ ಆಕರ್ಷಕ ವ್ಯಾಲಿಡಿಟಿ ಜೊತೆಗೆ ಪ್ರತಿದಿನ Data ಸೌಲಭ್ಯ ಪಡೆದಿರುವ ಪ್ರೀಪೇಯ್ಡ್‌ ಪ್ಲಾನ್‌ಗಳು ಬೇಡಿಕೆಯಲ್ಲಿ ಇವೆ. ಆ ಪೈಕಿ ಜಿಯೋ ಟೆಲಿಕಾಂನ 399 ರೂ.ಗಳ ಬೆಲೆಯ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆ ಬಜೆಟ್‌ ಪ್ರೈಸ್‌ನ ಮೂಲಕ ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿದೆ. ಈ ಬಜೆಟ್ ಬೆಲೆಯ ಯೋಜನೆಯು ಡೇಟಾ ಸೌಲಭ್ಯ ಪಡೆದುಕೊಂಡಿರುವ ಜೊತೆಗೆ 28 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ. ಹಾಗಾದರೆ ಜಿಯೋ ಟೆಲಿಕಾಂನ 399 ರೂ.ಗಳ ಯೋಜನೆಯ ಹಾಗೂ ಇತರೆ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : 32MP ಸೆಲ್ಫಿ ಕ್ಯಾಮೆರಾ ಇರುವ Realme GT 7T ಸ್ಮಾರ್ಟ್‌ಫೋನ್‌ ಈಗ ಆಫರ್‌ನಲ್ಲಿ ಲಭ್ಯ!

ಜಿಯೋ ಟೆಲಿಕಾಂನ 399 ರೂ.ಗಳ ಪ್ಲಾನ್‌: 70GB Data

ಜಿಯೋ ಟೆಲಿಕಾಂನ 399 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್‌ ಯೋಜನೆಯಲ್ಲಿ ಪ್ರತಿದಿನ 2.5GB ಡೇಟಾ ಲಭ್ಯವಾಗಲಿದ್ದು, ಒಟ್ಟು 70GB Data ಪ್ರಯೋಜನ ಸಿಗಲಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್‌ ಕರೆಯ ಸೌಲಭ್ಯ ಸಹ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರಲಿದೆ. ಹಾಗೆಯೇ JioGames Mobile, FanCode, JioHotstar, JioTV ಹಾಗೂ JioAICloud ಚಂದಾದಾರಿಕೆ ಸೌಲಭ್ಯ ಲಭ್ಯವಾಗಲಿದೆ.

Jio Data

ಇತರೆ ಆಕರ್ಷಕ ಯೋಜನೆಗಳ ಮಾಹಿತಿ

ಜಿಯೋ ಟೆಲಿಕಾಂನ 459 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 28 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್‌ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ (+5GB) ಪ್ರಯೋಜನ ಸಿಗಲಿದ್ದು, ಒಟ್ಟು 61GB Data ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್‌ ಕರೆಯ ಸೌಲಭ್ಯ ಸಹ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರಲಿದೆ. ಹಾಗೆಯೇ JioTV ಹಾಗೂ JioAICloud ಚಂದಾದಾರಿಕೆ ಸೌಲಭ್ಯ ಲಭ್ಯವಾಗಲಿದೆ.

ಜಿಯೋ ಟೆಲಿಕಾಂನ 450 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 36 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್‌ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದ್ದು, ಒಟ್ಟು 72GB Data ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಈ ರೀಚಾರ್ಜ್‌ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್‌ ಕರೆಯ ಸೌಲಭ್ಯ ಸಹ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಲಭ್ಯ ಇರಲಿದೆ. ಹಾಗೆಯೇ JioTV ಹಾಗೂ JioAICloud ಚಂದಾದಾರಿಕೆ ಸೌಲಭ್ಯ ಲಭ್ಯವಾಗಲಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo